Video! ಬಾವಿಯಲ್ಲಿ ಬಿದ್ದ ಚಿರತೆಗೆ ರೆಸ್ಕ್ಯೂ ಟೀಮ್ ಬೋನಿಗೆ ಹೇಗೆ ಹಾಕಿದರು ನೋಡಿ ಸಿಂಪಲ್ ಟೆಕ್ನಿಕ್ ಯೂಸ್ ಮಾಡಿ!

ನಗರಗಳು ಹಾಗೂ ಪಟ್ಟಣಗಳು ಬೆಳೆಯುತ್ತಿದ್ದಂತೆ ಅರಣ್ಯಗಳ ವ್ಯಾಪ್ತಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಲಿದೆ. ಮನುಷ್ಯ ತನ್ನ ಮನೆಯನ್ನು ನಿರ್ಮಿಸುವುದಕೋಸ್ಕರ ವನ್ಯಪ್ರಾಣಿಗಳಿಗೆ ಮನೆ ಇಲ್ಲದಂತೆ ಮಾಡುತ್ತಿದ್ದಾನೆ. ಇದೇ ಕಾರಣದಿಂದಾಗಿ ದಿನನಿತ್ಯ ಎಲ್ಲಿಯಾದರೂ ಮೃಗಗಳು ಜನವಸತಿಯಲ್ಲಿ ಹೊಕ್ಕಿರುವ ಸುದ್ದಿ ಸಮಾಚಾರಗಳನ್ನು ಕೇಳಿಯೇ ಕೇಳುತ್ತೇವೆ. ಸದ್ಯ ಚಿರತೆಯೊಂದು ಜನ ವಸತಿಯಲ್ಲಿ ನುಗ್ಗಿ ಬಂದು ಬಾವಿಯಲ್ಲಿ ಬಿದ್ದಿದೆ. ಈ ಬಾವಿಯಲ್ಲಿ ಬಿದ್ದ ಚಿರತೆಯನ್ನು ತುಂಬಾ ಸುರಕ್ಷಿತವಾಗಿ ಬೋನಿಗೆ ಹಾಕುವಲ್ಲಿ ಅರಣ್ಯ ಅಧಿಕಾರಿಗಳು ಅಥವಾ ರೆಸ್ಕ್ಯೂ ತಂಡ ದ ಯಶಸ್ವಿಯಾಗಿದ್ದಾರೆ.

ಈ ವಿಡಿಯೋದಲ್ಲಿ ಕಂಡು ಬರುವ ಪ್ರಕಾರ, ಬಾವಿಯಲ್ಲಿ ಬಿದ್ದ ಚಿರತೆಯನ್ನು ಹಗ್ಗಿನಿಂದ ಬಂದಿಸಿದ್ದಾರೆ. ನಂತರ ಅದನ್ನು ಅನಾಮತ್ತಾಗಿ ಮೇಲೆ ಎಳೆದಿದ್ದಾರೆ. ಎಳೆಯುವಾಗ ಚಿರತೆಯು ನೇರವಾಗಿ ಬೋನಿನಲ್ಲಿಯೇ ಪ್ರವೇಶಿಸುವಂತೆ ಕಾಳಜಿ ವಹಿಸಿದ್ದಾರೆ. ಇಲ್ಲಿ ಚಿರತೆಯಿಂದ ಮನುಷ್ಯರಿಗೆ ಮತ್ತು ಮನುಷ್ಯರಿಂದ ಚಿರತೆಗೆ ಯಾವುದೇ ರೀತಿಯ ಅನಾಹುತವಾಗದಂತೆ ಅರಣ್ಯ ಅಧಿಕಾರಿಗಳು ಸರಿಯಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಕೆಲವೊಂದು ಸಲ ಈ ರೀತಿಯಾಗಿ ಪ್ರಾಣಿಗಳನ್ನು ಹಿಡಿಯಬೇಕಾದಾಗ ಅರಣ್ಯ ಅಧಿಕಾರಿಗಳಿಗೆ ಸಾಕು ಸಾಕಾಗಿ ಹೋಗುತ್ತದೆ.

ವಿಡಿಯೋ ನೋಡಿ

 

View this post on Instagram

 

A post shared by Dinesh Makwana (@makwana_dinesh_m)

ಪ್ರಸ್ತುತ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಮಕವಾನಾ ದಿನೇಶ್ ಎಂ ಹೆಸರಿನ ಐಡಿ ಇಂದ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ 12.8 ಮಿಲಿಯನ್ ವೀಕ್ಷಣೆಯನ್ನು ಪಡೆದಿದ್ದು ಜೊತೆಗೆ 3 ಲಕ್ಷಕ್ಕೂ ಮೀರಿ ಲೈಕ್ಸ್ ಗಳನ್ನು ಹೊಂದಿದೆ.