Articles

Video: ರಸ್ತೆಯ ಮೇಲೆ ಬೈಕ್ ಚಲಿಸುವಾಗ ಮೂಕ ಪ್ರಾಣಿಗಳು ಕಂಡರೆ ಬೈಕ್ ಸಾವಕಾಶವಾಗಿ ಚಲಿಸಿ, ಇಲ್ಲದಿದ್ದರೆ ಇಂಥ ಘಟನೆ ಸಂಭವಿಸುವದು ಖಚಿತ!!!

ನಗರಗಳಲ್ಲಿ ಸಂಚಾರ ಮಾಡುವಾಗ ಮೈ ಎಲ್ಲಾ ಕಣ್ಣಾಗಿರಬೇಕು, ಇದಕ್ಕೆ ಪ್ರಮುಖ ಕಾರಣ ಏನು ಅನ್ನೋದಾದ್ರೆ ರಸ್ತೆ ನಿಯಮಗಳ ಪಾಲನೆ ಮಾಡದೇ ಇರೋದು. ಹೌದು ನಗರಗಳಲ್ಲಿ ದಿನ ಬೆಳಗಾದರೆ ಸಾಕು ಒಂದಲ್ಲಾ ಒಂದು ವಾಹನ ಅಪಘಾತ ಸಂಭವಿಸುತ್ತಾ ಇರುತ್ತದೆ.‌ ರಸ್ತೆ ಸಂಚಾರ ನಿಯಮಗಳು ಎಂದರೆ ಉಡಾಫೆ ಎನ್ನುವ ಹಾಗೆ ವಾಹನ ಚಾಲನೆ ಮಾಡುವುದು ಅನೇಕರಿಗೆ ಹವ್ಯಾಸವೇ ಆಗಿದೆಯೇನೋ ಎನ್ನುವಂತೆ ಇದೆ. ಅಲ್ಲದೇ ಬಹಳಷ್ಟು ಮಂದಿ ಅತಿಯಾದ ವೇಗ, ಸಿಗ್ನಲ್ ಬ್ರೇಕ್, ಹೆಲ್ಮೆಟ್ ಇಲ್ಲದೇ ದ್ವಿಚಕ್ರ ವಾಹನ ಚಾಲನೆ ಹೀಗೆ ಹತ್ತು ಹಲವು ನಿಯಮಗಳನ್ನು ಮೀರಿ ವಾಹನ ಗಳನ್ನು ಚಾಲನೆ ಮಾಡುವುದು ನಗರಗಳಲ್ಲಿ ಸರ್ವೇ ಸಾಮಾನ್ಯ ಎನಿಸಿದೆ. ಇವೆಲ್ಲವುಗಳ ಜೊತೆಗೆ ಟ್ರಾಫಿಕ್ ಅಥವಾ ರಸ್ತೆಯಲ್ಲಿ ಸಂಚರಿಸುವಾಗ ವಾಹನ ವಾಹನಗಳ ನಡುವೆ ಒಂದು ನಿಯಮಿತವಾದ ಅಂತರ‌ ಕಾಯ್ದುಕೊಳ್ಳುವುದು ಸಹಾ ಅನಿವಾರ್ಯ ಆಗಿರುತ್ತವೆ.

ವಾಹನಗಳ ನಡುವೆ ಅಂತರ ಕಾಯ್ದುಕೊಳ್ಳದೇ ಚಾಲನೆ ಮಾಡಿವುದು ಮತ್ತು ರಸ್ತೆಯ ಮೇಲೆ ಮೂಕ ಪ್ರಾಣಿಗಳ ಅಂದರೆ ದನಗಳು, ಕುರಿಗಳು ಬಂದಾಗ ಸಾವಕಾಶವಾಗಿ ಚಲಾಯಿಸಿದಿದ್ದರೆ ಒಮ್ಮೊಮ್ಮೆ ಅ#ಪಘಾತ ಗಳಿಗೆ ಕಾರಣವಾಗುವ ಅವಕಾಶಗಳು ಇರುತ್ತದೆ. ‌ಕೆಲವರು ಇದನ್ನು ಸಹಾ ಉಡಾಫೆ ಎಂದು ಕೊಳ್ಳಬಹುದು. ಆದರೆ ಇದು ಅಕ್ಷರಶಃ ನಿಜವಾಗಿದೆ. ವಾಹನ ಗಳ ಮತ್ತು ಪ್ರಾಣಿಗಳ ನಡುವೆ ಒಂದು ನಿರ್ದಿಷ್ಟವಾದಂತಹ ಅಂತರವನ್ನು ಕಾಯ್ದುಕೊಳ್ಳದೇ ವಾಹನ ಚಾಲನೆ ಮಾಡಿದರೆ ಅಪಾಯ ತಪ್ಪಿದ್ದಲ್ಲ ಎನ್ನುವುದನ್ನು ತೋರಿಸುವ ಒಂದು ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಈ ವೀಡಿಯೋ ನೋಡಿದ ಮೇಲೆ ರಸ್ತೆಗಳಲ್ಲಿ ವಾಹನಗಳನ್ನು ಚಲಾಯಿಸುವಾಗ ಪ್ರಾಣಿಗಳು ಬಂದರೆ ಸಾವಕಾಶವಾಗಿ ನಡೆಸುವದರ ಅವಶ್ಯಕತೆ ಏನೆಂದು ತಿಳಿಯುತ್ತದೆ.‌

ಪ್ರಸ್ತುತ ವೈರಲ್ ಆಗುತ್ತಿರುವ ಈ ವೀಡಿಯೋದಲ್ಲಿ, ಒಂದು ನಗರದ ಬೀದಿಯಲ್ಲಿ ಒಬ್ಬ ಮಹಿಳೆ ಒಂದು ಎಮ್ಮೆಯನ್ನು ಕರೆದುಕೊಂಡು ತನ್ನಷ್ಟಕ್ಕೆ ತಾನು ಹೊರಟಿರುತ್ತಾಳೆ. ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ಎದುರುಗಡೆಯಿಂದ ಒಬ್ಬ ವ್ಯಕ್ತಿ ಬೈಕ್ ತಗೆದುಕೊಂಡು ಬರುತ್ತಿರುತ್ತಾನೆ. ಅವನು ಬರುತ್ತಿರುವ ಸ್ಪೀಡ್ ನೋಡಿದರೆ ಸುಮಾರು 100 ಕ್ಕೂ ಹೆಚ್ಚು ಸ್ಪೀಡ್ ಇದ್ದಿರಬಹುದು ಎಂದು ಅನಿಸುತ್ತದೆ. ಆ ಬೈಕ್ ಈ ಮೂಕ ಪ್ರಾಣಿಯ ಎದುರು ವೇಗವಾಗಿ ಬರುತ್ತಿದ್ದಂತೆಯೇ ಭಯದಿಂದ ಎಮ್ಮೆ ಬೇರೆ ಕಡೆಗೆ ಹೋಗಬೇಕೆಂದು ರಸ್ತೆಯ ಮೇಲೆ ಮತ್ತೊಂದು ಬದಿಗೆ ಹೋಗಲು ಪ್ರಯತ್ನ ಪಡುತ್ತದೆ, ಅಷ್ಟರಲ್ಲಿ ವೇಗವಾಗಿ ಬರುತ್ತಿದ್ದ ವ್ಯಕ್ತಿಯ ಕಂಟ್ರೋಲ್ ತಪ್ಪಿ ಎಮ್ಮೆ ಆ ಬೈಕ್ ಸವಾರನಿಗೆ ಜೋರಾಗಿ ಡಿಕ್ಕಿ ಹೊಡೆಯುತ್ತದೆ. ಡಿಕ್ಕಿ ಹೊಡೆದೆ ತಕ್ಷಣವೇ ಬೈಕು ಒಂದುಕಡೆ ವ್ಯಕ್ತಿ ಒಂದು ಕಡೆ ಹೋಗಿ ಬೀಳುತ್ತಾನೆ.

ಇದನ್ನು ಕಂಡ ಆ ಮಹಿಳೆ ವ್ಯಕ್ತಿಯನ್ನು ಏನಾಗಿದೆ ಎಂದು ನೋಡಲು ಬರುತ್ತಾಳೆ. ಆ ವ್ಯಕ್ತಿಗೆ ಜೋರಾಗಿ ಪೆಟ್ಟು ಬಿದ್ದಿದ್ದರಿಂದ ಆತನಿಗೆ ಏಳಲು ಸಹ ಸಾಧ್ಯವಾಗದೆ ಅಲ್ಲಿಯೇ ಬಿದ್ದಿರುತ್ತಾನೆ. ಮಹಿಳೆ ಆತನನ್ನು ಮೇಲೆ ಎಬ್ಬಿಸಿ ಕೂಡಿಸುತ್ತಾಳೆ ಆದರೂ ಸಹ ಆತನಿಗೆ ಜ್ಞಾನ ಬರುವದಿಲ್ಲ. ತನ್ನ ಕೈ ಕಾಲು ಜೋರಾಗಿ ಅಲುಗಾಡಿಸುತ್ತ ಒಮ್ಮೆಲೇ ಶಾಂತ ವಾಗುತ್ತಾನೆ. ತದನಂತರ ಅಲ್ಲಿದ್ದ ಜನರು ಬಂದು ಆತನನ್ನು ಎಬ್ಬಿಸಿ ಕರೆದೊಯ್ಯುವ ಪ್ರಯತ್ನ್ ಮಾಡುತ್ತಾರೆ. ಆದರೆ ಆ ವ್ಯಕ್ತಿ ಜೀವಂತ ವಿದ್ದಾನೋ ಅಥವಾ ಮೃತ ಪಟ್ಟಿದ್ದಾನೋ ಅನ್ನೋದು ಮಾತ್ರ ತಳಿದಿಲ್ಲ. ಗೆಳೆಯರೇ ನಿಮಗೆಲ್ಲ ಒಂದು ಕಳಕಳಿಯ ವಿನಂತಿ ನೀವು ಬೈಕ್ ಅಥವಾ ಗಾಡಿ ಚಲಾಯಿಸುವಾಗ ಮೈತುಂಬ ಕಣ್ಣಿಟ್ಟು ಅಂದರೆ ಹಿಂದೆ,ಮುಂದೆ, ಬದಿಗೆ ಲಕ್ಷವಿಟ್ಟು ಚಲಾಯಿಸಿ ಏಕೆಂದರೆ ಯಾವಾಗ ಏನಾಗುತ್ತದೆ ಅಂತ ಹೇಳೋಕೆ ಆಗಲ್ಲ, ಅಲ್ಲದೆ ಇನ್ನೊಂದು ಮಹತ್ವದ ಸಂಗತಿ ಏನೆಂದರೆ ಯಾವಾಗಲೂ ಗಾಡಿ ಮಧ್ಯಮ ಸ್ಪೀಡ್ ನಲ್ಲಿ ಚಲಾಯಿಸಿ.

ವಿಡಿಯೋ ನೋಡಿ

Leave a Comment

Your email address will not be published. Required fields are marked *