ವಿಷಕಾರಿ ಸರ್ಪಗಳಿಗೆ ಮಾಡಿಸುತ್ತಾನೆ ಈ ಯುವಕ ಜಳಕ; ನೋಡಿ ಈ ವೈರಲ್ ವಿಡಿಯೋ…

ವೈಜ್ಞಾನಿಕರ ಪ್ರಕಾರ ಜಗತ್ತಿನಲ್ಲಿ ಸುಮಾರು 3000 ವಿವಿಧ ಜಾತಿಯ ಹಾವುಗಳು ಕಂಡುಬರುತ್ತವೆಯಂತೆ. WHO ನೀಡಿದ ವರದಿಯ ಪ್ರಕಾರ ವರ್ಷಕ್ಕೆ 81,000 ದಿಂದ ಹಿಡಿದು 1.38 ಲಕ್ಷಗಳವರೆಗೆ ಜನರು ಹಾವಿನ ಕಡಿತದಿಂದಾಗಿ ಸಾವಿಗೀಡಾಗುತ್ತಾರೆ ಎಂಬ ಅನುಮಾನವಿದೆ.

ಸುಮಾರು 99.99 ಪ್ರತಿಶತ ಜನರು ಹಾವು ಮತ್ತು ಇಂತಹ ಪ್ರಾಣಿಗಳನ್ನು ನೋಡಿದರೇನೇ ಹೆದರುತ್ತಾರೆ. ಮತ್ತು ಅವುಗಳಿಂದ ತುಂಬ ಸುರಕ್ಷಿತವಾದ ಅಂತರವನ್ನು ಕಾಯ್ದುಕೊಂಡಿರುತ್ತಾರೆ. ಆದರೆ ಇದರ ವಿರುದ್ಧವಾಗಿ ಕೆಲವು ಪಂಡಿತರು ಇಂತಹ ಹಾವುಗಳ ಜೊತೆಗೆ ಆಟ ಆಡುವ ಹಾಗೆ ಆಡುತ್ತಾರೆ.

ಇಂಥ ಭಯಾನಕ ಹಾಗೂ ವಿಷಪೂರಿತ ಹಾವುಗಳನ್ನು ಇಲ್ಲಿ ಒಬ್ಬ ಭೂಪ ಸ್ನಾನ ಮಾಡಿಸುತ್ತಾನೆ. ಈ ವಿಡಿಯೋ ಯೂಟ್ಯೂಬ್ ನಲ್ಲಿ 2019 ರಲ್ಲಿ ಅಪ್ಲೋಡ್ ಮಾಡಲಾಗಿದೆ. ಆದರೆ ಮತ್ತೊಮ್ಮೆ ಈ ವಿಡಿಯೋ ಸದ್ಯಕ್ಕೆ ವೈರಲ್ ಆಗುತ್ತಿದೆ. ಪ್ರಸ್ತುತ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತುಂಬಾ ವಿಷಕಾರಿಯಾದ ಕೋಬ್ರಾ ಹಾಗೂ ತತ್ಸಮ ವಿಷಕಾರಿ ಹಾವುಗಳೊಂದಿಗೆ ಆಟ ಆಡುತ್ತಾನೆ. ಅವುಗಳಿಗೆ ತುಂಬಾ ಚೆನ್ನಾಗಿ ಜಳಕ ಮಾಡಲು ಹೇಗೆ ಅನುಕೂಲ ಮಾಡಿಕೊಡುತ್ತಾನೆ, ಎಂಬಂತಹ ದೃಶ್ಯವನ್ನು ನೋಡಿ ಯೂಟ್ಯೂಬ್ ವಿಡಿಯೋದಲ್ಲಿ. 👇

ವಿಡಿಯೋ ನೋಡಿ

ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ 1 ಕೋಟಿ 36 ಲಕ್ಷಕ್ಕೂ ಮೇಲ್ಪಟ್ಟು ವೀಕ್ಷಣೆಯನ್ನು ಪಡೆದಿದೆ. ಸುಮಾರು 1 ಲಕ್ಷ 80 ಸಾವಿರ ಜನರಿಂದ ಮೆಚ್ಚುಗೆಯನ್ನು ಪಡೆದಿದೆ.