ಚಿಕ್ಕ ಕಾರಿನಲ್ಲಿ ಸೇರಿ ಕುಳಿತರು ಒಟ್ಟು 27 ಜನ! ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಟ್ವಿಟ್ ಮಾಡಿತು ಈ ವಿಡಿಯೋ..!

ಗಿನ್ನೆಸ್ ವರ್ಲ್ಡ್ ರೆಕಾರ್ಡ್ ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಜನರು ಅನೇಕ ರೀತಿಯ ಅದ್ಭುತವಾದ ಕೆಲಸ ಕಾರ್ಯಗಳನ್ನು ಮಾಡುತ್ತಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಒಂದು ಸಾಮಾನ್ಯ 5 ಸಿಟರ್ ಮಿನಿ ಕೂಪರ್ ಕಾರಿನಲ್ಲಿ 27 ಜನ ಸೇರಿ ಕುಳಿತುಕೊಂಡಿದ್ದಾರೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಮುಖಾಂತರ ಈ ವಿಡಿಯೋವನ್ನು ಟ್ವೀಟ್ ಮಾಡಿದೆ.

ಪ್ರಸ್ತುತ ಈ ವಿಡಿಯೋದಲ್ಲಿ ಕಂಡುಬರುವ ವ್ಯಕ್ತಿಗಳಲ್ಲಿ ಕೆಲವರು ಸಹಜವಾಗಿ ಕುಳಿತರೆ ಇನ್ನೂ ಕೆಲವರು ತಮ್ಮ ದೇಹವನ್ನು ತುಂಬಾ ಫ್ಲೆಕ್ಸಿಬಲ್ ಆಗಿ ಒಳಗೆ ಸೇರಿಸಿದ್ದಾರೆ. ಕಾರಿನಲ್ಲಿ ಸೇರಿ ಕುಳಿತುಕೊಳ್ಳಲು ವಾಲಂಟಿಯರ್ಸ್ ಗಳು ಲೈನ್ನಲ್ಲಿ ನಿಂತಿದ್ದಾರೆ. ನಂತರ ಒಬ್ಬೊಬ್ಬರಾಗಿ ಒಳಗೆ ಹೋಗಿ ಕುಳಿತುಕೊಳ್ಳುತ್ತಾರೆ.

GWR ಈ ವಿಡಿಯೋವನ್ನು ಸಪ್ಟೆಂಬರ್ 6 ರಂದು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದೆ. ಹಾಗೆ ನೋಡಲಾಗಿ ಪ್ರಸ್ತುತ ವಿಡಿಯೋ 8 ವರ್ಷಗಳ ಹಿಂದಿನದ್ದಾಗಿದೆ. ಯುನೈಟೆಡ್ ಕಿಂಗ್ಡಮ್ ನಲ್ಲಿ ಪ್ರಸ್ತುತ ಈ ದೃಶ್ಯದ ಪ್ರಯೋಗ ಮಾಡಲಾಯಿತು. ರೆಕಾರ್ಡ್ ಮಾಡಲು ಜನ ಅನೇಕ ರೀತಿಯ ಐಡಿಯಾಗಳನ್ನು ಶೋಧಿಸಿಕೊಳ್ಳುತ್ತಾರೆ. ವಿಶೇಷವೇನೆಂದರೆ ಒಳಗೆ ಕುಳಿತುಕೊಂಡವರ ದೇಹ ಮತ್ತು ತಲೆಯ ಮೇಲೆಯೂ ಉಳಿದ ವ್ಯಕ್ತಿಗಳು ಕುಳಿತಿದ್ದಾರೆ ಮತ್ತು ಮಲಗಿದ್ದಾರೆ.

ವಿಡಿಯೋ ನೋಡಿ

ಇಂಟರ್ನೆಟ್ ನಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೋಡಿ ನೇಟಿಜನ್ಸ್ ಗಳು ಅನೇಕ ರೀತಿಯ ಕಮೆಂಟ್ಗಳನ್ನು ಮಾಡುತ್ತಿದ್ದಾರೆ. ಈ ವಿಡಿಯೋವನ್ನು ನೋಡಿದ ವ್ಯಕ್ತಿಯೊಬ್ಬ “ಎಲ್ಲಿಯವರೆಗೆ ಆಕ್ಸಿಡೆಂಟ್ ಆಗುವುದಿಲ್ಲವೋ ಅಲ್ಲಿಯವರೆಗೆ ಈ ವಿಡಿಯೋ ನೋಡಲು ತುಂಬಾ ತಮಾಷೆಯಾಗಿದೆ” ಎನ್ನುತ್ತಾನೆ.