IND-PAK ಪಂದ್ಯ; ಪ್ರೆಶ್ಶರ್ ಮೊಮೆಂಟ್ನಲ್ಲಿ ಹಾರ್ದಿಕ್ ಫುಲ್ ಕಾನ್ಫಿಡೆನ್ಸ್ ರಿಯಾಕ್ಷನ್; ‘ತೇರಾ ಭಾಯಿ ಸಂಭಾಲ್ ಲೇಗಾ’ ವಿಡಿಯೋ ವೈರಲ್…
ಸ್ಟಂಪ್ ಗಳಲ್ಲಿರುವ ಮೈಕ್ ನಿಂದಾಗಿ ಎಷ್ಟೋ ಬಾರಿ ಮೈದಾನದಲ್ಲಿ ನಡೆದ ಅನೇಕ ರೋಚಕ ಸಂಭಾಷಣೆಗಳು ಸಹಜವಾಗಿ ಕೇಳಿ ಬರುತ್ತವೆ. ಮೊನ್ನೆ ರವಿವಾರ ಭಾರತ-ಪಾಕಿಸ್ತಾನ ಮಧ್ಯದ ಏಷ್ಯಾ ಕಪ್ ಪಂದ್ಯದಲ್ಲಿ ನಡೆದ ಸಂಭಾಷಣೆಯೊಂದು ಸದ್ಯ ಜೋರಾಗಿ ವೈರಲ್ ಆಗುತ್ತಿದೆ. ಕೊನೆಯ ಎರಡು ಓವರ್ ಗಳಲ್ಲಿ ಭಾರತಕ್ಕೆ ಗೆಲ್ಲಲು 21 ರನ್ಗಳ ಅವಶ್ಯಕತೆ ಇತ್ತು. ಆಗ 19ನೇ ಓವರ್ ನಲ್ಲಿ 14 ರನ್ ಗಳು ಬಂದ ನಂತರ ಗೆಲ್ಲಲು ಕೊನೆಯ ಓವರ್ ನಲ್ಲಿ ಕೇವಲ ಏಳು ರನ್ಗಳ ಅವಶ್ಯಕತೆ ಇತ್ತು.
ನೋಡಿ ಈ ವಿಡಿಯೋ…
#HardikBadhaai pic.twitter.com/e2DfhplbcF
— Aditya Raj Kaul (@AdityaRajKaul) August 28, 2022
ಆದರೆ ಕೊನೆಯ ಓವರ್ ನ ಮೊದಲ ಬಾರಿಗೆ ರವೀಂದ್ರ ಜಡೇಜಾ ಅವರು ಔಟ್ ಆದ ಕಾರಣ ಪಂದ್ಯ ಮತ್ತಷ್ಟು ರೋಚಕ ಘಟ್ಟಕ್ಕೆ ತಿರುಗಿತು. ಆಗ ಬ್ಯಾಟಿಂಗ್ ಗಾಗಿ ದಿನೇಶ್ ಕಾರ್ತಿಕ್ ಅವರು ಬಂದು ಒಂದು ಸಿಂಗಲ್ ರನ್ ತೆಗೆದು ಹಾರ್ದಿಕ್ ಪಾಂಡ್ಯ ಅವರಿಗೆ ಸ್ಟ್ರೈಕ್ ನೀಡಿದರು. ಆಗ ಹಾರ್ದಿಕ್ ಪಾಂಡ್ಯ ಅವರು ಒಂದು ಡಾಟ್ ಬಾಲ್ ಹಾಕಿದರು. ಇದೇ ಸಂದರ್ಭದಲ್ಲಿ ಹಾರ್ದಿಕ ನೀಡಿದ ರಿಯಾಕ್ಷನ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗುತ್ತಿದೆ. ಈ ಸಂದರ್ಭದಲ್ಲಿ ಹಾರ್ದಿಕ ಅವರು ತಮ್ಮ ಕುತ್ತಿಗೆಯ ಮುಖಾಂತರ ಕೂಲಾಗಿ ಸನ್ನೆ ಮಾಡಿದ ಈ ದೃಶ್ಯ ಸಾಕಷ್ಟು ಭಾರತೀಯ ಅಭಿಮಾನಿಗಳ ಹೃದಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ನೆಟ್ಟಿಗರು ಹಾರ್ದಿಕ್ ಪಾಂಡ್ಯ ಅವರ ಈ ಕಾನ್ಫಿಡೆನ್ಸ್ ಲೆವೆಲ್ ನೋಡಿ ಸಾಕಷ್ಟು ವರ್ಣನೆಯನ್ನು ಮಾಡುತ್ತಿದ್ದಾರೆ.
ಪ್ರಸ್ತುತ ಈ ವಿಡಿಯೋ ಇಲ್ಲಿಯವರೆಗೆ 1.2 ಮಿಲಿಯನ್ ವೇಚನೆಯನ್ನು ಪಡೆದಿದೆ. ಹಾಗೂ 5960 ಲೈಕ್ಸ್ ಗಳನ್ನು ಹೊಂದಿದೆ.