“ಸುಶಾಂತ್ ಹೇಗಿದ್ದಾನೆ..?” ಸಾವಿನ ಸುದ್ದಿ ಕೇಳಿ ಪ್ರಾಣ ಬಿಟ್ಟ ಸುಶಾಂತ್ ಅಣ್ಣನ ಹೆಂಡತಿ!
ಬಾಲಿವುಡ್ ಖ್ಯಾತ ನಟ ಹಾಗೂ ಎಂ ಎಸ್ ಧೋನಿ ಬಯೋಪಿಕ್ ನಲ್ಲಿ ನಟಿಸಿ ತುಂಬಾ ಫೇಮಸ್ ಆದ ನಟ ಸುಶಾಂತ್ ಸಿಂಗ್ ರಜಪೂತ್ ಅವರು ರವಿವಾರ ದಂದು ಆಕಸ್ಮಿಕವಾಗಿ ನೇ’ಣಿಗೆ ಶರಣಾದರು. ವೃತ್ತಿಯಲ್ಲಿ ಅವರು ಒಬ್ಬ ಉತ್ತಮ ನಟರಾಗಿದ್ದರು. ಚಿಕ್ಕ ಪರದೆಯಿಂದ ದೊಡ್ಡ ಪರದೆಗೆ ತಲುಪಿದ ಸುಶಾಂತ್ ಬಾಲಿವುಡ್ ಇಂಡಸ್ಟ್ರಿಗೆ ಅನೇಕ ಉತ್ತಮ ಚಿತ್ರಗಳನ್ನು ನೀಡಿದ್ದಾರೆ. ಅವರು ನಟಿಸಿರುವ ಎಂ ಎಸ್ ಧೋನಿ ಬಯೋಪಿಕ್ ಜನರಿಗೆ ತುಂಬಾ ಮೆಚ್ಚಿಗೆ ಆಗಿತ್ತು, ಅಲ್ಲದೇ ಇದರಿಂದ ಅವರು ತಮ್ಮ ವೃತ್ತಿಯಲ್ಲಿ ಇನ್ನಷ್ಟು ಬೇಡಿಕೆ ಹೆಚ್ಚು ಮಾಡಿಕೊಂಡಿದ್ದರು.
ರವಿವಾರದಂದು ಯಾವುದೋ ಕಾರಣಕ್ಕಾಗಿ ತಮ್ಮ ಜೀವನವನ್ನೇ ಕಳೆದುಕೊಂಡಿದ್ದಾರೆ. ಅಷ್ಟಕ್ಕೂ ಅವರು ನೇ’ಣಿಗೆ ಶರಣಾದ ಕಾರಣ ಇನ್ನು ಯಾರಿಗೂ ಗೊತ್ತಾಗಿಲ್ಲ. ಮಾನಸಿಕ ಒತ್ತಡ ಎನ್ನೋದು ತುಂಬಾ ಕೆಟ್ಟದ್ದು. ನಮ್ಮ ಹತ್ತಿರ ಎಲ್ಲವೂ ಇದ್ದು ಮಾನಸಿಕ ಒತ್ತಡ ಒಂದು ಅವುಗಳೇಲ್ಲವನ್ನು ಇಲ್ಲದಂತಾಗಿಸುವದು. ಸುಶಾಂತ್ ಹತ್ತಿರ ಎಲ್ಲ ಪ್ರಕಾರದ ಸೌಲಭ್ಯ ಇದ್ದರೂ ಸಹ ತಂದೆ ತಾಯಿ ಮತ್ತು ಕುಟುಂಬದವರ ಯೋಚನೆ ಮಾಡದೆ ತಮ್ಮ ಮಾನಸಿಕ ಒತ್ತಡದಿಂದ ಈ ಪ್ರಕಾರದ ನಿರ್ಣಯ ತಗೆದುಕೊಂಡಿದ್ದು ಅತ್ಯಂತ ದುಃಖದ ಸಂಗತಿಯಾಗಿದೆ.

ಅವರ ಕುಟುಂಬದಲ್ಲಿ ಅವರ ತಂದೆ ಅಣ್ಣ ಹಾಗೂ ಅತ್ತಿಗೆ ವಾಸವಾಗಿದ್ದಾರೆ. ಆದರೆ ಅವರ ದಾಯಾದಿ ಅಣ್ಣನ ಹೆಂಡತಿ ಇವರನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಕೆಲವು ದಿವಸಗಳ ಹಿಂದೆ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ಸ್ವಲ್ಪ ಮಟ್ಟಿಗೆ ಗುಣಮುಖ ರಾಗಿದ್ದರಿಂದ ಅವರನ್ನು ತಮ್ಮ ಮನೆಗೆ ಕರೆದುಕೊಂಡು ಬಂದಿದ್ದರು. ಮೊದಲೇ ಅನಾರೋಗ್ಯದಿಂದ ಬಳಲುತ್ತಿರುವ ಸುಧಾ ದೇವಿಯವರಿಗೆ ಸುಶಾಂತ್ ಅವರ ವಿಷಯ ತಿಳಿದಕೂಡಲೇ ಅವರ ಕಾಲು ಕೆಳಗಿನ ಭೂಮಿ ಸರಿದಂತಾಗಿ ತಕ್ಷಣ ಅವರ ಆರೋಗ್ಯ ಇನ್ನಷ್ಟು ಹದಗೆಡಲು ಪ್ರಾರಂಭವಾಯಿತು. ಕುಳಿತಾಗ ಎದ್ದಾಗ, ಮಲಗಿದಾಗ ಸುಶಾಂತ್ ಸುಶಾಂತ್ ಎಂದು ತಮ್ಮಷ್ಟಕ್ಕೆ ತಾವೇ ಗೊಣಗುತ್ತಿದ್ದರು. ಮನೆಯ ಮುಂದೆ ಜನರು ಬಂದಾಗ ನನ್ನ ಸುಶಾಂತ್ ಬಂದಿದ್ದಾನೆ ಎಂದು ತಾವೇ ಬಡಬಡಿಸುತ್ತಿದ್ದರು.
ಸುಧಾದೇವಿಯವರ ಪತಿ ಸುರೇಂದ್ರ ಸಿಂಗ್ ಹೇಳಿಕೆಯ ಪ್ರಕಾರ, ‘ಸೋಮವಾರ ಸುಧಾದೇವಿಯ ಆರೋಗ್ಯ ತುಂಬಾ ಹದಗೆಟ್ಟಿತು, ಅಲ್ಲದೆ ಸುಮಾರು ಸಾಯಂಕಾಲ 5 ಗಂಟೆಗೆ ಅವರು ನಮ್ಮನ್ನೆಲ್ಲ ಬಿಟ್ಟು ಅಗಲಿದರು. ಮೊದಲು ನನ್ನ ತಮ್ಮ ಈಗ ನನ್ನ ಹೆಂಡತಿ ನನ್ನ ಬಿಟ್ಟು ಹೋದರು ನಾನು ಯಾರಿಗೋಸ್ಕರ ಬದುಕಲಿ ?’ ಎಂದು ದುಃಖ ಪಡುತ್ತಿದ್ದಾರೆ.