ಭತ್ತದ ಗದ್ದೆಯಲ್ಲಿಯ ಮಂಗಣ್ಣನ ಈ ತಮಾಷೆಯ ನಡಿಗೆ ಒಮ್ಮೆ ನೋಡಿಯೇ ಬಿಡಿ ಈ ವೈರಲ್ ವಿಡಿಯೋದಲ್ಲಿ..!
ಪ್ರಾಣಿಗಳು ಸಹ ಮನುಷ್ಯನ ಹಾಗೆ ಅನೇಕ ರೀತಿಯ ತುಂಟಾಟಗಳನ್ನು ಮಾಡಿದ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ನೋಡಿದ್ದೇವೆ. ಅದರಲ್ಲಿ ಮಂಗ ಮಾಡುವ ತುಂಟಾಟಗಳು ವಿಶೇಷವಾಗಿ ನೆಟ್ಟಿಗರಿಗೆ ಆಕರ್ಷಿಸುತ್ತವೆ. ಸದ್ಯ ಮಂಗನ ವಿಚಿತ್ರ ಹಾಗೂ ಅಷ್ಟೇ ತಮಾಷೆಯ ನಡಿಗೆಯ ವಿಡಿಯೋ ಒಂದನ್ನು ಟ್ವಿಟರ್ ನಲ್ಲಿ ಇಂಡಿಯನ್ ಫಾರೆಸ್ಟ್ ಆಫೀಸರ್ ಆದ ಸುಶಾಂತ್ ನಂದ ಅವರು ತಮ್ಮದೇ ಟ್ವಿಟರ್ ಹ್ಯಾಂಡಲ್ ನಿಂದ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಪ್ರಸ್ತುತ ಈ ವಿಡಿಯೋ ಈಗಾಗಲೇ ಸಾವಿರಾರು ಜನರು ವೀಕ್ಷಿಸಿದ್ದು ಸಾಕಷ್ಟು ಜನರು ಲೈಕ್ ಸಹ ಮಾಡಿದ್ದಾರೆ.
ಈ ವಿಡಿಯೋದಲ್ಲಿ ಒಂದು ಭತ್ತದ ಗದ್ದೆ ಕಂಡು ಬರುತ್ತಿದೆ. ಬತ್ತದ ಗದ್ದೆಯ ಬದಿಯಲ್ಲಿರುವ ಏರಿಯ ಮೇಲಿಂದ ಮಂಗ ಒಂದು ಹಾಯ್ದು ಹೋಗುವಾಗ ತುಂಬಾ ತಮಾಷೆಯಾಗಿ ಚಲಿಸಿದೆ. ಆ ದೃಶ್ಯವೂ ಯಾರೋ ಒಬ್ಬರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ವಿಡಿಯೋದಲ್ಲಿ ಕಂಡು ಬರುವ ಹಾಗೆ ಮಂಗವು ಭತ್ತದ ಗದ್ದೆಯ ಏರಿನ ಮೇಲೆ ನಡೆಯುವಾಗ ಒಮ್ಮೆಲೇ ಹಿಂದಿನ ಎರಡು ಕಾಲುಗಳ ಜೊತೆಗೆ ತನ್ನ ದೇಹವನ್ನೇ ಮೇಲೆತ್ತಿ ಬರೀ ಮುಂದಿನ ಎರಡೂ ಕಾಲುಗಳ ಮೇಲೆ ಸುಮಾರು 12 ಸೆಕೆಂಡುಗಳವರೆಗೆ ನಡೆಯುತ್ತಾ ಹೋಗಿದೆ. ಹೀಗೆ ನಡೆಯುವಾಗ ಮಂಗವು ಪರ್ಫೆಕ್ಟ್ ಬ್ಯಾಲೆನ್ಸ್ ಪ್ರದರ್ಶಿಸಿದೆ. ಪ್ರಸ್ತುತ ದೃಶ್ಯವೂ ನೋಡಲು ತುಂಬಾನೇ ಫನ್ನಿಯಾಗಿದೆ.
ನೋಡಿ ಈ ವಿಡಿಯೋ…
Whatever makes your soul happy…
Do that☺️☺️ pic.twitter.com/XLG7jaJGRp— Susanta Nanda IFS (@susantananda3) August 29, 2022
ಈ ವಿಡಿಯೋವನ್ನು ನೋಡಿದ ನೇಟಿಜನ್ಸ್ ಗಳು ತಮ್ಮ ಕಮೆಂಟ್ಗಳಲ್ಲಿ ಅನೇಕ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಒಬ್ಬನು ಈ ಮಂಗವು ದಿನಾಲು ಯೋಗ ಮಾಡುತ್ತದೆ ಎಂದಿದ್ದಾನೆ. ಇನ್ನೊಬ್ಬ ಯೂಸರ್ ಇದು ಮಂಗಗಳ ಅಕ್ಷಯ್ ಕುಮಾರ್ ಆಗಿದೆ ಎಂದಿದ್ದಾನೆ.