ವೈರಲ್ ವಿಡಿಯೋ; ತಂದೆಗೆ ಸರಿಸಿ ತಾನೇ ಸ್ಕೂಟಿ ನಡೆಸಲು ಮುಂದಾದಳು ಮಗಳು; ಆದವು ಒಂದಲ್ಲ ಎರಡು ಢಿಕ್ಕಿ..!

ಹುಡುಗಿಯರು ಸ್ಕೂಟಿಯ ಮೇಲೆ ಅವಾಂತರಗಳನ್ನು ಸೃಷ್ಟಿಸಿದ ಅನೇಕ ವಿಡಿಯೋಗಳನ್ನು ಇಲ್ಲಿಯವರೆಗೆ ನೋಡಿರಬೇಕು. ಕಾರಣ ಈ ರೀತಿಯ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತವೆ. ಸದ್ಯ ಸೇಮ್ ಇದೇ ರೀತಿಯ ಇನ್ನೊಂದು ಹೊಸ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ವೈರಲ್ ಆಗುತ್ತಿದೆ.

ಪ್ರಸ್ತುತ ವಿಡಿಯೋದಲ್ಲಿಯ ದೃಶ್ಯ ಒಂದು ಪೆಟ್ರೋಲ್ ಪಂಪ್ ನಲ್ಲಿ ಸೆರೆಯಾಗಿದೆ. ಗಾಡಿಗೆ ಇಂಧನವನ್ನು ಹಾಕಿಸಿಕೊಳ್ಳಲು ತಂದೆ ತನ್ನ ಮಗಳ ಜೊತೆಗೆ ಬಂದಿದ್ದಾನೆ. ಆಗ ಮಗಳು ತಂದೆಗೆ ಬದಿಗೆ ಸರಿಸಿ ಸ್ವತಃ ತಾನೇ ಗಾಡಿಯನ್ನು ನಡೆಸಲು ಶುರು ಮಾಡುತ್ತಾಳೆ. ಮತ್ತೇನು ಸ್ಕೂಟಿ ಒಮ್ಮೆಲೆ ಔಟ್ ಆಫ್ ಕಂಟ್ರೋಲ್ ಆಗಿ ಬಿಡುತ್ತದೆ. ನೇರ ಮುಂದೆ ನಿಂತಿರುವ ವ್ಯಕ್ತಿಗೆ ಟಚ್ ಮಾಡಿ ಆತನಿಗೆ ಓಡಿಸಿಕೊಂಡು ಹೋಗಲು ಶುರು ಮಾಡುತ್ತದೆ. ಅಷ್ಟರಲ್ಲಿ ಇಂಧನ ಹಾಕಿಸಿಕೊಳ್ಳಲು ಮೊದಲೇ ಅಲ್ಲಿ ನಿಂತಿರುವ ಇನ್ನೊಬ್ಬ ಮಹಿಳೆಗೂ ಢಿಕ್ಕಿ ಹೊಡೆದು ಕೆಳಗೆ ಬೀಳಿಸುತ್ತಾಳೆ. ಹೀಗೆ ಒಟ್ಟಿನಲ್ಲಿ ತಂದೆಗೆ ಬದಿಗೆ ಸರಿಸಿ ತಾನೇ ಸ್ಕೂಟಿ ನಡೆಸಲು ಹೋಗಿ ಒಬ್ಬರಲ್ಲ ಇಬ್ಬರಿಗೆ ಡ್ಯಾಶ್ ಹೊಡೆದು ಬಿಡುತ್ತಾಳೆ.

ನೋಡಿ ಈ ವಿಡಿಯೋ…

How does such people end up with a license
byu/frosted_bite inIndiaSpeaks

ಈ ವಿಡಿಯೋ ಸೋಷಿಯಲ್ ಮೀಡಿಯಾ ಸೈಟ್ ನಲ್ಲಿ ಶೇರ್ ಮಾಡಲಾಗಿದ್ದು ಯೂಸರ್ಸ್ ಗಳು ತುಂಬಾ ಮಜಾ ತೆಗೆದುಕೊಳ್ಳುತ್ತಿದ್ದಾರೆ.