Video; ಮುದ್ದು ಹುಡುಗ ಮಾಡಿದ ತುಂಟಾಟಕ್ಕೆ ಸಿಟ್ಟಾದಳು ಟೀಚರ್; ಒಲಿಸಲು ಹುಡುಗ ನೀಡಿದ ಟೀಚರ್ ಗೆ ಮುತ್ತು!

ಚಿಕ್ಕ ಮಕ್ಕಳು ತುಂಬಾ ಇನ್ನೋಸೆಂಟ್ ಹಾಗೂ ಕ್ಯೂಟ್ ಆಗಿರುತ್ತಾರೆ. ಅವರು ಮಾಡುವ ತುಂಟಾಟಗಳು ಹೆಚ್ಚು ಕಡಿಮೆ ಎಲ್ಲರಿಗೂ ಇಷ್ಟವಾಗುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಪುಟ್ಟ ಮಕ್ಕಳ ವಿಡಿಯೋಗಳು ತುಂಬಾ ವೈರಲ್ ಆಗುತ್ತವೆ. ಸದ್ಯಕ್ಕೆ ಇಂಟರ್ನೆಟ್ ನಲ್ಲಿ ಪುಟ್ಟ ಹುಡುಗನ ವಿಡಿಯೋ ಒಂದು ಭರ್ಜರಿಯಾಗಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಪುಟ್ಟ ಮಗು ಶಾಲೆಯಲ್ಲಿಯ ಟೀಚರ್ ಜೊತೆಗೆ ಸಂಭಾಷಣೆ ಮಾಡುತ್ತಿದ್ದಾನೆ. ಇದೇ ದೃಶ್ಯ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗುತ್ತಿದೆ.

ಇಲ್ಲಿ ಮುದ್ದು ಮಗು ತನ್ನ ಮೇಲೆ ಸಿಟ್ಟಾದ ಟೀಚರ್ ಗೆ ತುಂಬಾ ಪ್ರೀತಿಯಿಂದ ಓಲೈಸುವ ಪ್ರಯತ್ನ ಮಾಡುತ್ತಿದ್ದಾನೆ. ಟೀಚರ್ ಬಹುಶಃ ಆತನ ತುಂಟತನಕ್ಕೆ ಬೇಸತ್ತು ಸಿಟ್ಟಾಗಿರಬಹುದು. ಅದಕ್ಕಾಗಿ ಆಕೆಗೆ ಹುಡುಗ ರಮಿಸಲು ಯತ್ನಿಸುತ್ತಿರುವಾಗ ಒಂದು ಕೆಲಸವನ್ನು ಮಾಡುತ್ತಾನೆ. ಆತನ ಈ ಕೆಲಸವೇ ನೆಟ್ಟಿಗರ ಮನಸ್ಸನ್ನು ಗೆದ್ದು ಬಿಟ್ಟಿದೆ. ಹೀಗಾಗಿ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ. ಹುಡುಗ ತನ್ನ ಟೀಚರ್ ಹತ್ತಿರ ನಿಂತು ವಿನಂತಿಸುತ್ತಿದ್ದಾನೆ. ಸುತ್ತಮುತ್ತಲಿನ ವಿದ್ಯಾರ್ಥಿಗಳು ಸಹ ಇವರಿಬ್ಬರಿಗೂ ನೋಡುತ್ತಿದ್ದಾರೆ. ಈ ಸಂದರ್ಭದಲ್ಲಿ ಟೀಚರ್ ತುಂಬಾ ಸಿಟ್ಟಾಗಿ ಕಾಣುತ್ತಿದ್ದಾರೆ. ನೀನು ಹೀಗೆ ಮಾಡುತ್ತಿದ್ದರೆ ನಾನು ನಿನ್ನ ಜೊತೆ ಮಾತನಾಡುವುದಿಲ್ಲ ಎಂದು ಟೀಚರ್ ಸಿಟ್ಟಿನಿಂದ ಹೇಳುತ್ತಿದ್ದಾರೆ. ಅದಕ್ಕೆ ಹೆದರಿ ಮಗು ನಾನು ಇನ್ನು ಮುಂದೆ ಈ ರೀತಿಯ ತಪ್ಪನ್ನು ಮಾಡುವುದೇ ಇಲ್ಲ ಎಂದು ಟೀಚರ್ ಗೆ ಒಲಿಸಲು ಪ್ರಯತ್ನಿಸುತ್ತಿದ್ದಾನೆ. ಆಗ ಟೀಚರ್ ನೀನು ಮೇಲಿಂದ ಮೇಲೆ ಇದೇ ರೀತಿ ಹೇಳುತ್ತೀಯಾ ಮತ್ತೆ ತಪ್ಪು ಮಾಡುತ್ತಿಯಾ, ಎನ್ನುವಾಗ ಹುಡುಗ ಟೀಚರ್ ಗಲ್ಲದ ಮೇಲೆ ಮುತ್ತು ಕೊಟ್ಟು ನಾನಿನ್ನು ತಪ್ಪು ಮಾಡುವುದಿಲ್ಲ ಎಂದು ಹೇಳುತ್ತಾನೆ. ಆಗ ಟೀಚರ್ ಪ್ರಾಮಿಸ್ ತಾನೇ ಎಂದು ಕೇಳುತ್ತಾಳೆ. ಅದಕ್ಕೆ ಮಗು ಪ್ರಾಮಿಸ್ ಮಾಡುತ್ತದೆ.

ವಿಡಿಯೋ ನೋಡಿ

 

View this post on Instagram

 

A post shared by SUTTA GRAM (@sutta_gram)

ಪ್ರಸ್ತುತ ವಿಡಿಯೋ ತುಂಬಾ ನೋಡಲು ಕ್ಯೂಟ್ ಆಗಿದೆ. ಹೀಗಾಗಿ ಎಲ್ಲರಿಗೂ ಈ ವಿಡಿಯೋ ತುಂಬಾ ಇಷ್ಟವಾಗುತ್ತಿದೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾ ಗ್ರಾಮ್ ನಲ್ಲಿ ಶೇರ್ ಮಾಡಲಾಗಿದ್ದು ಇಲ್ಲಿಯವರೆಗೆ ಈ ವಿಡಿಯೋ 40 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಜೊತೆಗೆ ನೆಟ್ಟಿಗರು ಅನೇಕ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಅದರಲ್ಲಿ ಒಬ್ಬ ಯೂಸರ್ ನಮಗೆ ಈ ರೀತಿಯ ಟೀಚರ್ ಸಿಗಬೇಕಾಗಿತ್ತು ಎಂದಿದ್ದಾನೆ. ಇನ್ನೊಬ್ಬ ನಮಗಂತೂ ನಮ್ಮ ಜೀವನದಲ್ಲಿ ಬರೀ ಸಿಟ್ಟಿನ ಟೀಚರ್ಗಳೇ ಸಿಕ್ಕರು ಎಂದಿದ್ದಾನೆ.