ಸೀರೆಯನ್ನು ತೊಟ್ಟು ಅತ್ತಿಗೆಯರು ಮಾಡಿದ ಡಾನ್ಸ್ ಸ್ಟೆಪ್ ಗಳು ಎಬ್ಬಿಸಿದವು ಸೋ. ಮೀ. ದಲ್ಲಿ ಧೂಳ್! ನೋಡಿ ಈ ಸೂಪರ್ ವಿಡಿಯೋ.
ಸೋಶಿಯಲ್ ಮೀಡಿಯಾದಲ್ಲಿ ಒಬ್ಬರಿಗಿಂತ ಒಬ್ಬರನ್ನು ಮೀರಿಸುವ ಸೂಪರ್ ಡಾನ್ಸ್ ಗಳ ವಿಡಿಯೋಗಳು ಲೆಕ್ಕವಿಲ್ಲದಷ್ಟು ನೋಡಲು ಸಿಗುತ್ತವೆ. ಇವುಗಳಲ್ಲಿ ಕೆಲವು ವಿಡಿಯೋಗಳು ಮನಮುಟ್ಟುತ್ತವೆ. ಇನ್ನೂ ಕೆಲವು ವಿಡಿಯೋಗಳಂತೂ ಎಷ್ಟು ಸಲ ನೋಡಿದರೂ ಮತ್ತೊಮ್ಮೆ ನೋಡಬೇಕೆನಿಸುತ್ತದೆ. ಸದ್ಯಕ್ಕೆ ನಮ್ಮ ಭಾರತದಲ್ಲಂತೂ ಯಾವುದೇ ಕಾರ್ಯಕ್ರಮಗಳಿರಲಿ ಡಾನ್ಸ್ ಮುಖ್ಯವಾಗಿ ಬಿಟ್ಟಿದೆ. ಇದೇ ರೀತಿ ಕಾರ್ಯಕ್ರಮ ಒಂದರಲ್ಲಿ ಯುವತಿಯರು ಮಾಡಿದ ಸುಂದರವಾದ ಡ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ (ಸೋ. ಮೀ.) ನಿಜಕ್ಕೂ ಧೂಳ್ ಎಬ್ಬಿಸುತ್ತಿದೆ. ಪ್ರಸ್ತುತ ವಿಡಿಯೋದಲ್ಲಿ ಮೂವರು ಯುವತಿಯರು ಬಿಂದಾಸಾಗಿ ತಮ್ಮ ಸೊಂಟವನ್ನು ಬಳುಕಿಸಿದ್ದಾರೆ.
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮೂವರು ಯುವತಿಯರು ಲೋ ವೇಸ್ಟ್ ಸೀರೆಯನ್ನು ತೊಟ್ಟು ಬೆಲ್ಲಿ ಡ್ಯಾನ್ಸ್ ಮಾಡುತ್ತಿರುವ ಹಾಗೆ ಕಂಡು ಬರುತ್ತಿದೆ. ಡ್ಯಾನ್ಸ್ ಮಾಡುವಾಗ ಈ ಯುವತಿಯರು ಮೊದಲು ಅಲ್ಲು ಅರ್ಜುನ್ ಅವರು ನಟಿಸಿದ ಪಾಪ್ಯುಲರ್ ಫಿಲಂ ‘ಪುಷ್ಪ’ ಚಿತ್ರದ ಹಾಡಿಗೆ ನಂತರ ಅಕ್ಷಯ್ ಕುಮಾರ್ ಹಾಗೂ ರವಿನಾ ಟಂಡನ್ ಜೊತೆಯಾಗಿ ನಟಿಸಿದ ರೇನ್ ಡಾನ್ಸ್, ‘ಟಿಪ್ ಟಿಪ್ ಬರಸಾ ಪಾನಿ’ ಈ ಎರಡೂ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಮತ್ತು ನೋಡುಗರಿಗೆ ಹೌಹಾರಿಸಿದ್ದಾರೆ. ಪ್ರಸ್ತುತ ಈ ಮೂವರು ಯುವತಿಯರು ಯಾವುದೋ ಒಂದು ಕಾರ್ಯಕ್ರಮದಲ್ಲಿ ಅತಿಥಿಗಳ ಮುಂದೆ ತಮ್ಮ ಪರ್ಫಾರ್ಮೆನ್ಸ್ ತೋರಿಸುತ್ತಿರುವುದು ಕಂಡು ಬರುತ್ತಿವೆ.
ನೋಡಿ ಈ ವಿಡಿಯೋ…
ಸೋಶಿಯಲ್ ಮೀಡಿಯಾದ ಪ್ಲಾಟ್ ಫಾರ್ಮ್ ಆಗ youtube ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಯುವತಿಯರು ಭಾರತೀಯ ಉಡುಗೆಯಲ್ಲಿ ಬೆಲ್ಲಿ ಡಾನ್ಸ್ ಮಾಡುತ್ತಿರುವುದು ಕಂಡು ಬರುತ್ತಿದೆ. ಮತ್ತು ಈ ಡ್ಯಾನ್ಸನ್ನು ತುಂಬಾ ಅದ್ಭುತವಾಗಿ ಪ್ರೆಸೆಂಟ್ ಮಾಡಿದ್ದಾರೆ. ಪ್ರಸ್ತುತ ವಿಡಿಯೋವನ್ನು ಇಲ್ಲಿಯವರೆಗೆ 2 ಲಕ್ಷಕ್ಕಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ವಿಡಿಯೋ ನೋಡಿದ ನಂತರ ಯೂಸರ್ಸ್ ಗಳು ಅನೇಕ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.