Video: ಬೈಕ್ ಪ್ರಿಯರಿಗೆ ಸಂತಸದ ಸುದ್ದಿ! ಬಸ್ಸು, ಕಾರಿನ ನಂತರ ಗಾಳಿಯಲ್ಲಿ ಹಾರುವ ವಿಶ್ವದ ಮೊದಲ ಬೈಕ್… !!
ಆಟೊಮೊಬೈಲ್ ಹವೆಯಲ್ಲಿ ಹಾರುವ ಕಾರು, ಬಸ್ಸಿನ ನಂತರ ಈಗ ಹವೆಯಲ್ಲಿ ಹಾರುವ ಬೈಕ್ ಬಂದಿದೆ. ಈ ಬೈಕ್ನ ಹೆಸರು AERWINS XTurismo. ಈ ಬೈಕ್ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಗಾಳಿಯಲ್ಲಿ ಬೈಕ್ ಹಾರುತ್ತಿರುವ ಝಲಕ್ ಬೈಕ್ ಪ್ರಿಯರ ಗಮನ ಸೆಳೆಯುತ್ತಿದೆ.
ಗಾಳಿಯಲ್ಲಿ ಹಾರಾಡುವ ಬೈಕ್ ಎಂದಾಗ ಎಷ್ಟೋ ಜನರ ಕಣ್ಣುಗಳು ಅರಳುತ್ತವೆ. ಆದರೆ ಇತ್ತೀಚೆಗೆ ಗಾಳಿಯಲ್ಲಿ ಹಾರುವ ಬೈಕ್ ಸೃಷ್ಟಿಯಾಗಿದೆ. ಈ ಬೈಕ್ ಗಾಳಿಯಲ್ಲಿ ಹಾರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬೈಕ್ ಅನ್ನು ಡ್ರೋನ್ನಂತೆ ವಿನ್ಯಾಸಗೊಳಿಸಲಾಗಿದೆ. ಈ ಬೈಕಿನ ವಿನ್ಯಾಸ ನೋಡಿಯೇ ಈ ಬೈಕ್ ನ ಚರ್ಚೆ ತುಂಬಾ ಆಗುತ್ತಿದೆ. ಗಾಳಿಯಲ್ಲಿ ಹಾರಿದ ವಿಶ್ವದ ಮೊದಲ ಬೈಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಬೈಕ್ ಚರ್ಚೆಗೆ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.
ವಿಶ್ವದ ಮೊದಲ ಹಾರುವ ಬೈಕ್ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. XTURISMO ಹೋವರ್ ಬೈಕು 62 mph ವೇಗದಲ್ಲಿ 40 ನಿಮಿಷಗಳವರೆಗೆ ಹಾರಬಲ್ಲದು. ಈ ಬೈಕಿನ ತೂಕವು ಸರಿಸುಮಾರು 299 ಕೆಜಿ (661 ಪೌಂಡ್) ಆಗಿದೆ. ಈ ಬೈಕಿನ ಒಂದು ಝಲಕ್ ಇತ್ತೀಚೆಗೆ ಅಮೇರಿಕಾದಲ್ಲಿ ತೋರಿಸಲಾಗಿದೆ. ಗಾಳಿಯಲ್ಲಿ ಹಾರಾಡುವ ಬೈಕ್ ಇದ್ದರೂ ಸಹ ಈ ಬೈಕು ಸಾಮಾನ್ಯರ ಕೈಗೆಟುಕುವಂತಿಲ್ಲ. ಏಕೆಂದರೆ ಸದ್ಯಕ್ಕೆ ಈ ಬೈಕ್ ಬೆಲೆ 7 ಲಕ್ಷ 77 ಸಾವಿರ ಡಾಲರ್ ನಷ್ಟಿದೆ. ಆದರೆ ಶೀಘ್ರದಲ್ಲೇ ಇಂತಹ ಬೈಕನ್ನು ಕಡಿಮೆ ಬೆಲೆಯಲ್ಲಿ ಸಹ ಉತ್ಪಾದಿಸಲಾಗುವುದು ಎಂದು ಕಂಪನಿಯ ಸಿಇಒ ಹೇಳಿದ್ದಾರೆ.
ವಿಡಿಯೋ ನೋಡಿ
This is the world's first flying bike. The XTURISMO hoverbike is capable of flying for 40 minutes and can reach speeds of up to 62 mph pic.twitter.com/QYqZmoMMz7
— Reuters Asia (@ReutersAsia) September 16, 2022