VIDEO: ಕಾಪಿ ಕ್ಯಾಟ್ ಡಾಗಿ! TV ನೋಡಿ ಶುರು ಮಾಡಿತು ಏಕ್ಸರ್ಸೈಜ್; ನೋಡಿ ಈ ವೈರಲ್ ವಿಡಿಯೋ.
ಮನುಷ್ಯರ ಹಾಗೆ ಈಗಿನ ಪ್ರಾಣಿಗಳು ಸಹ ತುಂಬಾ ವೈಸ್ ಆಗಿರುವುದನ್ನು ಸೋಷಿಯಲ್ ಮೀಡಿಯಾದಲ್ಲಿ ಕಂಡು ಬರುವ ಅನೇಕ ವಿಡಿಯೋಗಳಲ್ಲಿ ನಾವು ನೋಡಿದ್ದೇವೆ. ಸದ್ಯ ನಾಯಿಯೊಂದು ಟಿವಿಯಲ್ಲಿ ಕಂಡ ಬಂದ ವ್ಯಾಯಾಮ ನೋಡಿದ ನಂತರ ಅದರ ರಿಯಾಕ್ಷನ್ನೇ ಬೇರೆ ಆಗಿತ್ತು.
ಪ್ರಸ್ತುತ ವಿಡಿಯೋ ನೋಡಿದಾಗ ನಿಜಕ್ಕೂ ಅದ್ಭುತವೆನಿಸುತ್ತದೆ. ಕಾರಣ ಈಗಿನ ಜನರಿಗೆ ದಿನನಿತ್ಯ ವ್ಯಾಯಾಮ ಮಾಡಬೇಕು ಎಂಬ ಸತ್ಯ ಗೊತ್ತಿದ್ದರೂ ಸಾಕಷ್ಟು ಜನರು ಅದನ್ನು ನಿರ್ಲಕ್ಷಿಸುತ್ತಾರೆ. ಅದರ ಹಿಂದೆ ಅನೇಕ ಕಾರಣಗಳು ಇರಬಹುದು ಹಾಗಾಗಿ ಅದನ್ನು ಮಾಡಲು ಮುಂದಾಗುವದಿಲ್ಲ. ಇಲ್ಲಿ ನೋಡಿದರೆ ನಾಯಿಯೂ ತನ್ನ ಆರೋಗ್ಯದ ಕಾಳಜಿ ಎಷ್ಟೊಂದು ತೆಗೆದುಕೊಳ್ಳುತ್ತಿದೆ ಎಂಬ ವಿಚಾರ ನೋಡುಗರಿಗೆ ಸತಾಯಿಸುತ್ತದೆ ನಿಜ. ವಿಡಿಯೋದಲ್ಲಿ ಕಂಡು ಬರುವ ಪ್ರಕಾರ ನಾಯಿಯೊಂದು tv ಮುಂದೆ ನಿಂತಿದೆ. ಈ ಸಂದರ್ಭದಲ್ಲಿ ಟಿವಿಯಲ್ಲಿ ಎಕ್ಸರ್ಸೈಜ್ ಪ್ರಾರಂಭವಾಗುತ್ತದೆ. ಅದನ್ನು ನೋಡಿದ ತಕ್ಷಣ ನಾಯಿಯು ತಾನು ಸಹ ಅಲ್ಲಿ ಕಂಡ ದೃಶ್ಯದಂತೆ ವ್ಯಾಯಾಮದ ಪ್ರಕಾರಗಳನ್ನು ಮಾಡಲು ಶುರು ಮಾಡುತ್ತದೆ. ನಾಯಿಯನ್ನು ಎಲ್ಲ ಪ್ರಾಣಿಗಳಲ್ಲಿಯೇ ಹೆಚ್ಚು ತಿಳುವಳಿಕೆಯುಳ್ಳ ಪ್ರಾಣಿ ಎಂದು ಪರಿಗಣಿಸಲಾಗುತ್ತದೆ. ಈ ವಿಡಿಯೋ ನೋಡಿದಾಗ ತಾನು ನಿಜಕ್ಕೂ ತಿಳುವಳಿಕೆಯುಳ್ಳ ಪ್ರಾಣಿ ಎಂಬ ಪರಿಚಯ ನೀಡುತ್ತಿದೆ ಎಂಬಂತೆ ಕಂಡು ಬರುತ್ತದೆ. ಈ ಸಂದರ್ಭದಲ್ಲಿ ನಾಯಿಯು ಒಮ್ಮೆ ಕುಳಿತು, ಒಮ್ಮೆ ನಿಂತು ಮತ್ತೊಮ್ಮೆ ಮಲಗಿ ಹೀಗೆ ಅನೇಕ ರೀತಿಯಲ್ಲಿ ವ್ಯಾಯಾಮವನ್ನು ಮಾಡುತ್ತಿರುವದು ಕಂಡು ಬರುತ್ತಿದೆ.
ನೋಡಿ ಕಾಪಿ ಕ್ಯಾಟ್ ಡಾಗಿ ಹೇಗೆ ಮಾಡುತ್ತಿದೆ ಎಕ್ಸರ್ಸೈಜ್…
How to stay fit: a doberman recreates his workout by watching television. pic.twitter.com/T0nKyr7tSU
— Gabriele Corno (@Gabriele_Corno) August 23, 2022
ಪ್ರಾಣಿಗಳು ತುಂಬಾ ಜಾಣವಾಗಿರುತ್ತವೆ. ಕಲಿಸಿದ್ದನ್ನು ಅವು ಬೇಗನೆ ಕ್ಯಾಚ್ ಮಾಡಿಕೊಳ್ಳುತ್ತವೆ. ಎಂಬುದು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆದ ಈ ವಿಡಿಯೋದಿಂದ ತಿಳಿದು ಬರುತ್ತದೆ, ಅಲ್ವಾ?