ಆನೆಗೆ ತುರಿಕೆ, ಕಾರಿನಲ್ಲಿಯ ಪ್ರವಾಸಿಗರ ಉಸಿರು ಮೇಲೆ ಕೆಳಗೆ! ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ…

ಪ್ರವಾಸದ ಸಂದರ್ಭದಲ್ಲಿ ಪ್ರವಾಸಿಗರಿಗೆ ಅನೇಕ ರೀತಿಯ ಅನುಭವಗಳು ಉಂಟಾಗುತ್ತವೆ. ಅದರಲ್ಲೂ ಕೆಲವು ಅನುಭವಗಳು ಜೀವನದ ಕೊನೆಯ ಉಸಿರು ಇರುವವರೆಗೂ ಸದಾ ನೆನಪಿನಲ್ಲಿ ಇರುತ್ತವೆ. ಸದ್ಯದ ವಿಡಿಯೋದಲ್ಲಿಯ ದೃಶ್ಯವೂ ಸಹ ಇದೇ ರೀತಿಯ ಅನುಭವವನ್ನು ಈ ಕಾರಿನಲ್ಲಿರುವವರಿಗೆ ನೀಡಿದೆ ಎನ್ನಬಹುದು.

ಜಂಗಲ್ ಮಧ್ಯದಲ್ಲಿಂದ ಕಾರಿನಲ್ಲಿ ಕುಳಿತು ಪ್ರವಾಸ ಮಾಡುತ್ತಿರುವ ಈ ಪ್ರವಾಸಿಗರಿಗೆ ಭಯಾನಕ ಅನುಭವ ಒಂದು ಬಂದಿದೆ. ದಾರಿಯಲ್ಲಿ ನಡೆದಿರುವಾಗ ಮಧ್ಯದಲ್ಲಿ ದೊಡ್ಡದಾದ ಆನೆಯೊಂದು ರಸ್ತೆಯ ಮೇಲೆ ಅಡ್ಡಲಾಗಿ ಬಂದಿದೆ. ಕಾರಿನವರು ತಮ್ಮಷ್ಟಕ್ಕೆ ತಾವು ಯಾವುದೇ ರೀತಿಯ ಗದ್ದಲ ಅಥವಾ ಶಬ್ದ ಮಾಡದೆ ಕಾರನ್ನು ಸುಮ್ಮನೆ ನಿಲ್ಲಿಸಿದ್ದಾರೆ. ಆದರೆ ಆನೆ ಸುಮ್ಮನೆ ಹೋಗಬೇಕಲ್ಲ! ಯಾಕೋ ಈ ಆನೆ ಸುಮ್ಮನೆ ಹೋಗಿಲ್ಲ. ಅದು ಕಾರಿನ ಜೊತೆಗೆ ಆಟ ಆಡಲು ಶುರು ಮಾಡಿದೆ. ಇದೇ ಸಂದರ್ಭದಲ್ಲಿ ಆನೆಯ ಹಿಂಬದಿಗೆ ತುರಿಕೆ ಶುರುವಾಗಿದೆ. ಆಗ ಈ ತುರಿಕೆಯಿಂದ ಮುಕ್ತಿ ಪಡೆಯಲು ಆನೆ ಕಾರಿನ ಬಾನೆಟ್ ನ್ನು ಉಪಯೋಗಿಸಿಕೊಂಡಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಕಾರಿನಲ್ಲಿ ಕುಳಿತ ಪ್ರವಾಸಿಗರು ಆನೆಗೆ ಒಂದು ವೇಳೆ ಯಾವುದೇ ರೀತಿಯ ಕಿರುಕುಳ ಕೊಟ್ಟರೆ ತಮಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ತಿಳಿದು ಸುಮ್ಮನೆ ಒಳಗೆ ಕುಳಿತಿದ್ದಾರೆ. ಆದರೆ ಆನೆ ಮಾತ್ರ ತಾನು ನೀಡುವ ಕಿರುಕುಳ ಹಾಗೆಯೇ ಮುಂದುವರೆಸಿ ನಿಧಾನವಾಗಿ ಕಾರಿನ ಬಾನೆಟ್ ಮೇಲೆ ಏರಿದೆ. ಸೈಡ್ ಮಿರರ್ ಮೇಲೆ ಕಾಲು ಕೊಟ್ಟು ಎದ್ದು ನಿಲ್ಲುವ ಪ್ರಯತ್ನ ಮಾಡಿದೆ, ಹಾಗೂ ಮಿರರ್ ಮುರಿದು ಬಿದ್ದಿವೆ. ಈ ಸಂದರ್ಭದಲ್ಲಿ ಒಂದು ವೇಳೆ ಏನಾದರೂ ಆನೆ ಕಾರಿನ ಮೇಲೇರಿ ಟಾಪ್ ಮೇಲೆ ಕಾಲು ನಿಲ್ಲಲು ಪ್ರಯತ್ನಿಸಿದರೆ ಏನಾಗುತ್ತಿತ್ತು ಎಂಬುದನ್ನು ವಿಚಾರ ಮಾಡಿದರೂ ಮೈ ಕಂಪಿಸುವದು, ಅಲ್ವಾ?

ಹೀಗೆ ಒಟ್ಟಿನಲ್ಲಿ ಆನೆ ಕಾರಿಗೆ ಸಾಕಷ್ಟು ಜಖಮ್ ಗೊಳಿಸಿದೆ. ಆನೆಯ ಈ ಅವತಾರವನ್ನು ಕಂಡ ಚಾಲಕ ಆಗ ಮಾತ್ರ ಎಚ್ಚೆತ್ತುಕೊಂಡು ಇನ್ನು ಇಲ್ಲಿ ನಿಂತರೆ ಅಪಾಯ ತಪ್ಪಿದ್ದಲ್ಲ ಎಂದು ಮನಗಂಡು ಕಾರನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಾನೆ ಮತ್ತು ಅಲ್ಲಿಂದ ಪರಾರಿಯಾಗುವ ಯೋಚನೆ ಮಾಡಿ ತನ್ನ ವಿಚಾರ ಕಾರ್ಯರೂಪಕ್ಕೆ ತರುತ್ತಾನೆ.

ವಿಡಿಯೋ ನೋಡಿ

https://twitter.com/buitengebieden/status/1567047392251240449?t=kfLpW89OULmySGS6czcOKg&s=09

ಪ್ರಸ್ತುತ ಮೈ ನಡುಗುವ ಈ ದೃಶ್ಯವನ್ನು ಟ್ವಿಟರ್ ನಲ್ಲಿ ಶೇರ್ ಮಾಡಲಾಗಿದ್ದು ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ 2.4 ಮಿಲಿಯನ್ ಗೂ ಹೆಚ್ಚು ವೀಕ್ಷಣೆಯನ್ನು ಪಡೆದಿದೆ. ಸುಮಾರು 50 ಸಾವಿರದ ವರೆಗೆ ಲೈಕ್ಸ್ ಗಳನ್ನು ಹೊಂದಿದೆ.