ಕಿಲ್ಲರ್ ಎಕ್ಸ್ಪ್ರೆಶನ್ ಜೊತೆ ತೆಳ್ಳನೆಯ ಆಂಟಿಯರು ಡಾನ್ಸ್ ಮಾಡಿ ಎಬ್ಬಿಸಿದರು ಧೂಳ್! ಗ್ರಾವಿಟಿ ಫೋರ್ಸ್ ಎಲ್ಲಿ? ಎಂದರು ನೆಟ್ಟಿಗರು

ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಸಂಪ್ರದಾಯಿಕ ನೃತ್ಯಗಳು ತುಂಬಾ ಮಹತ್ವವನ್ನು ಪಡೆದಿದೆ. ಇತ್ತೀಚೆಗೆ ಡಾನ್ಸ್ ಗಳಲ್ಲಿ ವಿವಿಧ ರೀತಿಯ ಬದಲಾವಣೆಗಳನ್ನು ಕಾಣುತ್ತಾ ಬಂದಿದ್ದೇವೆ. ಈಗ ಯುವಜನರು ಮಾಡುವಂತಹ ಡಾನ್ಸ್ ಗಳು ತುಂಬಾ ಬೇರೆಯೆ ಆಗಿವೆ ಎಂದು ಹೇಳಬಹುದು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಡ್ಯಾನ್ಸ್ಗಳು ನೋಡಿದರಂತೂ ತಲೆಗೆ ಕೈ ಹಚ್ಚಿ ಕುಳಿತುಕೊಳ್ಳಬೇಕಾಗುತ್ತದೆ. ಈಗಿನ ಆಧುನಿಕ ಯುಗದಲ್ಲಂತೂ ವಿಚಿತ್ರ ವಿಚಿತ್ರವಾಗಿ ಡಾನ್ಸ್ ಮಾಡುವವರು ಕಡಿಮೆ ಏನಿಲ್ಲ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತೆಳ್ಳನೆಯ ಯುವತಿಯರು ಮಾಡಿದ ಡಾನ್ಸ್ ನೋಡಿದಾಗ ಹುಬ್ಬೇರಿಸುವಂತಾಗಿದೆ. ಅಂಥ ಒಂದು ದೃಶ್ಯದ ವಿಡಿಯೋವನ್ನು ಈ ಲೇಖನದಲ್ಲಿ ನಿಮಗಾಗಿ ತಂದಿದ್ದೇವೆ.

ಈ ವಿಡಿಯೋದಲ್ಲಿಯ ದೃಶ್ಯ ಅಷ್ಟೇ ವಿಶೇಷ ಮತ್ತು ತಮಾಷೆಯಿಂದ ಕೂಡಿದೆ. ಇಲ್ಲಿ ಕೆಲವು ಮಹಿಳೆಯರು ತಮ್ಮ ನೃತ್ಯವನ್ನು ತುಂಬಾ ವಿಶೇಷವಾದ ರೀತಿಯಲ್ಲಿ ಸಾದರಪಡಿಸುತ್ತಿದ್ದಾರೆ. ಬಹುಶಃ ಇದೇ ಕಾರಣದಿಂದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಡ್ಯಾನ್ಸನಲ್ಲಿಯ ವಿಶೇಷತೆಯನ್ನು ನೋಡಿ ನೆಟ್ಟಿಗರು ಭೂಮಿಯ ಗುರುತ್ವಾಕರ್ಷಣೆ ಶಕ್ತಿ ಎಲ್ಲಿ ಹೋಯಿತು ಎಂಬ ಪ್ರಶ್ನೆ ಮಾಡುತ್ತಿದ್ದಾರೆ. ಕಾರಣ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮಹಿಳೆಯರು ಮಾಡುತ್ತಿರುವ ವಿಶೇಷವಾದ ಡ್ಯಾನ್ಸ್ ಇದೇ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ. ಅವರು ಕಿಲ್ಲರ್ ಎಕ್ಸ್ಪ್ರೆಶನ್ ನೊಂದಿಗೆ ಹಾಗೂ ಬಾರಿಸುತ್ತಿರುವ ಮ್ಯೂಸಿಕ್ ಜೊತೆಗೆ ತುಂಬಾ ಫಾಸ್ಟ್ ಆಗಿ ಮೂವ್ಮೆಂಟ್ಸ್ ಮಾಡುತ್ತಿದ್ದಾರೆ.

ನೋಡಿ ಅವರ ಈ ವಿಶೇಷ ಡಾನ್ಸ್…

 

View this post on Instagram

 

A post shared by VIDEO NATION (@videonation.teb)

ಪ್ರಸ್ತುತ ನೃತ್ಯವು ಮನೆ ಮುಂದಿನ ರಸ್ತೆಯ ಮೇಲೆ ಮಾಡುತ್ತಿರುವುದು ಕಂಡು ಬರುತ್ತಿದೆ. ಈ ಸಂದರ್ಭದಲ್ಲಿ ಮೂವರು ಮಹಿಳೆಯರು ಹಿಂಬದಿಗೆ ಬೆಂಡ್ ಆಗಿ ತುಂಬಾ ವೇಗದಲ್ಲಿ ಸ್ಟೆಪ್ಸ್ ಗಳನ್ನು ಹಾಕುತ್ತಿದ್ದಾರೆ. ಈ ವಿಡಿಯೋವನ್ನು instagram ನ videonation.teb ಹೆಸರಿನ ಖಾತೆಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಸಾವಿರಾರು ಜನರು ನೋಡಿದ್ದು ಅಷ್ಟೇ ಜನರು ಲೈಕ್ ಸಹ ಮಾಡಿದ್ದಾರೆ.