Video; ಈ ಮುದ್ದು ಅಷ್ಟೇ ತುಂಟ ವಿಡಿಯೋ ನೋಡಿದ ನಂತರ ಲೈಕ್ ಮಾಡದೇ ನೀವು ಮುಂದೆ ಹೋಗುವುದೇ ಇಲ್ಲ!

ಮಕ್ಕಳು ಏನೇ ತುಂಟಾಟ ಮಾಡಲಿ ಎಂತಹದೇ ತಪ್ಪು ಮಾಡಲಿ ಹೆತ್ತವರಿಗೆ ಎಲ್ಲವೂ ಸಂತೋಷವೇ ಸರಿ, ಅಲ್ವಾ? ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ನೋಡಲು ಸಿಗುತ್ತಿದೆ. ಈ ವಿಡಿಯೋದಲ್ಲಿ ಪುಟ್ಟ ಮಗುವಿನ ಚೆಲ್ಲಾಟ ಕಂಡುಬರುತ್ತದೆ. ಬನ್ನಿ ಈ ಮಗು ಏನು ಮಾಡುತ್ತಿದೆ ನೋಡೋಣ.

ವಿಡಿಯೋದ ಈ ದೃಶ್ಯದಲ್ಲಿ ಪುಟ್ಟ ಮಗು ತನ್ನದೇ ಆಟದಲ್ಲಿ ತೊಡಗಿದೆ. ಈ ಸಂದರ್ಭದಲ್ಲಿ ಮಗು ಮಾಡುತ್ತಿರುವ ಚೆಲ್ಲಾಟವನ್ನು ತಾಯಿಯು ತುಂಬಾ ಮಾರ್ಮಿಕವಾಗಿ ವರ್ಣಿಸಿದ್ದಾಳೆ. ವಿಡಿಯೋದ ದೃಶ್ಯದಲ್ಲಿ ಕಂಡುಬರುವ ಪ್ರಕಾರ ಮಗು ಅಡುಗೆ ಮನೆಯಲ್ಲಿ ಆಸೀನವಾಗಿದೆ. ಈ ಸಂದರ್ಭದಲ್ಲಿ ಅದು ಗೋಧಿಯ ಹಿಟ್ಟಿನಲ್ಲಿ ತುಂಬಾ ಸೈಲೆಂಟಾಗಿ ಅಷ್ಟೇ ಗಂಭೀರವಾಗಿ ಆಟ ಆಡುತ್ತಿದೆ. ಅದೇ ಸಮಯಕ್ಕೆ ತಾಯಿಯು ಹಿಂದಿ ಭಾಷೆಯಲ್ಲಿ ಮಗುವಿನ ಬಗ್ಗೆ ಹೊಗಳುತ್ತಿದ್ದಾಳೆ, “ಮೊದಲು ನಮ್ಮ ಮನೆಯಲ್ಲಿ ತುಂಬಾ ಶಾಂತಿ ನೆಲೆಸಿರುತ್ತಿತ್ತು, ನಂತರ ಈ ಮಗು ಜನ್ಮ ತೆಗೆದುಕೊಂಡಿತು” ಎಂದು ಮಗುವನ್ನು ವರ್ಣಿಸುತ್ತಿದ್ದಾಳೆ. ಮಗು ಸಂಪೂರ್ಣವಾಗಿ ಹಿಟ್ಟಿನಲ್ಲಿ ಮಿಂದಿದೆ. ಯಾರ ಗೋಡವೆಗೂ ಹೋಗದೆ ತನ್ನಷ್ಟಕ್ಕೆ ತಾನು ಹಿಟ್ಟಿನಲ್ಲಿ ಆಟ ಆಡುತ್ತಿದೆ. ಆ ಹಿಟ್ಟನ್ನೆ ಮುಖಕ್ಕೆ ಪೌಡರ್ ರೀತಿಯಲ್ಲಿ ಹಚ್ಚಿಕೊಳ್ಳುತ್ತಿದೆ ಜೊತೆಗೆ ಒಂದು ಕೈಯಿಂದ ತಲೆಯ ಮೇಲೆ ಹಾರಿಸುತ್ತಿದೆ. ಪ್ರಸ್ತುತ ವಿಡಿಯೋದಲ್ಲಿಯ ದೃಶ್ಯವೂ ನೋಡಲು ಎಲ್ಲರಿಗೂ ಇಷ್ಟವಾಗುವಂತಹದ್ದಾಗಿದೆ

ವಿಡಿಯೋ ನೋಡಿ.

ಮಗುವಿನ ತಮಾಷೆಯ ಹಾಗೂ ಅಷ್ಟೇ ಚೂಟಿಯಾದಂತ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ‘ಆಫೀಸಿಯಲ್ ಪೂಜಾ ಎಡಿಟ್ಸ್ 1’ ಹೆಸರಿನ ಅಕೌಂಟ್ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ ಮಿಲಿಯನ್ ಮಿಲಿಯನ್ ಗಟ್ಟಲೇ ವೀಕ್ಷಣೆಯನ್ನು ಪಡೆದಿದೆ. ಮತ್ತು ಸುಮಾರು 10 ಲಕ್ಷಗಳವರೆಗೆ ಲೈಕ್ಸ್ ಗಳನ್ನು ಹೊಂದಿದೆ.