Viral Video: ರಸ್ತೆ ಬದಿಯಲ್ಲಿಟ್ಟ ಹೂಕುಂಡವನ್ನು ಕದಿಯಲು ಯುವತಿ ಬಗ್ಗಿದಾಗಲೇ ನಡೆಯಿತು ಆವಾಂತರ
ಕಳ್ಳರ ಮನಸ್ಸು ಯಾವಾಗ ಯಾವ ವಸ್ತುವಿನ ಮೇಲೆ ಫಿದಾ ಆಗುತ್ತೋ ಹೇಳಲು ಸಾಧ್ಯವಿಲ್ಲ. ಕಳ್ಳರು ಸದಾ ಬೆಲೆಬಾಳುವ ವಸ್ತುವನ್ನೇ ಕದಿಯುತ್ತಾರೆ ಎಂದು ತಿಳಿದುಕೊಳ್ಳಬೇಡಿ. ಕಾರಣ ಇಲ್ಲೊಬ್ಬಳು ರಸ್ತೆ ಬದಿಯಲ್ಲಿ ಇಟ್ಟ ಹೂಕುಂಡವನ್ನು ಕದಿಯುವ ಪ್ಲಾನ್ ಹಾಕಿದ್ದಾಳೆ ಆದರೆ ಅಲ್ಲಿ ನಡೆದದ್ದೇ ಬೇರೆ.
ಯುವತಿಯೊಬ್ಬಳು ಸ್ಕೂಟಿ ಮೇಲೆ ಹೋಗುತ್ತಿರುತ್ತಾಳೆ. ಆ ಸಮಯದಲ್ಲಿ ಆಕೆಗೆ ರಸ್ತೆ ಬದಿಯಲ್ಲಿಟ್ಟ ಪುಟ್ಟ ಹೂಕುಂಡ ಒಂದು ಕಣ್ಣಿಗೆ ಬೀಳುತ್ತದೆ. ಅತ್ತಿತ್ತ ನೋಡಿ ಅದನ್ನು ತೆಗೆದುಕೊಂಡೆ ಹೋಗಬೇಕೆಂಬ ವಿಚಾರ ಆಕೆಯ ಮನಸ್ಸಿನಲ್ಲಿ ಮೂಡುತ್ತದೆ ಮತ್ತು ಆಕೆ ಕಾರ್ಯ ಪ್ರವೃತ್ತಳಾಗುತ್ತಾಳೆ. ತನ್ನ ಸ್ಕೂಟಿಯನ್ನು ಹೂಕುಂಡದ ಹತ್ತಿರ ನಿಲ್ಲಿಸಿ ಸ್ಕೂಟಿ ಮೇಲೆ ಕುಳಿತುಕೊಂಡೆ ಹೂಕುಂಡವನ್ನು ಎತ್ತುವ ಪ್ರಯತ್ನ ಮಾಡುತ್ತಾಳೆ. ಆಗ ಸ್ಕೂಟರ್ನ ಎಕ್ಸಲೆಟರ್ ಅನಿರೀಕ್ಷಿತವಾಗಿ ಹೆಚ್ಚಾಗುತ್ತದೆ ಮತ್ತು ಸ್ಕೂಟಿ ಹಠಾತ್ ಮುಂದೆ ಹೋಗಲು ಶುರುಮಾಡುತ್ತದೆ. ಒಮ್ಮೆಲೆ ನಡೆದ ಈ ಇನ್ಸಿಡೆಂಟ್ ನಿಂದ ಯುವತಿ ತಬ್ಬಿಬ್ಬಾಗುತ್ತಾಳೆ. ಹಾಗೂ ಸ್ಕೂಟಿ ಮೇಲಿನ ತನ್ನ ನಿಯಂತ್ರಣವನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾಳೆ. ಅದರ ಪರಿಣಾಮ ರಸ್ತೆಯ ಮೇಲೆ ದೀರ್ಘ ದಂಡ ನಮಸ್ಕಾರ ಹಾಕುವದೊಂದೆ ಬಾಕಿ ಉಳಿದಿತ್ತು.
ವಿಡಿಯೋ ನೋಡಿ
View this post on Instagram
ಪ್ರಸ್ತುತ ಈ ತಮಾಷೆಯ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ghantaa ಹೆಸರಿನ ಐಡಿ ಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 2.2 ಮಿಲಿಯನ್ ವೀಕ್ಷಣೆ ಪಡೆದಿದ್ದು ಸುಮಾರು 60 ಸಾವಿರ ಜನ ಈ ವಿಡಿಯೋಗೆ ಲೈಕ್ ಮಾಡಿದ್ದಾರೆ.