ಹಾರ್ಟ್ ಸ್ಪೆಷಲಿಸ್ಟ್ ಎದುರೇ ವ್ಯಕ್ತಿಗೆ ಹಾರ್ಟ್ ಅಟ್ಯಾಕ್! ಅಕ್ಷರಶಃ ಯಮನಿಂದ ಸಿಂಪಲ್ಲಾಗಿ ಕಸಿದ ಡಾಕ್ಟರ್ ಗೆ ಸೋ. ಮೀ. ದಲ್ಲಿ ಉಘೇ ಉಘೇ…
ತಲೆನೋವು, ಕೆಮ್ಮು, ನೆಗಡಿ ಬಂದರೇನೆ ಹೆದರಿ ಮೊದಲು ಡಾಕ್ಟರ್ ಕಡೆಗೆ ಹೋಗಬೇಕೆಂಬ ವಿಚಾರ ತಲೆಯಲ್ಲಿ ಬರುತ್ತದೆ. ಇನ್ನು ಎದೆ ನೋವಿಗೆ ಸಂಬಂಧಿಸಿದ ಸಮಸ್ಯೆ ಬಂದರೆ ಮುಗಿದೇ ಹೋಯಿತು ಮನುಷ್ಯ ಇನ್ನಷ್ಟು ಗಾಬರಿಯಾಗಿ ಬಿಡುತ್ತಾನೆ. ಪ್ರಸ್ತುತ ವಿಡಿಯೋದಲ್ಲಿ ರೋಗಿಯೊಬ್ಬನಿಗೆ ಡಾಕ್ಟರ್ ಮುಂದೆ ಕುಳಿತಾಗಲೇ ಹಾರ್ಟ್ ಅಟ್ಯಾಕ್ ಬಂದಿದೆ. ಆಗ ತಕ್ಷಣ ಡಾಕ್ಟರ್ ಮಾಡಿದ ಸಿಂಪಲ್, ಆದರೆ ತುಂಬಾ ಅದ್ಭುತವಾದ ಕೆಲಸ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗಿದೆ. ಅಂತ ಯಾವ ಕೆಲಸವನ್ನು ಡಾಕ್ಟರ್ ಮಾಡಿದ್ದಾರೆ ನೋಡೋಣ ಬನ್ನಿ.
ಡಾಕ್ಟರ್ ಗೆ ನಮ್ಮ ಸಮಾಜದಲ್ಲಿ ದೇವರ ಪ್ರತಿರೂಪವೆಂದೇ ಭಾವಿಸಲಾಗುತ್ತದೆ. ಅದಕ್ಕೆ ಉದಾಹರಣೆಗಳು ಹೇಳುತ್ತೀರದಷ್ಟಿವೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋವನ್ನು ನೋಡಿದಾಗ ಮೇಲೆ ಹೇಳಿದ ಮಾತು ಅಕ್ಷರಶಃ ಸತ್ಯವೆಂದು ಮತ್ತಷ್ಟು ಮನಗಟ್ಟಾಗುತ್ತದೆ. ಈ ವಿಡಿಯೋದಲ್ಲಿ ಕಂಡುಬರುವ ದೃಶ್ಯವು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿಯ ಹೃದಯ ರೋಗ ತಜ್ಞರಾದ ಡಾ. ಅರ್ಜುನ್ ಅಡ್ನಾಯಕ್ ಅವರ ಕ್ಯಾಬಿನ್ ನಲ್ಲಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಲ್ಲಿ ರೋಗಿಯೊಬ್ಬ ಡಾಕ್ಟರ್ ಅರ್ಜುನ್ ಅವರ ಮುಂದೆ ಕುಳಿತಿದ್ದಾನೆ. ಅದೇ ಸಂದರ್ಭದಲ್ಲಿ ರೋಗಿಗೆ ಹಾರ್ಟ್ ಅಟ್ಯಾಕ್ ಬರುತ್ತದೆ. ಇದನ್ನು ಗಮನಿಸಿದ ಡಾಕ್ಟರ್ ಅರ್ಜುನ್ ಅವರು ತಕ್ಷಣ ರೋಗಿಗೆ CPR (Cardiopulmonary resuscitation) ನೀಡುತ್ತಾರೆ. ಮತ್ತು ರೋಗಿಗೆ ಕ್ಷಣದಲ್ಲಿ ಜೀವಸಹಿತ ಉಳಿಸಿಕೊಳ್ಳುತ್ತಾರೆ. ಈ ದೃಶ್ಯ ನೋಡಿದಾಗ ಡಾಕ್ಟರ್ ತುಂಬಾ ಸಾಮಾನ್ಯವೆಂಬಂತೆ ಒಂದು ಪ್ರಕ್ರಿಯೆಯನ್ನು ರೋಗಿಯ ಮೇಲೆ ಉಪಯೋಗಿಸುತ್ತಾರೆ. ಕಣ್ಣಿಗೆ ಕಾಣಲು ತುಂಬಾ ಸಹಜವೆನಿಸಿದರೂ ಈ ಪ್ರಕ್ರಿಯೆಯಿಂದ ಕ್ಷಣದಲ್ಲಿ ರೋಗಿಗೆ ಪುನಃ ಜೀವಕಳೆ ಬರುತ್ತದೆ. ಇಲ್ಲಿ ಡಾಕ್ಟರ್ ರೋಗಿಯ ಎದೆಯ ಮೇಲೆ ಲಘುವಾಗಿ ಮುಷ್ಠಿಯಿಂದ ಗುಮ್ಮುತ್ತಾರೆ. ಇದರಿಂದ ರೋಗಿಯು ತಕ್ಷಣ ಪೂರ್ವ ಸ್ಥಿತಿಗೆ ಮರಳುತ್ತಾನೆ. ಸೋಶಿಯಲ್ ಮೀಡಿಯಾದಲ್ಲಿ ಪ್ರಸ್ತುತ ವಿಡಿಯೋ ತುಂಬಾ ವೈರಲ್ ಆಗುತ್ತಿದೆ. ಮತ್ತು ಈ ವಿಡಿಯೋ ನೋಡಿದವರು ಬೇರೆಯವರಿಗಾಗಿ ಶೇರ್ ಸಹ ಮಾಡುತ್ತಿದ್ದಾರೆ.
ವೀಡಿಯೋ ನೋಡಿ
कोल्हापूर : डॉक्टरांसोबत बोलतानाच आला हृदयविकाराचा झटका, पुढे जे घडलं ते आश्चर्यकारक.#Kolhapur pic.twitter.com/QvJ8kvGMiO
— Maharashtra Times (@mataonline) September 5, 2022
CPR ಎಂದರೆ ಹಾರ್ಟ್ ಅಟ್ಯಾಕ್ ಆದ ರೋಗಿಗೆ ತಕ್ಷಣ ಎಮರ್ಜೆನ್ಸಿಯಲ್ಲಿ ಜೀವ ಉಳಿಸಬಹುದಾಗಿರತಕ್ಕಂತ ವೈದ್ಯಕೀಯ ಟೆಕ್ನಿಕ್ ಆಗಿದೆ ಎಂದು ಹೇಳಬಹುದು. ಈ ಪ್ರಕ್ರಿಯೆ ಎಂದರೆ ರೋಗಿಗೆ ಹಾರ್ಟ್ ಅಟ್ಯಾಕ್ ಆದ ಸಂದರ್ಭದಲ್ಲಿ ತಕ್ಷಣ ಡಾಕ್ಟರ್ ಅಥವಾ ಇದರ ಬಗ್ಗೆ ಮಾಹಿತಿಯುಳ್ಳವರು ಎಮರ್ಜೆನ್ಸಿಯಲ್ಲಿ ರೋಗಿಯ ಪ್ರಾಣ ಉಳಿಸಲು ಮಾಡಬಹುದಾದ ಒಂದು ಪ್ರಯತ್ನವಾಗಿದೆ.