ಫನ್ನಿ ಜೋಕ್ಸ್! ಗಂಡ ಮಧ್ಯ ರಾತ್ರಿಯಲ್ಲಿ ಎದ್ದು ದಪ್ಪನೆಯ ಹೆಂಡತಿಗೆ, ಚಡಪಡಿಸಿ ಸಾಯೋದು ಒಳ್ಳೆಯದೋ? ಇಲ್ಲ ಒಂದೇ ಉಸಿರಿಗೆ…….
ಜೀವನಕ್ಕೆ ನಗು ಅಮೃತದ ಧಾರೆ ಇದ್ದ ಹಾಗೆ. ಇದು ವ್ಯಕ್ತಿಗೆ ಸದಾಹರಿತನನ್ನಾಗಿಡುತ್ತದೆ. ಒಂದೇ ಒಂದು ಸಲ ದೊರೆಯುವ ಬದುಕು ಚಿಂತೆಯಿಂದ ಮುಕ್ತವಾಗಿ ಎಂಜಾಯ್ ಮಾಡುವದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಯಾರ ಮೇಲೂ ರೇಗಾಡದೆ ಸುಂದರವಾದ ಬದುಕನ್ನು ಜೀವಿಸಲು ವ್ಯಕ್ತಿ ಸಂತೋಷ ವಾಗಿರುವುದು ಬಹಳ ಮುಖ್ಯವಾಗಿದೆ. ಜೋಕ್ಸ್ ಗಳು ಮನುಷ್ಯನಿಗೆ ಟ್ರೆಸ್ ಫ್ರೀ ಇರಲು ತುಂಬಾ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ದಿನನಿತ್ಯದ ಜಂಜಾಟದಿಂದ ಬಳಲಿದ ಮನುಷ್ಯನಿಗೆ ಜೋಕ್ಸ್ ಗಳು ನಗುವಿನ ಧಾರೆ ಎರೆದು ಚೈತನ್ಯವನ್ನು ನೀಡುತ್ತದೆ. ಹಾಗಾದರೆ ಮತ್ತೇಕೆ ತಡ? ಸೂಪರ್ ಪಂಚ್ ನೀಡುವ ಸಾಲಿಡ್ ಜೋಕ್ಸ್ ಗಳು ನಿಮಗಾಗಿ ಇಲ್ಲಿವೆ ಓದಿ ಹಾಗಾದರೆ.
* ಗಂಡ ಮಧ್ಯ ರಾತ್ರಿಯಲ್ಲಿ ಎದ್ದು ದಪ್ಪನೆಯ ಹೆಂಡತಿಗೆ, ಚಡಪಡಿಸಿ ಸಾಯೋದು ಒಳ್ಳೆಯದೋ? ಇಲ್ಲ ಒಂದೇ ಉಸಿರಿಗೆ ಸತ್ತು ಹೋಗೋದು ಒಳ್ಳೆಯದು? ಎಂದು ಕೇಳುತ್ತಾನೆ. ಅದಕ್ಕೆ ಉತ್ತರವಾಗಿ,
ಹೆಂಡತಿ – ಒಂದೇ ಉಸಿರಿಗೆ ಸಾಯೋದು ಒಳ್ಳೆಯದು ಎನ್ನುತ್ತಾಳೆ.
ಗಂಡ – ಹಾಗಾದ್ರೆ ನಿನ್ನ ಅದೊಂದು ಕಾಲು ನನ್ನ ಮೇಲೆ ಹಾಕಿ ನನ್ನ ಕತೆ ಮುಗಿಸಿಬಿಡು ಎನ್ನುತ್ತಾನೆ.
* ಟ್ರೈನ್ ನಲ್ಲಿ ಮಹಿಳೆಯೊಬ್ಬಳು ತನ್ನ ಮಗನಿಗೆ ಮೇಲಿಂದ ಮೇಲೆ, “ಪುಟ್ಟಾ ಬೇಗ ಬೇಗ ಹಲ್ವಾ ತಿಂತಿಯೋ ಇಲ್ಲ ಹತ್ತಿರ ಕುಳಿತ ಅಂಕಲ್ ಗೆ ಕೊಡಲೋ ಎನ್ನುತ್ತಿರುತ್ತಾಳೆ.” ಆಗ ಬೇಸತ್ತ ಅಂಕಲ್ ಮಹಿಳೆಗೆ, ಅಮ್ಮಾ ನಿನ್ನ ಕೆಲಸ ಆದಷ್ಟು ಬೇಗ ಮಾಡು, “ಈ ಹಲ್ವಾ ಸಿಗೋ ಆಸೆಯಲ್ಲಿ ಈಗಾಗಲೇ ನಾನು ಇಳಿಯೋ ಸ್ಟೇಶನ್ ಬಿಟ್ಟು ಮೂರು ಸ್ಟೇಶನ್ ಮುಂದೆ ಬಂದಿದ್ದೇನೆ” ಎನ್ನುತ್ತಾನೆ.
* ಪಾರ್ಕ್ ನಲ್ಲಿ ಕುಳಿತು ಇಬ್ಬರು ಸ್ನೇಹಿತರು ಮಾತನಾಡುತ್ತಿದ್ದರು.
ಸಂತಾ – ಮನುಷ್ಯನ ಮೆದುಳು 24 ಗಂಟೆ ಕೆಲಸ ಮಾಡುತ್ತದೆ. ಬರೀ ಎರಡೇ ಎರಡು ಬಾರಿ ಮಾತ್ರ ಅದು ಬಂದ್ ಬೀಳುತ್ತದೆ.
ಬಂತಾ – ಯಾವಾಗ ಯಾವಾಗ?
ಸಂತಾ – ಒಂದು ಎಕ್ಸಾಮ್ ಟೈಮಲ್ಲಿ, ಇನ್ನೊಂದು ಹೆಂಡತಿ ಚಾಯ್ಸ್ ಮಾಡುವಾಗ.
* ಸಂತಾ ತನ್ನ ಹೆಂಡತಿಗೆ ಇಂಗ್ಲಿಷ್ ಕಲಿಸುತ್ತಿದ್ದ.
ಮಧ್ಯಾಹ್ನದಲ್ಲಿ ಹೆಂಡತಿ ಸಂತಾಗೆ, ರೀ ಡಿನ್ನರ್ ಗೆ ಬನ್ನಿ ಎನ್ನುತ್ತಾಳೆ.
ಸಂತಾ – ಏ ಕತ್ತೆ, ಈಗ ಮಧ್ಯಾಹ್ನನಲ್ಲಿ ಮಾಡೋದು ಡಿನ್ನರ್ ಅಲ್ಲ, ಲಂಚ್ ಎನ್ನುತ್ತಾನೆ.
ಪತ್ನಿ – “ನೀನು ಕತ್ತೆ, ನಿನ್ನ ಕುಟುಂಬದವರೆಲ್ಲರೂ ಕತ್ತೆ, ಇದು ರಾತ್ರಿಯಲ್ಲಿ ಮಾಡಿ ಉಳಿದ ಅಡುಗೆ ಇದೆ, ನಿನ್ನ ತಲೆ ಓಡಿಸಬೇಡ ಸುಮ್ಮನೆ ತಿಂದು ತೇಗು” ಎನ್ನುತ್ತಾಳೆ.
* ನೇಪಾಳಿ ಹುಡುಗಿ ತುಟಿಗಳಿಗೆ ಲಿಪ್ಸ್ಟಿಕ್ ಹಚ್ಚಿಕೊಂಡು ಅಂಗಡಿ ಮಾಲೀಕನಿಗೆ ಶಾಮ್ ಸಿಂಗ್ ನ ಮೊಬೈಲ್ ಎಲ್ಲಿ ಸಿಗುತ್ತೆ ಎಂದು ಕೇಳುತ್ತಾಳೆ.
ಅಂಗಡಿ ಮಾಲೀಕ – ಸಾರಿ ನನಗೆ ಗೊತ್ತಿಲ್ಲ.
ಹುಡುಗಿ – ಅರೆ ಟಿವಿಯಲ್ಲಿ ಮೇಲಿಂದ ಮೇಲೆ ಆಡ್ ಬರುತ್ತಲ್ಲ.
ಅಂಗಡಿ ಮಾಲೀಕ – ಓ ಅದಾ, ನೀವು ಹೇಳೋದು ಸ್ಯಾಮ್ ಸುಂಗ್ ಮೊಬೈಲ್ ತಾನೇ?
ಹುಡುಗಿ – ಹಾ ಹಾ ಹೌದು, ಅದೇ.
* ಪ್ರೀತಿಯ ಈ ಸಾಗರ ಎಷ್ಟೊಂದು ವಿಚಿತ್ರವಾಗಿದೆ, ಅಲ್ವೇ?
ಈ ಸಾಗರದಲ್ಲಿ ಯಾವನು ಮುಳುಗುತ್ತಾನೋ ಆತ ಪ್ರೇಮಿ.
ಯಾವನು ಉಳಿಯುತ್ತಾನೋ ಆತ ಹುಚ್ಚ
ಇನ್ನು ಯಾವನು ಈಜಾಡುತ್ತಲೇ ಇರುತ್ತಾನೆ ಆತ ಮಾತ್ರ ಪತಿ.