ನನ್ನ ಗಣೇಶನನ್ನು ಎಂದಿಗೂ ಬಿಡಲಾರೆ; ಮುಗ್ಧ ಹುಡುಗಿಯ ಮನಕಲುಕುವ ಎಮೋಷನಲ್ ವಿಡಿಯೋ ಆಯ್ತು ವೈರಲ್!
ನಿನ್ನೆ ಭಾರತದೆಲ್ಲಡೆ ಅನಂತ ಚತುರ್ದಶೀಯಂದು ಗಣೇಶನಿಗೆ ವಿದಾಯ ಹೇಳಲಾಯಿತು. ಈ ದಿನವೇ ಎಲ್ಲೆಡೆ ಗಣೇಶನ ಮೂರ್ತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಭಾದ್ರಪದ ತಿಂಗಳಿನ ಚೌತಿಯಂದು ಎಲ್ಲರ ಮನೆಯಲ್ಲಿ ಗಣೇಶನ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ನಂತರ 10 ದಿನಗಳವರೆಗೆ ದಿನನಿತ್ಯ ವಿಧಿ ವಿಧಾನಗಳೊಂದಿಗೆ ಪೂಜೆ ನೆರವೇರಿಸಲಾಗುತ್ತದೆ. ಕೊನೆಯ ದಿನ ಮಾತ್ರ ಬಾವಿ, ಕೆರೆ, ನದಿ, ಸಮುದ್ರ ಹೀಗೆ ವಿವಿಧ ನೀರಿನ ಸ್ತೋತ್ರಗಳಲ್ಲಿ ಗಣೇಶನ ಮೂರ್ತಿಯನ್ನು ವಿಸರ್ಜಿಸಲಾಗುತ್ತದೆ. ಹೀಗೆ ವಿಸರ್ಜನೆ ಮಾಡಿದ ನಂತರ ಮುಂದಿನ ವರ್ಷದ ಗಣೇಶನ ಆಗಮನದವರೆಗೂ ಯಾವುದೇ ರೀತಿಯ ಕಷ್ಟಗಳು ಮನೆಯಲ್ಲಿ ಕಾಲಿಡುವುದಿಲ್ಲ ಎಂಬ ದಟ್ಟ ನಂಬಿಕೆ ಇದರ ಹಿಂದಿದೆ. ಕೊನೆಯ ದಿನದ ಗಣೇಶನ ವಿದಾಯ ನಿಜಕ್ಕೂ ತುಂಬಾ ದುಃಖವನ್ನುಂಟು ಮಾಡುತ್ತದೆ. ಕೆಲವರಿಗಂತೂ ಕಣ್ಣೀರು ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಪುಟ್ಟ ಹುಡುಗಿಯ ಇದೇ ರೀತಿಯ ಒಂದು ವಿಡಿಯೋ ನೋಡಿಗರನ್ನು ಭಾವುಕರನ್ನಾಗಿ ಮಾಡುತ್ತಿದೆ.
ಈ ವಿಡಿಯೋದಲ್ಲಿ ಕಂಡುಬರುವ ದೃಶ್ಯದ ಪ್ರಕಾರ ಪುಟ್ಟ ಹುಡುಗಿಯೊಬ್ಬಳು ತನ್ನ ಪ್ರೀತಿಯ ಗಣೇಶನಿಗೆ ವಿಸರ್ಜಿಸಲು ಶಕ್ತಿಮೀರಿ ವಿರೋಧಿಸುತ್ತಿದ್ದಾಳೆ. ಆಕೆ ತನ್ನ ಗಣೇಶನಿಗೆ ಏನೇ ಆದರೂ ವಿಸರ್ಜನೆ ಮಾಡಲು ಬಿಡುತ್ತಿಲ್ಲ, ಗಟ್ಟಿಯಾಗಿ ಗಣೇಶನಿಗೆ ಹಿಡಿದು ಬಿಟ್ಟಿದ್ದಾಳೆ. ಈ ಸಂದರ್ಭದಲ್ಲಿ ಹುಡುಗಿಯ ತಾಯಿ ಗಣೇಶನಿಗೆ ವಿಸರ್ಜಿಸಲು ಬಿಟ್ಟುಬಿಡು ಎಂದು ಹೇಳುತ್ತಿರುವಾಗ ಆಕೆ ಯಾರ ಮಾತನ್ನು ಸಹ ಕೇಳುತ್ತಿಲ್ಲ. ತಾಯಿಯು ಮಗಳ ಕೈಯನ್ನು ಹಿಡಿದು ಗಣೇಶನಿಗೆ ಬಿಡಿಸಲು ಪ್ರಯತ್ನಿಸುತ್ತಿರುವಾಗ ಮಗಳು ಮಾತ್ರ ಮೇಲಿಂದ ಮೇಲೆ ತಾಯಿಯ ಕೈಯನ್ನು ದೂರ ತಳ್ಳುತ್ತಿದ್ದಾಳೆ.
ಈ ದೃಶ್ಯವು ನೋಡಲು ತುಂಬಾ ಇಮೋಷನಲ್ ಆಗಿದೆ. ಹುಡುಗಿಯು ಗಣೇಶನಿಗೆ ತುಂಬಾ ಹಚ್ಚಿಕೊಂಡಿದ್ದಾಳೆ. ಹೀಗಾಗಿ ತನ್ನ ಪ್ರೀತಿಯ ಗಣೇಶನನ್ನು ವಿಸರ್ಜಿಸಲು ಯಾರು ಹೇಳಿದರೂ ಒಪ್ಪುತ್ತಿಲ್ಲ. ಕೊನೆಗೂ ತಾಯಿ ಗಣೇಶನನ್ನು ಮಗಳಿಂದ ಬೇರ್ಪಡಿಸುವಲ್ಲಿ ಯಶಸ್ವಿಯಾಗುತ್ತಾಳೆ.
ವೀಡಿಯೋ ನೋಡಿ
बच्ची का दिल छू लेने वाला वीडियो
"मेरे गणपति बप्पा को मत ले जाओ" pic.twitter.com/D3FjgQlGoT
— Office of Dr Mahesh Sharma (@OfficeMahesh) September 9, 2022
ಪುಟ್ಟ ಹುಡುಗಿಯ ಈ ಎಮೋಷನಲ್ ವಿಡಿಯೋ ಮಾಜಿ ಕೇಂದ್ರೀಯ ಸಚಿವರಾದ ಡಾ. ಮಹೇಶ್ ಶರ್ಮಾ ಅವರು ತಮ್ಮ ಟ್ವಿಟರ್ ಹ್ಯಾಂಡಲ್ ನಿಂದ ಶೇರ್ ಮಾಡಿದ್ದಾರೆ. ವಿಡಿಯೋದ ಜೊತೆಗೆ ಕ್ಯಾಪ್ಷನ್ ನಲ್ಲಿ ‘ಪುಟ್ಟ ಹುಡುಗಿಯ ಮನತಟ್ಟುವ ವಿಡಿಯೋ’ ಎಂದು ಬರೆದಿದ್ದಾರೆ. ಪ್ರಸ್ತುತ ವಿಡಿಯೋ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದೆ. ಈ ವಿಡಿಯೋ ನೋಡಿದ ನಂತರ ಮನ ಕಲಕುವದು ನಿಶ್ಚಿತ.