ಈ ಪುಟ್ಟನ ಧೈರ್ಯ ನೋಡಿ ಅಬ್ಬಾ! ಏನದು ಡೈ? ಎನ್ನುವಿರಿ. ಮರುಕ್ಷಣವೇ ಬಿದ್ದು ಬಿದ್ದು ನಗುವಿರಿ…
ಸೋಶಿಯಲ್ ಮೀಡಿಯಾದಲ್ಲಿ ಮಕ್ಕಳ ವಿಡಿಯೋಗಳು ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗುತ್ತದೆ. ಇಂಥ ವಿಡಿಯೋಗಳು ಸಾಕಷ್ಟು ವೈರಲ್ ಆಗುವುದು ಉಂಟು. ಮಕ್ಕಳ ಮುಗ್ಧ ಭಾವಗಳು ನೆಟ್ಟಿಗರಿಗೆ ತಮ್ಮ ಕಡೆಗೆ ಸೆಳೆಯುತ್ತವೆ. ಸದ್ಯ ಇದೇ ರೀತಿಯ ಪುಟ್ಟನ ಒಂದು ವೈರಲ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಅಂತಹ ಸ್ಪೆಷಲ್ ವಿಡಿಯೋ ಇದಾಗಿದೆ.
ಈ ವಿಡಿಯೋದಲ್ಲಿ ಕಂಡು ಬರುವ ಮಗುವಿನ ಕರಾಮತ್ತು ನೋಡಿ ಮೊದಲು ಆಶ್ಚರ್ಯ ಪಡುವಿರಿ, ಮರಕ್ಷಣವೇ ಆತನ ಚಟುವಟಿಕೆ ನೋಡಿ ನಕು ನಕ್ಕು ಸಾಕಾಗುತ್ತದೆ. ಪ್ರಸ್ತುತ ವಿಡಿಯೋದ ದೃಶ್ಯದಲ್ಲಿ ಕಂಡು ಬರುವ ಹಾಗೆ ಮಗು ದೂರ ನಿಂತ ನಾಯಿಯನ್ನು ಹೆದರಿಸಿ ಓಡಿಸುವ ಪ್ರಯತ್ನದಲ್ಲಿದ್ದಾನೆ. ಅದಕ್ಕಾಗಿ ದೂರದಲ್ಲಿ ನಿಂತು ಬೊಗಳುತ್ತಿರುವ ನಾಯಿಯ ಕಡೆಗೆ ದೊಡ್ಡ ಮನುಷ್ಯನ ಹಾಗೆ ತುಂಬಾ ಡೈರಿಂಗ್ ನಿಂದ ಹೋಗುತ್ತಾನೆ. ಆತನ ಈ ದೃಶ್ಯ ನೋಡಿದ ನಂತರ ನೋಡುಗರಿಗೆ ನಿಜಕ್ಕೂ ಹುಡುಗನ ಡೈರಿಂಗ್ ಬಗ್ಗೆ ತುಂಬಾ ವಿಶೇಷತೆ ಎನಿಸುತ್ತದೆ. ಅಷ್ಟರಲ್ಲಿ ಅಲ್ಲಿ ಬೇರೊಂದು ಘಟನೆ ನಡೆಯುತ್ತದೆ. ಆ ದೃಶ್ಯ ನೆಟ್ಟಿಗರಿಗೆ ತುಂಬಾನೇ ಹಿಡಿಸಿದೆ. ಅದೇನೆಂದರೆ ಮಗು ಧೈರ್ಯದಿಂದ ನಾಯಿಯನ್ನು ಹೊಡೆದೋಡಿಸಲು ಹೋಗುತ್ತಾನೆನೋ ನಿಜ, ಆದರೆ ನಾಯಿಯೂ ಸಹ ಇಲ್ಲಿ ತನ್ನ ಬುದ್ಧಿವಂತಿಕೆಯನ್ನು ಪ್ರಯೋಗಿಸಿ ಪುಟ್ಟನ ಡೈರಿಂಗ್ ಮೇಲೆ ಬಲವಾದ ಅಟ್ಯಾಕ್ ಮಾಡಿದೆ. ಅದು ಬೊಗಳುತ್ತಾ ಪುಟ್ಟನ ಕಡೆಗೆ ಬಂದಾಗ ಪುಟ್ಟನ ಧೈರ್ಯ ಒಮ್ಮೆಲೆ ನೆಲಕಚ್ಚಿದೆ. ಹಾಗಾಗಿ ಕ್ಷಣದಲ್ಲಿ ಗಾಡಿ ತಿರುಗಿ ಪೋಷಕರ ಕಡೆಗೆ ಅಳುತ್ತಾ ಹೊರಳಿದೆ. ಈ ದೃಶ್ಯವೂ ನೋಡಲು ಎಲ್ಲರಿಗೂ ತುಂಬಾನೇ ಹಿಡಿಸಿದೆ.
ವೀಡಿಯೋ ನೋಡಿ
View this post on Instagram
ಪ್ರಸುತ ಈ ಎರಡು ಮುಗ್ಧ ಜೀವಿಗಳ ಮನಮೋಹಕ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ emretekral ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ ದಾಖಲೆಯ 66.5 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ. ಜೊತೆಗೆ 4.2 ಮಿಲಿಯನ್ ಲೈಕ್ಸ್ ಗಳನ್ನು ಹೊಂದಿದೆ. ಹೇಗಿದೆ ಫ್ರೆಂಡ್ಸ್ ಈ ವಿಡಿಯೋ? ನಿಜಕ್ಕೂ ಸೂಪರ್ ಆಗಿದೆ ಅಲ್ವಾ?