ಹನುಮ ಮನೆಹೊಕ್ಕು ಮಾಡಿದ ಕಳ್ಳತನ! ದೃಶ್ಯ ಕ್ಯಾಮೆರಾದಲ್ಲಿ ಸೆರೆ; ವೈರಲ್ ಆಯ್ತು ವಿಡಿಯೋ…

ಅನೇಕ ಪ್ರವಾಸಿ ತಾಣಗಳಲ್ಲಿ ಮಂಗಗಳ ವಾಸ್ತವ್ಯ ತುಂಬಾ ಇರುವದು ಗಮನಿಸುತ್ತೇವೆ. ಅದರಲ್ಲೂ ಗಿರಿ ಪರ್ವತ ಭಾಗಗಳಲ್ಲಂತೂ ಈ ಸಂಖ್ಯೆ ತುಂಬಾ ಹೆಚ್ಚಿರುತ್ತದೆ. ಕಾರಣ ಅಲ್ಲಿ ಬರುವ ಪ್ರವಾಸಿಗರು ಮಂಗಗಳಿಗೆ ಏನಾದರೂ ತಿನ್ನಲು ಕೊಡುತ್ತಾರೆ ಅಥವಾ ಅವರಿಂದ ಮಂಗಗಳಿಗೆ ನಿಶ್ಚಿತವಾಗಿಯೂ ತಿನ್ನಲು ಏನಾದರೂ ಸಿಗುತ್ತದೆ ಎನ್ನಬಹುದು. ಇಷ್ಟಾದರೂ ಆಹಾರ ಎಲ್ಲ ಮಂಗಗಳಿಗೂ ದೊರೆಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ಎಷ್ಟೋ ಮಂಗಗಳು ತಿನ್ನಲು ಏನೂ ಸಿಗದೆ ಹಾಗೆಯೇ ಉಪವಾಸ ಕುಳಿತು ಬಿಡುತ್ತವೆ. ಆಗ ಈ ಮಂಗಗಳು ಅಲ್ಲಿಯೇ ವಾಸ್ತವ್ಯಕ್ಕೆ ಇರುವ ಸ್ಥಳದಲ್ಲಿಯೇ ಇರುವ ಮನೆಗಳಲ್ಲಿ ಹೊಕ್ಕು ಏನಾದರೂ ತಿನ್ನಲು ಸಿಗುತ್ತದೆಯೇ ಎಂದು ನೋಡುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಈಗ ಇದೇ ರೀತಿ ಒಂದು ಮಂಗ ಮನೆ ಹೊಕ್ಕು ಕಳ್ಳತನ ಮಾಡಿದ ವಿಡಿಯೋ ನೋಡಲು ಸಿಗುತ್ತಿದೆ. ನೋಡಿ ಮಂಗಣ್ಣ ಏನು ಮಾಡಿದ್ದಾನೆ.

ಈ ವಿಡಿಯೋದ ದೃಶ್ಯದಲ್ಲಿ ಕಂಡು ಬರುವ ಹಾಗೆ ಮಂಗವೊಂದು ತೆರೆದ ಬಾಗಿಲು ನೋಡಿ ನಿಧಾನವಾಗಿ ಮನೆಯೊಳಗೆ ನುಗ್ಗಿದೆ. ಮನೆಯೊಳಗೆ ನುಗ್ಗಿದ್ದೇ ತಡ ಒಂದು ಬಾಕ್ಸ್ ನಲ್ಲಿ ಇಟ್ಟ ಬಾಳೆ ಹಣ್ಣುಗಳ ಮೇಲೆ ಜೋರಾಗಿ ಅಟ್ಯಾಕ್ ಮಾಡಿದೆ. ಮತ್ತು ತನ್ನ ಕೈಗೆ ಎಷ್ಟು ಸಿಗುತ್ತವೆ ಅಷ್ಟು ಹೆಚ್ಚಿಗೆ ಬಾಳೆಹಣ್ಣುಗಳನ್ನು ತೆಗೆದುಕೊಳ್ಳಲು ಪ್ರಯತ್ನ ಮಾಡಿ ಅಲ್ಲಿಂದ ಓಡಿ ಹೋಗಿದೆ. ಮಂಗ ಕಳ್ಳತನ ಮಾಡಿ ಓಡಿ ಹೋಗುವಾಗಿನ ನೋಟ ನಿಜವಾಗಿಯೂ ತುಂಬಾ ವಿಶೇಷ ಮತ್ತು ತಮಾಷೆಯದ್ದಾಗಿದೆ. ಬಾಯಲ್ಲಿ ಮತ್ತು ಕೈಯಲ್ಲಿ ಮೂರ್ನಾಲ್ಕು ಬಾಳೆಹಣ್ಣುಗಳನ್ನು ಹಿಡಿದು ಹೊರಗೆ ಬಂದು ರಸ್ತೆಯ ತುತ್ತತುದಿಗೆ ಕುಳಿತು ತಿನ್ನಲು ಶುರು ಮಾಡುತ್ತದೆ.

ವಿಡಿಯೋ ನೋಡಿ.

ಈ ಸುಂದರವಾದ ವಿಡಿಯೋವನ್ನು ಇನ್ಸ್ಟಾ ಗ್ರಾಮ್ ನಲ್ಲಿ ‘ಲಕ್ಸುರಿ ಟ್ರಾವೆಲ್ಸ್: ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ.