ಫುಲ್ ಹೇವಿ ವರ್ಕ್ ಕಷ್ಟವಿಲ್ಲದೇನೆ ಸ್ಮಾರ್ಟ್ ಆಗಿ ಮಾಡೋದು ಹೇಗೆ? ಈ Video ನೋಡಿದ್ಮೇಲೆ ನೀವೂ ಶಭಾಷ್! ಎನ್ನುವಿರಿ.
ಚಿಕ್ಕಂದಿನಿಂದಲೂ ನಾವು ಹಿರಿಯರ ಬಾಯಿಯಿಂದ ದುಡಿಯಿರಿ, ಕಷ್ಟ ಪಡಿ ಅಂದರೇನೆ ಭವಿಷ್ಯದಲ್ಲಿ ನಿಮಗೆ ಸುಖ ಸಿಗುತ್ತೆ ಎನ್ನೋ ಮಾತುಗಳನ್ನು ಕೇಳುತ್ತಾ ಬಂದಿದ್ದೇವೆ. ಕಷ್ಟವಿಲ್ಲದೆ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಈ ಮಾತು ಏನೋ ನಿಜ. ಆದರೆ ಇಂದಿನ ಕಾಲ ತುಂಬಾ ಬದಲಾಗಿದೆ. ಇಂದಿನ ಕಾಲದಲ್ಲಿ ಕಷ್ಟದ ಜೊತೆಗೆ ಯಾರು ಹೊಸ ಹೊಸ ಐಡಿಯಾ ಯೂಸ್ ಮಾಡಿ ಅಥವಾ ಸ್ಮಾರ್ಟ್ ಮೈಂಡ್ ನಿಂದ ಯಾರು ಕೆಲಸ ಮಾಡುತ್ತಾರೆ ಅವರಿಗೆ ಯಶಸ್ಸು ಜಾಸ್ತಿ ಸಿಗುತ್ತದೆ. ಈಗ ಇದೇ ವಿಷಯಕ್ಕೆ ಸಂಬಂಧಿಸಿದ ವಿಡಿಯೋ ಒಂದು ಇಂಟರ್ನೆಟ್ ವೇಗವಾಗಿ ವೈರಲ್ ಆಗುತ್ತಿದೆ. ಬನ್ನಿ ಈ ವಿಶೇಷವಾದ ವಿಡಿಯೋವನ್ನು ನೋಡೋಣ.
ಈ ವಿಡಿಯೋದಲ್ಲಿ ಕೆಲವು ವ್ಯಕ್ತಿಗಳು ಪರಿಶ್ರಮದ ಕೆಲಸವನ್ನು ತಮ್ಮ ಸ್ಮಾರ್ಟ್ ಮೈಂಡ್ ನಿಂದ ತುಂಬಾ ಸಹಜ ಹಾಗೂ ಸರಳವನ್ನಾಗಿ ಮಾಡಿಕೊಂಡಿದ್ದಾರೆ. ಹೀಗಾಗಿ ನೇಟಿಜನ್ಸ್ ಗಳಿಗೆ ಇವರ ಕೆಲಸ ನೋಡಲು ತುಂಬಾ ಇಂಟರೆಸ್ಟ್ ಬರುತ್ತಿದೆ ಜೊತೆಗೆ ಇಷ್ಟವೂ ಆಗಿದೆ.
ಪ್ರಸ್ತುತ ವಿಡಿಯೋದಲ್ಲಿ ಈ ವ್ಯಕ್ತಿಗಳು ಕೂಡಿ ತುಂಬಾ ಉದ್ದವಾದ ಮರದ ತೊಲೆಗಳನ್ನು ಅಥವಾ ದಿಮ್ಮಿಗಳನ್ನು ಸಾಗಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಎಲ್ಲ ದಿಮ್ಮಿಗಳನ್ನು ಒಟ್ಟಿಗೆ ಸಾಗಿಸುವುದೆಂದರೆ ತುಂಬಾ ಕಷ್ಟದ ಕೆಲಸ ಅಲ್ವೇ? ಹೀಗಾಗಿ ಇವರೆಲ್ಲರೂ ಕೂಡಿ ತನ್ನಷ್ಟಕ್ಕೆ ತಾವೇ ಒಂದು ಸ್ಮಾರ್ಟ್ ಐಡಿಯಾವನ್ನು ಶೋಧಿಸಿಕೊಂಡಿದ್ದಾರೆ. ಮರದ ಈ ಒಣಗಿದ ಈ ದಿಮ್ಮಿಗಳನ್ನು ಶಕ್ತಿಯಿಂದ ಅಥವಾ ಪರಿಶ್ರಮಪಟ್ಟು ಸಾಗಿಸುವುದಕ್ಕಿಂತ ಬೆಟ್ಟದ ಮೇಲಿನಿಂದ ಕೆಳಗಿನ ದಿಕ್ಕಿಗೆ ಜೋರಾಗಿ ನೂಕುತ್ತಿದ್ದಾರೆ. ಹೀಗಾಗಿ ಮರದ ದಿಮ್ಮಿಗಳು ಇಳಿಮುಖಕ್ಕೆ ತಾನಾಗಿಯೇ ಸುಲಭವಾಗಿ ಹಾಗೂ ಅಷ್ಟೇ ಸುಂದರವಾಗಿ ಹೋಗುತ್ತಿರುವುದು ವಿಡಿಯೋದಲ್ಲಿ ಕಾಣುತ್ತಿದೆ. ಇಲ್ಲಿ ಜನರ ಪರಿಶ್ರಮದ ಕೆಲಸವು ಅವರದೇಯಾದ ಸ್ಮಾರ್ಟ್ ವರ್ಕ್ ನಿಂದಾಗಿ ತುಂಬಾ ಸುಲಭವಾಗಿದೆ ಎಂದು ಹೇಳಬಹುದು.
ವಿಡಿಯೋ ನೋಡಿ
View this post on Instagram
ಈ ಸುಂದರವಾದ ವಿಡಿಯೋವನ್ನು ಸೋಶಿಯಲ್ ಮೀಡಿಯಾದ ಪ್ಲಾಟ್ಫಾರ್ಮ್ ಆದ ಇನ್ಸ್ಟಾಗ್ರಾಮ್ ನಲ್ಲಿ techzexpress ಹೆಸರಿನಿಂದ ಶೇರ್ ಮಾಡಲಾಗಿದೆ. ಕೆಲವೇ ಕ್ಷಣಗಳ ಈ ವಿಡಿಯೋವನ್ನು ಇಲ್ಲಿಯವರೆಗೆ 12.9 ಮಿಲಿಯನ್ ಗೂ ಮೀರಿ ವೀಕ್ಷಿಸಲಾಗಿದೆ. ಹಾಗೂ ಲಕ್ಷಾವಧಿ ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.