Video; ತಂದೆ ತನ್ನ ಪುಟ್ಟ ಮಗಳಿಗೆ ಹಚ್ಚಿದ ನೇಲ್ ಪೇಂಟ್; ನಂತರದ ದೃಶ್ಯ ಮಾತ್ರ ಸೂಪರ್ ಆಗಿತ್ತು ಎನ್ನುವಿರಿ.
ತಂದೆ ಮತ್ತು ಮಗಳ ಸಂಬಂಧ ತುಂಬಾ ವಾತ್ಸಲ್ಯ ಹಾಗೂ ವಿಶೇಷತೆಯಿಂದ ಕೂಡಿರುತ್ತದೆ. ಹುಡುಗರಿಗಿಂತ ಹುಡುಗಿಯರು ತಂದೆಗೆ ಹೆಚ್ಚು ನಿಕಟವರ್ತಿಯರಾಗಿರುತ್ತಾರೆ. ಆದರೆ ಗಂಡು ಮಕ್ಕಳು ಮಾತ್ರ ತಾಯಿಗೆ ಹೆಚ್ಚು ಹಚ್ಚಿಕೊಂಡಿರುತ್ತಾರೆ. ಹೆಣ್ಣು ಮಕ್ಕಳು ತಾಯಿಯ ಜೊತೆಗೆ ಹೆಚ್ಚು ಸಮಯ ಕಳೆದರೂ ಸಹ ತಂದೆಯ ಜೊತೆಗೆ ಒಲವು ಜಾಸ್ತಿ ಇರುವುದು ಕಂಡು ಬರುತ್ತದೆ. ಇದೇ ರೀತಿ ತಂದೆಯರೂ ಸಹ ಹುಡುಗರಿಗಿಂತ ಹುಡುಗಿಯರಿಗೆ ಹೆಚ್ಚು ಮುದ್ದು ಮಾಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಒಂದು ಹರಿದಾಡುತ್ತಿರುವ ವಿಡಿಯೋ ಇದನ್ನೇ ತೋರಿಸುತ್ತದೆ. ಈ ವಿಡಿಯೋ ನೋಡಿದಾಗ ಮನತಟ್ಟುವದು ನಿಜ.
ಈ ವಿಡಿಯೋದಲ್ಲಿ ತಂದೆ ತನ್ನ ಮಗಳಿಗೆ ನೇಲ್ ಪೇಂಟ್ ಮಾಡುತ್ತಿರುವುದು ಕಂಡು ಬರುತ್ತಿದೆ. ಇದಕ್ಕೆ ಮಗಳೂ ಸಹ ತುಂಬಾ ಚೆನ್ನಾಗಿ ಸ್ಪಂಧಿಸುತ್ತಿದ್ದಾಳೆ. ತಂದೆ-ಮಗಳು ಇಬ್ಬರೂ ತುಂಬಾ ಚೆನ್ನಾಗಿ ಗಮನ ಹರಿಸಿ ಈ ಕೆಲಸವನ್ನು ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಮಗಳು ಎರಡನೆಯ ಕೈಗೆ ಹಚ್ಚಿದ ನೇಲ್ ಪೇಂಟ್ ನ್ನು ಬಾಯಿಯಿಂದ ಊದಿ ಡ್ರೈ ಮಾಡುತ್ತಿದ್ದಾಳೆ. ನಂತರ ಅಪ್ಪ ಬೇರೆ ಕೈಗೂ ನೇಲ್ ಪೇಂಟ್ ಹಚ್ಚಿದ ನಂತರ ಮೊದಲು ಅದಕ್ಕೂ ಬಾಯಿಯಿಂದ ಊದಿ ಆರಿಸುತ್ತಾಳೆ. ಮತ್ತು ಕೊನೆಗೆ ತನ್ನ ತಂದೆಗೆ ಪ್ರೀತಿಯಿಂದ ಗಲ್ಲಕ್ಕೆ ಮುತ್ತು ಕೊಡುತ್ತಾಳೆ. ಈ ಸುಂದರವಾದ ಎಮೋಷನಲ್ ವಿಡಿಯೋ ನೇಟಿಜನ್ಸ್ ಗಳ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ನೋಡಿ ತಂದೆ ಮತ್ತು ಮಗಳ ಈ ಸುಂದರ ವಿಡಿಯೋ…
पिता की तरह कोई बेटी का ख्याल रख पाए,
यह बात तो बस एक ख़याल ही लगती है..!!
💕 pic.twitter.com/Dh68JapigX— Sanjay Kumar, Dy. Collector (@dc_sanjay_jas) September 16, 2022
ತಂದೆ ಮತ್ತು ಮಗಳ ಈ ಕ್ಯೂಟ್ ವಿಡಿಯೋ ಜಾರ್ಖಂಡನ ಡೆಪ್ಯೂಟಿ ಕಲೆಕ್ಟರ್ ಸಂಜಯ್ ಕುಮಾರ್ ಅವರು ತಮ್ಮ ಟ್ವಿಟರ್ ಹ್ಯಾಂಡಲ್ ನಿಂದ ಶೇರ್ ಮಾಡಿ, ‘ತಂದೆಯ ಹಾಗೆ ಮಗಳ ಕಾಳಜಿ ತೆಗೆದುಕೊಳ್ಳುವವರು ಯಾರಾದರೂ ಇದ್ದಾರೆಯೇ? ಈ ವಿಷಯ ಬರಿ ಆಲೋಚನೆ ಅಷ್ಟೇ!’ ಎಂದು ಕ್ಯಾಪ್ಷನ್ ನೀಡಿದ್ದಾರೆ. ಕೇವಲ ಹತ್ತು ಸೆಕೆಂಡುಗಳ ಈ ವಿಡಿಯೋವನ್ನು ಇಲ್ಲಿಯವರೆಗೆ ಸಾವಿರಾರು ಜನರು ನೋಡಿದ್ದಾರೆ.