ಏಷಿಯಾದ ನಂಬರ್ ಒನ್ ಸಿರಿವಂತ ಗೌತಮ್ ಅದಾನಿ ಅವರ ಫ್ಯಾಮಿಲಿ ಬಗ್ಗೆ ಮಾಹಿತಿ ಉಂಟಾ? ಪತ್ನಿ ಡೆಂಟಿಸ್ಟ್ ಮತ್ತು ಮಗ…

ಅದಾನಿ ಗ್ರೂಪ್ ನ ಚೇರ್ಮನ್ ಗೌತಮ್ ಅದಾನಿಯವರು ಸದ್ಯ ಜಗತ್ತಿನ ಮೂರನೆಯ ನಂಬರ್ ನ ಶ್ರೀಮಂತರಾಗಿದ್ದಾರೆ. ಇವರು ಇವರು ಭಾರತದಲ್ಲಷ್ಟೇ ಅಲ್ಲ ಏಷ್ಯಾದಲ್ಲಿಯೇ ನಂಬರ್ 1 ಶ್ರೀಮಂತ ಪಟ್ಟವನ್ನು ಧರಿಸಿದ್ದಾರೆ. ಜಗತ್ತಿನಲ್ಲಿಯ ಶ್ರೀಮಂತರಿಗೆ ಹೋಲಿಸಿದಾಗ ಅದಾನಿಯವರು ಬರೀ ಎರಡೇ ಎರಡು ಹೆಜ್ಜೆ ಅಷ್ಟೇ ಹಿಂದೆ ಇದ್ದಾರೆ. ಕಳೆದ ಕೆಲವೇ ವರ್ಷಗಳಲ್ಲಿ ಅದಾನಿ ಗ್ರೂಪ್ ಬಿಜಿನೆಸ್ ನಲ್ಲಿ ತುಂಬಾ ವಿಸ್ತಾರವನ್ನು ಮಾಡಿಕೊಂಡಿದೆ. ಇಷ್ಟೆಲ್ಲ ಗುರುತಿದ್ದರೂ ಅವರ ಕುಟುಂಬದ ಬಗ್ಗೆ ನಿಮಗೆ ಏನಾದರೂ ಮಾಹಿತಿ ಇದೆಯೇ? ಇಲ್ಲವಾದರೆ ಕೆಲವು ಮುಖ್ಯ ಮಾಹಿತಿಯನ್ನು ಈ ಲೇಖನದಲ್ಲಿ ಓದಬಹುದು. ಬನ್ನಿ ಅವರ ಫ್ಯಾಮಿಲಿ ಹೇಗಿದೆ ಮತ್ತು ಅವರ ಕುಟುಂಬದಲ್ಲಿ ಯಾರ್ಯಾರು ಇದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ.

ಗೌತಮ್ ಅದಾನಿಯವರ ಬಗ್ಗೆ ಬಿಜಿನೆಸ್ ಹೊರತಾಗಿ ಮಹತ್ವದ ವಿಷಯ ಹೇಳಬೇಕೆಂದರೆ ಇವರು ಕಾಲೇಜ್ ಡ್ರಾಪ್ ಔಟ್ ಸ್ಟೂಡೆಂಟ್ ಇದ್ದಾರೆ. ಮೊಟ್ಟ ಮೊದಲು ತಂದೆಯ ಬಟ್ಟೆ ಅಂಗಡಿಯಲ್ಲಿ ಕೆಲಸವನ್ನು ಸ್ಟಾರ್ಟ್ ಮಾಡಿದವರು. ಇನ್ನೊಂದು ವಿಶೇಷ ಸತ್ಯವೇನೆಂದರೆ, 2008 ರಲ್ಲಿ ಮುಂಬಯಿ ಮೇಲೆ ನಡೆದ ಉಗ್ರವಾದಿಗಳು ಅಟ್ಯಾಕ್ ಮಾಡಿದ ಸಂದರ್ಭದಲ್ಲಿ ತಾಜ್ ಹೋಟೆಲ್ ನಲ್ಲಿ ಬದುಕುಳಿದವರ ಅದೃಷ್ಟವಾದಿಗಳಲ್ಲಿ ಇವರೂ ಒಬ್ಬರು.

ಗೌತಮ್ ಅದಾನಿ ಅವರ ಪತ್ನಿಯ ಹೆಸರು ಪ್ರೀತಿ ಅದಾನಿ ಆಗಿದೆ. ಇವರು ಡೆಂಟಿಸ್ಟ್ ಆಗಿದ್ದಾರೆ. ಈ ಜೋಡಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅವರ ಹೆಸರು ಕರಣ್ ಮತ್ತು ಜೀತ್ ಆಗಿದೆ. ಇವರಲ್ಲಿ ದೊಡ್ಡ ಮಗನಾದ ಕರಣ್ ಅದಾನಿ ಮದುವೆ ಮಾಡಿಕೊಂಡಿದ್ದಾರೆ. ಹೆಂಡತಿಯ ಹೆಸರು ಪರೀಧಿ ಇದ್ದು ಈಕೆ ಸೈರಿಲ್ ಶ್ರಾಫ್ ಅವರ ಮಗಳಾಗಿದ್ದಾಳೆ. ಕರಣ್ ಅದಾನಿ ಈಗ ಅದಾನಿ ಪೋರ್ಟ್ಸ್ CEO ಆಗಿದ್ದಾರೆ. ಇವರಿಗೆ ಒಂದು ಹುಡುಗಿಯಾಗಿದ್ದು ಆಕೆ ಹೆಸರು ಅನುರಾಧ ಆಗಿದೆ. ಇನ್ನು ಜೀತ್ ಅದಾನಿಯವರ ಬಗ್ಗೆ ಹೇಳಬೇಕಾದರೆ ಅದಾನಿ ಗ್ರೂಪ್ ಆಫ್ ಫೈನಾನ್ಸನ ವೈಸ್ ಪ್ರೆಸಿಡೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.