VIDEO: ಬೈಕ್ ಮೇಲಿದ್ದ ಕಳ್ಳರಿಗೆ ಇನ್ಸ್ಟಂಟ್ ಪಾಠ ಕಲಿಸಿದ ಕಾರು ಚಾಲಕ! ಕ್ಷಣದಲ್ಲಿ ಪಲಾಯನ ಗೈದ ಕಳ್ಳರು…
ಈಗಿನ ಕಳ್ಳರು ತುಂಬಾ ಸ್ಮಾರ್ಟ್ ಆಗಿದ್ದಾರೆ ಇವರು ಯಾವಾಗ, ಎಲ್ಲಿ, ಯಾರ ಮೇಲೆ, ಅಟ್ಯಾಕ್ ಮಾಡಿ ಏನು ದೋಚಿಕೊಂಡು ಹೋಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಈ ಕಳ್ಳರಿಗೆ ಸಿಕ್ಕಿಹಾಕಿಕೊಳ್ಳುವ ಭಯವೂ ಇಲ್ಲ ಮತ್ತು ಪೊಲೀಸರ ಭಯವಂತೂ ಮೊದಲೇ ಇಲ್ಲ. ಅದರಲ್ಲೂ ಬೈಕ್ ಮೇಲೆ ಬಂದು ಕಳ್ಳತನ ಮಾಡುವ ಕಳ್ಳರಂತೂ ತುಂಬಾ ಹೆಚ್ಚಾಗಿದ್ದಾರೆ. ಬೈಕ್ ಮೇಲೆ ಸವಾರಿ ಮಾಡಿ ಬಂದ ಕಳ್ಳರು ಕಳ್ಳತನ ಮಾಡಿ ಕ್ಷಣದಲ್ಲಿ ಮಾಯವಾಗುವದನ್ನು ಕರತಲಾಮಲಕ ಮಾಡಿಕೊಂಡಿದ್ದಾರೆ. ಆದರೆ ಇಲ್ಲಿ ನೋಡುವ ವಿಡಿಯೋದಲ್ಲಿ ಬೈಕ್ ಸವಾರರಾದ ಕಳ್ಳರಿಗೆ ಕಾರು ಚಾಲಕನೊಬ್ಬ ಇನ್ಸ್ಟಂಟ್ ಲೆಸೆನ್ ನೀಡಿದ್ದಾನೆ. ಆತ ನೀಡಿದ ಪಾಠ ಸೂಪರ್ ವರ್ಕ್ ಔಟ್ ಆಗಿದೆ. ಮತ್ತು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಅಂಥ ಯಾವ ಕೆಲಸ ಕಾರು ಚಾಲಕ ಮಾಡಿದ್ದಾನೆ ಬನ್ನಿ ನೋಡೋಣ.
ಬೈಕ್ ಸವಾರರಾದ ಕಳ್ಳರು ಯಾರೂ ಇಲ್ಲದ ಏಕಾಂತದ ಲಾಭ ಪಡೆದುಕೊಳ್ಳುವ ಆಸೆಯಿಂದ ಅಲ್ಲಿ ನಿಂತ ಹುಡುಗ ಹುಡುಗಿಯ ಕೆಲವು ವಸ್ತುಗಳನ್ನು ಲೂಟಿ ಮಾಡುವ ಪ್ರಯತ್ನ ಮಾಡಿದ್ದಾರೆ. ಸರಿಯಾಗಿ ಅದೇ ಸಮಯಕ್ಕೆ ಕಳ್ಳರ ಹಿಂದಿನಿಂದ ಒಬ್ಬನು ಕಾರು ತೆಗೆದುಕೊಂಡು ಬರುತ್ತಾನೆ. ಪ್ರಸ್ತುತ ದೃಶ್ಯವನ್ನು ಅರಿತುಕೊಂಡ ಕಾರು ಚಾಲಕ ಎಲ್ಲಿಯೂ ನಿಲ್ಲದೆ ನೇರ ಬೈಕ್ ಮೇಲೆ ಆಸೀನರಾದ ಕಳ್ಳರಿಗೆ ಜೋರಾದ ಡಿಕ್ಕಿ ಹೊಡೆದಿದ್ದಾನೆ. ಈ ಜೋರಾದ ಡಿಕ್ಕಿಗೆ ಬೈಕ್ ಮೇಲೆ ಸವಾರರಾದ ಕಳ್ಳರು ನೆಲಕ್ಕೆ ಬಿದ್ದಿದ್ದಾರೆ. ಈ ಆಕಸ್ಮಿಕ ಹೊಡೆತದಿಂದಾಗಿ ಇಬ್ಬರು ಕಳ್ಳರು ನೆಲಕ್ಕುರಳಿದಾಗ ಒಬ್ಬನಿಗೆ ಕಾಲಿಗೆ ಜೋರಾಗಿ ಪೆಟ್ಟಾಗಿದೆ. ಆದರೂ ಕುಂಟುತ್ತ ಕುಂಟುತ್ತಾ ಅಲ್ಲಿಂದ ಓಡಿ ಹೋಗಲು ಯತ್ನಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬರುತ್ತಿದೆ. ವಿಡಿಯೋದಲ್ಲಿ ಕಂಡು ಬರುವ ಹಾಗೆ ಕಳ್ಳರು ಯಾವ ರೀತಿ ಹುಡುಗ ಮತ್ತು ಹುಡುಗಿಯ ಕಡೆಯಿಂದ ವಸ್ತುಗಳನ್ನು ಲೂಟಿ ಮಾಡಿಕೊಳ್ಳುತ್ತಿದ್ದಾರೆ ನೋಡಿ. ಈ ದುಷ್ಕೃತ್ಯವನ್ನು ಮಾಡುವಾಗ ಹಿಂದಿನಿಂದ ಬರುವ ಕಾರನ್ನು ನೋಡಿ ಅಲ್ಲಿಂದ ಓಡಿ ಹೋಗಲು ಯತ್ನಿಸುತ್ತಾರೆ. ಆದರೆ ಜಾಣ ಕಾರು ಚಾಲಕ ಮಾತ್ರ ಈ ಕಳ್ಳರಿಗೆ ಸರಿಯಾಗಿಯೇ ಬುದ್ಧಿ ಕಲಿಸಿದ್ದಾನೆ. ಈ ಇನ್ಸಿಡೆಂಟ್ ನಿಂದಾಗಿ ಕಳ್ಳರು ಒಂದು ಕ್ಷಣವೂ ಅಲ್ಲಿ ನಿಲ್ಲದೆ ಕಾಲಿಗೆ ಬುದ್ಧಿ ಹೇಳಿದ್ದಾರೆ.
ವಿಡಿಯೋ ನೋಡಿ..
https://twitter.com/semladroes/status/1563527050220404737?ref_src=twsrc%5Etfw%7Ctwcamp%5Etweetembed%7Ctwterm%5E1563527050220404737%7Ctwgr%5Ee88ea255e42dbd40edd78781b1fb523e511b3ca4%7Ctwcon%5Es1_c10&ref_url=https%3A%2F%2Fwww.tv9hindi.com%2Ftrending%2Fcar-hits-bike-rider-thieves-shocking-video-viral-on-social-media-au262-1426423.html
ಮೈ ನವಿರೇಳಿಸುವ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಟ್ವಿಟರ್ ನಲ್ಲಿ @semladroes ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಕೇವಲ 34 ಸೆಕೆಂಡುಗಳ ಈ ವಿಡಿಯೋವನ್ನು ಇಲ್ಲಿಯವರೆಗೆ 5 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಮತ್ತು ಸುಮಾರು 1.7 ಲಕ್ಷ ಜನರು ವಿಡಿಯೋ ಲೈಕ್ ಮಾಡಿದ್ದಾರೆ. ಯೂಜರ್ಸ್ ಗಳು ತಮ್ಮ ಕಮೆಂಟ್ ನಲ್ಲಿ ಕಾರ್ ಚಾಲಕ ಮಾಡಿದ ಕೆಲಸಕ್ಕೆ ವಾ! ವಾ! ಎಂದು ಹೊಗಳಿದ್ದಾರೆ.