Video; ಎರಡು ಬದಿಗೆ ನೀರಿದ್ದ ಗೇಣಗಲದ ಉದ್ದನೆಯ ಸೇತುವೆ ಮೇಲೆ ಒಂದೇ ಕೈಯಿಂದ ಸೈಕಲ್ ನಡೆಸುವ ಯತ್ನ!

ಜನ ಸೋಷಿಯಲ್ ಮೀಡಿಯಾದಲ್ಲಿ ಮಿಂಚುವ ಸಲುವಾಗಿ ಅನೇಕ ರೀತಿಯ ಸ್ಟಂಟ್ ಮತ್ತು ಅಪಾಯಗಳಿಗೆ ಕೈ ಹಾಕುತ್ತಾರೆ. ಈ ರೀತಿ ಮಾಡುವಾಗ ಎಷ್ಟೋ ಜನರು ತಮ್ಮ ಜೀವಕ್ಕೆ ಸ್ವತಃ ಆಪತ್ತು ತಂದುಕೊಳ್ಳುತ್ತಾರೆ.

ಪ್ರಸ್ತುತ ವಿಡಿಯೋ ಒಂದು ಇದೇ ರೀತಿಯ ದೃಶ್ಯವನ್ನು ತೋರಿಸುತ್ತದೆ. ಈ ದೃಶ್ಯದಲ್ಲಿ ಯುವಕನೊಬ್ಬ ತುಂಬಾ ಈಜಿಯಾಗಿ ಸೈಕಲ್ ನಡೆಸಿದ್ದಾನೆ. ಇನ್ನು ನೀವು ಸೈಕಲ್ ನಡೆಸುವುದೇನು ಮಹಾಕೆಲಸ ಎನ್ನಬಹುದು, ಅಲ್ವಾ? ಆದರೆ ಇದರಲ್ಲಿದೆ ಒಂದು ವಿಶೇಷತೆ.

ಅದೇನೆಂದರೆ, ಮಳೆಯಿಂದಾಗಿ ಎಲ್ಲೆಡೆಯೂ ಪರಿಸರ ಜಲಾವೃತಗೊಂಡಿದೆ. ಸದ್ಯ ಕೆರೆ, ಬಾವಿ, ಹಳ್ಳ, ಹರಿ, ತೊರೆ ಹೀಗೆ ಎಲ್ಲವೂ ತುಂಬಿಕೊಂಡು ನಿಂತಿವೆ. ಇಂಥದ್ದೇ ಒಂದು ನೀರಿನ ಸೆಲೆಯಲ್ಲಿ ಮರದ ಹಲಗೆಗಳನ್ನು ಉಪಯೋಗಿಸಿ ತಯಾರಿಸಿದ ಗೇಣುದ್ದ ಅಗಲದ ಪಟ್ಟಿಯ ಮೇಲೆ ವ್ಯಕ್ತಿಯೊಬ್ಬ ಒಂದೇ ಕೈಯಿಂದ ತುಂಬಾ ಸುಲಭವಾಗಿ ಸೈಕಲ್ ನಡೆಸಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಇನ್ನೊಂದು ಕೈಯಲ್ಲಿ ಕೊಡೆಯನ್ನು ಹಿಡಿದಿರುವದು ಕಂಡು ಬರುತ್ತದೆ.

ನೋಡಿ ಈ ವಿಡಿಯೋ…

 

View this post on Instagram

 

A post shared by bikeshow4 (@bikeshow4)

ವ್ಯಕ್ತಿ ತುಂಬಾ ಸರಿಯಾಗಿ ತನ್ನ ಬ್ಯಾಲೆನ್ಸ್ ಕಾಪಾಡಿಕೊಂಡು ಅಷ್ಟೆ ಸಲೀಸಾಗಿ ಒಂದೇ ಕೈಯಿಂದ ಸ್ವಲ್ಪವೇ ಅಗಲವಾದ ಜಾಗದಲ್ಲಿ ಸೈಕಲ್ ನಡೆಸಿ ಅದರಲ್ಲಿ ಯಶಸ್ವಿಯೂ ಆಗಿದ್ದಾನೆ. ಈ ವಿಡಿಯೋ bikeshow4 ಹೆಸರಿನ ಐಡಿಯಿಂದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋ ಜನರಿಗೆ ತುಂಬಾ ಇಷ್ಟವಾಗಿದ್ದು 3 ಲಕ್ಷಕ್ಕೂ ಮೇಲ್ಪಟ್ಟು ಲೈಕ್ಸ್ ಗಳನ್ನು ಪಡೆದಿದೆ.