ಮಗು ತಾಯಿಯ ಮಾತು ನಿರ್ಲಕ್ಷಿಸಿದಾಗ ಎತ್ತಿದಳು ಖತರ್ನಾಕ್ ವೆಪನ್! ಒಂದೇ ಒಂದು ಕ್ಷಣದಲ್ಲಿ ಅವಿತು ಕುಳಿತ ಮಗು ಹೊರಗೆ…

ತಾಯಿ ಮಗುವಿನ ಸಂಬಂಧ ತುಂಬಾ ವಾತ್ಸಲ್ಯದಿಂದ ಕೂಡಿರುತ್ತದೆ. ಮಗುವಿಗೆ ಪ್ರತಿ ಹಂತದಲ್ಲಿ ತಾಯಿಯ ಅವಶ್ಯಕತೆ ಇರುತ್ತದೆ. ಹಾಗೆಯೇ ತಾಯಿಯು ಸಹ ತನ್ನ ಜೀವದ ಕುಡಿಯನ್ನು ಒಂದು ಕ್ಷಣವೂ ಕೂಡ ಬಿಟ್ಟಿರುವುದಿಲ್ಲ. ಹೀಗಿರುವಾಗ ಕೆಲವೊಮ್ಮೆ ಮಕ್ಕಳು ಹದ್ದುಮೀರಿ ತಾಯಿಗೆ ಕಿರುಕುಳ ನೀಡುತ್ತವೆ. ಆಗ ಮಾತ್ರ ತಾಯಿಯ ಸಂಯಮದ ಕಟ್ಟೆ ಕೆಲವು ಸಹ ಒಡೆದು ಹೋಗುತ್ತದೆ. ಆಗ ನೋಡಿ ಮಗುವಿನ ಆಟ. ಸದ್ಯ ಇದೇ ವಿಷಯಕ್ಕೆ ಸಂಬಂಧಿಸಿದ ವಿಡಿಯೋ ಒಂದು ಸೋಷಿಯಲ್ ಮೀಡಿಯಾ ಸೈಟ್ ನಲ್ಲಿ ಕಾಣಲು ಸಿಗುತ್ತಿದೆ.

ಈ ಕ್ಯೂಟ್ ವಿಡಿಯೋದಲ್ಲಿ ತಾಯಿ ಮಗುವಿನ ಆಟ ನೋಡಿದ ನಂತರ ನಿಮಗೆ ನಗು ತಡೆಯಲು ಸಾಧ್ಯವಿಲ್ಲ. ಏಕೆಂದರೆ ಈ ದೃಶ್ಯವೇ ಹಾಗಿದೆ. ಚಿಕ್ಕ ಮಗು ತಾಯಿಯ ಜೊತೆಗೆ ಸಿಟ್ಟಾಗಿ ಒಂದು ಚಿಕ್ಕ ಕಬರ್ಡ್ ನಲ್ಲಿ ಅವಿತು ಕುಳಿತಿದೆ. ಈ ಸಂದರ್ಭದಲ್ಲಿ ತಾಯಿ ಎಷ್ಟೇ ಮನವಿ ಮಾಡಿದರೂ ಮಗು ಕಬರ್ಡ್ ನಿಂದ ಈಚೇಗೆ ಬರುವದೇ ಇಲ್ಲ. ಆಮೇಲೆ ತಾಳ್ಮೆಯನ್ನು ಕಳೆದುಕೊಂಡ ತಾಯಿ ಕಟ್ಟ ಕಡೆಯ ಶಸ್ತ್ರವಾದ ಚಪ್ಪಲಿಯನ್ನು ತೆಗೆಯುತ್ತಾಳೆ. ಆಗ ಮಾತ್ರ ಮಗು ಕ್ಷಣದಲ್ಲಿ ಕಬರ್ಡ್ ನಿಂದ ಹೊರಗೆ ಬರುವದಷ್ಟೇ ತಡ ಅಲ್ಲಿಂದ ತಾಕ್ ಧಿನಾ ಧಿನ್ ಪಲಾಯನ ಮಾಡಿ ಬಿಡುತ್ತದೆ. ತಾಯಿ ಮಗುವಿನ ಜಗಳದ ಈ ದೃಶ್ಯ ನಿಜಕ್ಕೂ ತುಂಬಾ ಕ್ಯೂಟ್ ಆಗಿದೆ.

ವಿಡಿಯೋ ನೋಡಿ

https://twitter.com/umda_panktiyan/status/1568112470417633281?t=bOOmpnt6Pfq1ZTHjvKmLvw&s=09

ಪ್ರಸ್ತುತ ಈ ವಿಡಿಯೋ @umda _panktiyan ಹೆಸರಿನ ಟ್ವಿಟರ್ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 66 ಸಾವಿರ ವೀಕ್ಷಣೆಯನ್ನು ಪಡೆದಿದೆ. ವಿಡಿಯೋ ನೋಡಿದ ನೆಟ್ಟಿಗರು ತುಂಬಾ ತಮಾಷೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಹಾಗೂ ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ.