Video; ಗೆಳತಿಯರೆಡೆಗೆ ರಭಸವಾಗಿ ಓಡಿದಳೇನೋ ನಿಜ; ಪಾಪ… ಅಲ್ಲಿ ನಡೆಯಿತು ಎಲ್ಲರೆದುರೆ ಮುಜುಗರ ಪಡುವ ಇನ್ಸಿಡೆಂಟ್!

ಸ್ನೇಹ ಎಲ್ಲ ಸಂಬಂಧಗಳಿಗೂ ಮೀರಿದ ಅದ್ಭುತವಾದ ಆಪ್ತ ಬಂಧವಾಗಿದೆ. ಇಲ್ಲಿ ಯಾವುದೇ ರೀತಿಯ ಮುಚ್ಚು ಮರೆ ಇಲ್ಲದೆ, ವಯಸ್ಸಿನ ಅಂತರ ಎಣಿಸದ, ಸಿರಿತನ ಬಡತನದ ಭೇದವಿಲ್ಲದ ಎಲ್ಲ ಎಲ್ಲೆಗಳನ್ನು ಮೀರಿದ ಸುಮಧುರವಾದ ಹಾಗೂ ಅಷ್ಟೇ ಮನಸ್ಸಿಗೆ ಚೈತನ್ಯ ನೀಡುವ ನಿಷ್ಕಲ್ಮಶ ಚಿಲುಮೆಯಾಗಿದೆ ಎಂದರೆ ತಪ್ಪಲ್ಲ. ಗೆಳೆಯರು ಅಥವಾ ಗೆಳತಿಯರು ಕಂಡಾಗ ಯಾವ ರೀತಿಯ ಭಾವನೆ ಮನುಷ್ಯನಲ್ಲಿ ಹಠಾತ್ ನಿರ್ಮಾಣವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸದ್ಯ ನೋಡಲಿರುವ ವಿಡಿಯೋ ಸಹ ಇದಕ್ಕೆ ಒಂದು ಒಳ್ಳೆಯ ಉದಾಹರಣೆಯಾಗಿದೆ.

ನಾಲ್ಕು ಜನ ಗೆಳತಿಯರ ಗುಂಪೊಂದು ಮಾತನಾಡುತ್ತಾ ನಿಂತಿರುವಾಗ ಐದನೆಯ ಗೆಳತಿಯೊಬ್ಬಳು ದೂರಿನಿಂದ ಗಮನಿಸಿ ಒಮ್ಮೆಲೇ ದುಂಬಾಲು ಬಿದ್ದು ಗೆಳತಿಯರ ಕಡೆಗೆ ರಭಸದಿಂದ ಓಡಿ ಹೋಗುತ್ತಾಳೆ. ಹೀಗೆ ಓಡಿ ಗೆಳತಿಯರ ಹತ್ತಿರ ಹೋಗುತ್ತಲೇ ಕ್ಷಣದಲ್ಲಿ ಒಂದು ಘಟನೆ ನಡೆದು ಹೋಗುತ್ತದೆ. ಅದೇನೆಂದರೆ ಜೋಶ್ ನಲ್ಲಿ ಗೆಳತಿಯರ ಹತ್ತಿರ ಓಡಿ ಹೋಗುವ ತವಕದಲ್ಲಿ ಭರ್ರನೇ ಆಕೆಯ ಕಾಲು ಜಾರಿ ಕಟ್ಟೆಯ ಮೇಲೆ ಜೋರಾಗಿ ಒಮ್ಮೆಲೇ ಕುಸಿದು ಬೀಳುತ್ತಾಳೆ. ಇದರಿಂದ ಒಮ್ಮೆಲೆ ಎಲ್ಲರೂ ತಬ್ಬಿಬ್ಬಾಗುತ್ತಾರೆ. ಮರುಕ್ಷಣವೇ ಎಲ್ಲರೂ ಒಮ್ಮೆಲೆ ಜೋರಾಗಿ ನಗಲು ಶುರು ಮಾಡುತ್ತಾರೆ. ಇಲ್ಲಿ ಹುಡುಗಿ ಮುಜುಗರಗೊಂಡರೂ ಮತ್ತು ಜೋರಾಗಿ ಪೆಟ್ಟು ತಗುಲಿದರೂ ಗೆಳತಿಯರ ಜೊತೆಗೆ ಮಾತ್ರ ಬಿಂದಾಸಾಗಿ ಮನಸೋ ಇಚ್ಛೆ ನಕ್ಕು ಬಿಡುತ್ತಾಳೆ. ಈ ಸಂದರ್ಭದಲ್ಲಿ ಹುಡುಗಿಗೆ ಹಿಂಬದಿಗೆ ಸ್ವಲ್ಪ ಪೆಟ್ಟೂ ಸಹ ತಗುಲಿದೆ ಎನ್ನಬಹುದು.

ವೀಡಿಯೋ ನೋಡಿ

ಈ ತಮಾಷೆಯ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ dev.ika ಹೆಸರಿನ ಐಡಿ ಯಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ 2.9 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ.