ಸೀಟ್ ಬೆಲ್ಟ್ ಹಾಕಿಕೊಂಡು ಎತ್ತು ಮಾಡಿತು ಬೈಕ್ ಪ್ರವಾಸ; ವಿಡಿಯೋ ನೋಡಿ ಆಗುವದು ಆಶ್ಚರ್ಯ!
ಕೆಲವೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ವೀಡಿಯೊಗಳನ್ನು ನೋಡಿದಾಗ ನಮ್ಮ ಕಣ್ಣುಗಳಿಗೆ ನಂಬಲು ಅಸಾಧ್ಯವಾಗುತ್ತದೆ. ನಾವು ಕನಸಿನಲ್ಲಿಯೂ ಈ ರೀತಿಯ ವಿಚಾರ ಮಾಡಲಿಕ್ಕೆ ಸಾಧ್ಯವಿಲ್ಲ ಎನಿಸುತ್ತದೆ. ಸದ್ಯ ಹೀಗೆಯೇ ತುಂಬಾ ವಿಶೇಷವಾದ ವಿಡಿಯೋ ಒಂದು ಇನ್ಸ್ಟಾ ಗ್ರಾಮ್ ನಲ್ಲಿ ನೋಡಲು ಸಿಗುತ್ತಿದೆ.
ಪ್ರಸ್ತುತ ವಿಡಿಯೋದಲ್ಲಿ ಒಂದು ಬೈಕ್ ಕಾಣಿಸುತ್ತಿದೆ. ಈ ಬೈಕ್ ಮೇಲೆ ಎತ್ತು ಕುಳಿತಿರುವುದನ್ನು ನೋಡಿದಾಗ ನಿಜಕ್ಕೂ ಅದ್ಭುತವೆನಿಸುತ್ತದೆ. ಬೈಕ್ ಮೇಲೆ ಎತ್ತು ತುಂಬಾ ಆರಾಮಾಗಿ ಕುಳಿತು ಪ್ರವಾಸ ಮಾಡುತ್ತಿರುವದು ಕಂಡು ಬರುತ್ತಿದೆ. ಕಡಿಮೆ ಖರ್ಚಿನಲ್ಲಿ ತಮ್ಮ ಕೆಲಸವನ್ನು ಹೇಗಾದರೂ ಮತ್ತು ಯಾವುದಾದರೂ ಜುಗಾಡ್ ಮಾಡಿ ಹಣ ಮತ್ತು ಸಮಯ ಉಳಿಸಿಕೊಳ್ಳುವುದರಲ್ಲಿ ಭಾರತೀಯರು ಯಾವಾಗಲೂ ಮುಂದೆ ಎಂದೇ ಹೇಳಬಹುದು. ಈ ವಿಡಿಯೋ ದೃಶ್ಯವನ್ನು ಕಾರಿನಲ್ಲಿ ಕುಳಿತವರು ಶೂಟ್ ಮಾಡಿದ್ದಾರೆಂದು ತಿಳಿದು ಬರುತ್ತದೆ.
ವಿಡಿಯೋ ನೋಡಿ
View this post on Instagram
ಈ ಸುಂದರ ಮತ್ತು ಗಮನ ಸೆಳೆಯುವ ವಿಡಿಯೋವನ್ನು ಇನ್ಸ್ಟಾ ಗ್ರಾಮ್ ನಲ್ಲಿ animalsinthenaturetoday ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಇಲ್ಲಿಯವರೆಗೆ ಲಕ್ಷ ಲಕ್ಷ ಜನರು ವೀಕ್ಷಣೆಯನ್ನು ಮಾಡಿದ್ದಾರೆ. ಹೆಚ್ಚು ಕಡಿಮೆ ಎಲ್ಲರಿಗೂ ಈ ವಿಡಿಯೋ ತುಂಬಾ ತಮಾಷೆ ಎನಿಸಿದೆ.