ಗೂಳಿಯನ್ನು ಬೇಟೆಯಾಡಲು ಬಂದ ಹುಲಿ, ಕ್ಷಣದಲ್ಲಿ ಓಡಿತು ಇಲಿಯಂತೆ; ವಿಡಿಯೋದಲ್ಲಿ ನೋಡಿ ಹುಲಿ ಓಡಿದ ರೀತಿ…
ಕಾಡಿನಲ್ಲಿ ಸಿಂಹದ ನಂತರ ಶಕ್ತಿಯುತ ಪ್ರಾಣಿ ಯಾವುದು ಎಂದಾಗ ಉತ್ತರ ಸಿಗುವುದು ಹುಲಿ. ಹುಲಿಯೂ ಸಹ ತುಂಬಾ ಶಕ್ತಿಯುತ ಹಾಗೂ ಕ್ರೂರ ಪ್ರಾಣಿಯಾಗಿದೆ. ಇದು ತನ್ನ ಬೇಟೆಯ ಮೇಲೆ ಅಟ್ಯಾಕ್ ಮಾಡುವ ರೀತಿ ನೋಡಿದರೆ ಕ್ಷಣದಲ್ಲಿ ಬೇಟೆ ಧರೆಗಿಳಿಯುತ್ತದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಆಶ್ಚರ್ಯ ಪಡುವಂತಹ ವಿಡಿಯೋ ಒಂದು ಸದ್ಯಕ್ಕೆ ನೋಡಲು ಸಿಗುತ್ತಿದೆ. ಈ ವೈರಲ್ ಕ್ಲಿಪ್ ನಲ್ಲಿ ಹುಲಿಯು ಗೂಳಿಗೆ ಹೆದರಿ ಓಡಿ ಹೋಗುವುದನ್ನು ನೋಡಿದಾಗ ನಿಜಕ್ಕೂ ತಮಾಷೆ ಎನಿಸುತ್ತದೆ. ಹೌದು, ಇದು ನಿಜ. ಈ ವಿಡಿಯೋ ನೋಡಿದಾಗಲೇ ನೀವು ನಂಬುವುದು.
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಕಾಡಿನ ಬದಿಯಲ್ಲಿರುವ ರಸ್ತೆಯನ್ನು ದಾಟಲು ಒಂದು ಹುಲಿ ಬರುತ್ತಿರುತ್ತದೆ. ಅದೇ ಸಂದರ್ಭದಲ್ಲಿ ಹುಲಿಯ ಎದುರಿನಿಂದ ರಸ್ತೆ ಮೇಲಿಂದ ಒಂದು ಗೂಳಿ ಓಡುತ್ತಾ ಬರುತ್ತದೆ. ತಕ್ಷಣ ಹುಲಿ ಅದರ ಬೇಟೆಯಾಡಲು ಪೊಜಿಷನ್ ತೆಗೆದುಕೊಳ್ಳುತ್ತದೆ. ಆದರೆ ಮುಂದಿನ ಕೆಲವೇ ಕ್ಷಣಗಳಲ್ಲಿ ಅಲ್ಲಿಯ ದೃಶ್ಯ ಸಂಪೂರ್ಣವಾಗಿ ವಿರುದ್ಧವಾಗಿರುತ್ತದೆ. ಗೂಳಿ ಹುಲಿಯನ್ನು ನೋಡಿದ ತಕ್ಷಣ ಹೆದರಿ ಓಡುವುದನ್ನು ಬಿಟ್ಟು ಮತ್ತಷ್ಟು ಜೋಶ್ ನಿಂದ ಹುಲಿಯ ಮೇಲೆ ಎರಗುವ ರೀತಿಯಲ್ಲಿ ಏರಿ ಬರುತ್ತದೆ. ಗೂಳಿಯ ಈ ರೇಂಜ್ ನೋಡಿ ಹುಲಿಯ ನರಗಳು ಒಮ್ಮೆಲೆ ಟೈಟ್ ಆಗುತ್ತವೆ ಮತ್ತು ತಬ್ಬಿಬ್ಬಾಗುತ್ತದೆ. ಹಾಗೂ ಅಲ್ಲಿಂದ ಹುಲಿಯು ತಕ್ಷಣ ಕಾಲ್ಕಿತ್ತುತ್ತದೆ. ನೋಡುಗರಿಗೆ ಈ ದೃಶ್ಯವೂ ನಿಜಕ್ಕೂ ವಿಚಿತ್ರವೆನಿಸುತ್ತದೆ. ಗೂಳಿಯ ದೇಹವು ನೋಡಲು ಅಷ್ಟೊಂದು ಮೈಕೈ ತುಂಬಿಕೊಂಡು ಸದೃಢವಾಗಿಲ್ಲ. ಆದರೆ ಅದರ ದರ್ಪ ಮಾತ್ರ ಹುಲಿಗೆ ಹೆದರಿಸುವಲ್ಲಿ ಯಶಸ್ವಿಯಾಯಿತು.
ನೋಡಿ ಈ ವಿಡಿಯೋದಲ್ಲಿ ಹುಲಿಯ ಅವಸ್ಥೆ…
ಹುಲಿಯ ಗುಣಗಳಿಗೆ ತುಂಬಾ ವಿರುದ್ಧವಾದ ಈ ವಿಡಿಯೋವನ್ನು ಐಎಫ್ಎಸ್ ಆಫೀಸರ್ ಆದ ಸುಶಾಂತ್ ನಂದ ಅವರು ತಮ್ಮ ಟ್ವಿಟರ್ ಹ್ಯಾಂಡಲ್ ನಿಂದ ಶೇರ್ ಮಾಡಿದ್ದಾರೆ. ಬೇಟೆಯಾಡುವ ಪ್ರಾಣಿಗಳು ಸ್ವಾಭಾವಿಕವಾಗಿ ಈ ರೀತಿಯಾಗಿ ವ್ಯವಹರಿಸುವುದಿಲ್ಲ. ಜನರ ಉಪಸ್ಥಿತಿಯಿಂದಾಗಿ ಹುಲಿಯು ಬಹುಶ: ಒತ್ತಡದಲ್ಲಿ ಬಂದಿರಬಹುದು. 24 ಸೆಕೆಂಡ್ಗಳ ಈ ವಿಡಿಯೋ ಸಾವಿರಾರು ಜನರು ನೋಡಿದ್ದಾರೆ. ಮತ್ತು ಸಾಕಷ್ಟು ಜನರು ಈ ವಿಡಿಯೋಗೆ ಲೈಕ್ಸ್ ಮಾಡಿದ್ದಾರೆ. ವಿಡಿಯೋ ನೋಡಿದ ನೇಟಿಜನ್ಸ್ ಗಳು ಅನೇಕ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ವಿಡಿಯೋ ನೋಡಿ
Courage is found in unlikely places…
Bull scares away the tiger. This is not the behaviour apex predator that we know. Pressure of human presence is perhaps having a huge role.
WA fwd pic.twitter.com/6A4kx39yVc— Susanta Nanda IFS (@susantananda3) August 30, 2022
ಒಬ್ಬ ವ್ಯಕ್ತಿಯು, ಗೂಳಿಯ ಮುಖಕ್ಕೆ ಕಂಡು ಬರುತ್ತಿರುವ ಮುಖವಾಡದಿಂದ ಹುಲಿಯು ಹೆದರಿರಬೇಕು ಎಂದು ಪ್ರತಿಕ್ರಿಯಿಸಿದ್ದಾನೆ. ಇನ್ನೊಬ್ಬ ಯೂಸರ್ ಈ ದೃಶ್ಯವನ್ನು ನೋಡಿದಾಗ ನನಗೆ ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ ಎಂದಿದ್ದಾನೆ.