ಪುಟ್ಟಿಗೆ kurkure ಕೇಳಿದಾಗ ತೋರಿದಳು ಎಂಥ ದೊಡ್ಡ ಮನಸ್ಸು! Video ಕಲಿಸುವುದು ದೊಡ್ಡ ಪಾಠ.
ಮಕ್ಕಳ ಕೈಯಲ್ಲಿ ಯಾವುದೇ ಮತ್ತು ಎಂಥದ್ದೇ ವಸ್ತು ಇರಲಿ ಅದನ್ನು ಅವರು ಎಂದಿಗೂ ಯಾರಿಗೂ ಶೇರ್ ಮಾಡಲು ಬಯಸುವುದಿಲ್ಲ. ಇಂದು ಅವರು ತಂದೆ ತಾಯಿಯೇ ಆಗಿರಲಿ ಆ ಮಾತು ಬೇರೆ. ಆದರೆ ಪ್ರತಿಯೊಂದು ಮಕ್ಕಳು ಹೀಗಿರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಮಕ್ಕಳು ಈ ವಿಡಿಯೋದಲ್ಲಿ ಕಾಣುವಂಥ ಹುಡುಗಿಯ ಹಾಗೆಯೂ ಇರುತ್ತಾರೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಅನೇಕ ವೀಡಿಯೊಗಳನ್ನು ನೋಡುತ್ತೇವೆ. ಕೆಲವು ಸಲ ವಿಶೇಷ ದೃಶ್ಯಗಳನ್ನು ನೋಡಿದಾಗ ಮಾತ್ರ ಬೆರಳುಗಳು ಸ್ಕ್ರೋಲ್ ಮಾಡುವದನ್ನು ನಿಲ್ಲಿಸಿ ಬಿಡುತ್ತವೆ. ನಂತರ ಭರ್ಜರಿಯಾಗಿ ಲೈಕ್ ಮತ್ತು ಶೇರ್ ಆಗಿ ಬಿಡುತ್ತವೆ. ಸದ್ಯ ಈ ವಿಡಿಯೋ ನೋಡಿದಾಗಲೂ ಹೀಗೆಯೇ ಆಗುತ್ತದೆ ಎನಿಸುತ್ತದೆ.
ಪ್ರಸ್ತುತ ವಿಡಿಯೋ ಎಂಥವರ ಮನಸ್ಸನ್ನೂ ಸಹ ಫ್ರೆಶ್ ಮಾಡುತ್ತದೆ. ವಿಡಿಯೋದ ದೃಶ್ಯದಲ್ಲಿ ಮಕ್ಕಳ ಗುಂಪೊಂದು ಕುಳಿತು ಕುರ್ರ್ಕುರೆ ಸ್ವಾದದ ಮಜಾ ತೆಗೆದುಕೊಳ್ಳುತ್ತಿದ್ದಾರೆ. ಏತನ್ಮಧ್ಯೆ ಅಲ್ಲಿ ವ್ಯಕ್ತಿಯೊಬ್ಬ ಬಂದು ಒಂದು ಹುಡುಗಿಗೆ kurkure ಕೊಡೆಂದು ಕೈ ಚಾಚಿ ಕೇಳುತ್ತಾನೆ. ಆಗ ಮುಗ್ಧ ಹುಡುಗಿ ಒಂದು ಕ್ಷಣವು ಹಿಂದೆ ಮುಂದೆ ಯೋಚಿಸದೆ ಪ್ಯಾಕೆಟ್ ನಲ್ಲಿ ಕೈ ಹಾಕಿ ಕೈತುಂಬಿ ಕುರ್ಕುರೆಗಳನ್ನು ಕೊಡಲು ಮುಂದಾಗುತ್ತಾಳೆ. ಹುಡುಗಿಯ ಈ ದೊಡ್ಡ ಮನಸ್ಸನ್ನು ನೋಡಿ ಎದುರಿನ ವ್ಯಕ್ತಿ ಮಂತ್ರಮುಗ್ಧನಾಗುತ್ತಾನೆ. ಬಹುಶಃ ಈ ವಿಡಿಯೋದಲ್ಲಿ ಆತ ಹುಡುಗಿಯ ರಿಯಾಕ್ಷನ್ ಸೆರೆ ಹಿಡಿಯಬೇಕೆಂದಿದ್ದ ಆದರೆ ತಾನೇ ಆಕೆಯ ದೊಡ್ಡ ಮನಸ್ಸಿನಲ್ಲಿ ಮರುಳನಾಗಿಬಿಟ್ಟಿದ್ದಾನೆ.
ವಿಡಿಯೋ ನೋಡಿ
Baby Girl Has a Big Heart… 😀#Schools #JammuAndKashmir #UPSC #TejRan #ViralVideo #RashmikaMandanna #TejasswiPrakash pic.twitter.com/CqjnpP7Ujf
— Avesh🖤 (@Tera_yarr_hu) September 16, 2022
ಮನ ಗೆಲ್ಲುವ ಈ ಸುಂದರವಾದ ವಿಡಿಯೋವನ್ನು @shin_zu69 ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ಈ ವಿಡಿಯೋ ಇಲ್ಲಿಯವರೆಗೆ 3 ಮಿಲಿಯನ್ ಗಿಂತಲೂ ಹೆಚ್ಚಿಗೆ ವೀಕ್ಷಣೆಯನ್ನು ಪಡೆದಿದೆ. ಹುಡುಗಿಯು ತೋರಿಸಿದ ದೊಡ್ಡ ಮನಸ್ಸನ್ನು ನೆಟ್ಟಿಗರು ಬಾಯಿ ತುಂಬಿ ಹೊಗಳಿದ್ದಾರೆ. ತಮ್ಮ ಪ್ರತಿಕ್ರಿಯೆಯಲ್ಲಿ ಆಕೆಯ ಈ ದೊಡ್ಡಸ್ತಿಕೆಗೆ ಪ್ರಶಂಸೆ ಮಾಡಿದ್ದೇ ಮಾಡಿದ್ದು. ಹುಡುಗಿಯ ವಯಸ್ಸಿಗೆ ಹೋಲಿಸಿದರೆ ಆಕೆಯ ಮನಸ್ಸು ತುಂಬಾನೇ ದೊಡ್ಡದು ಎಂದು ಕಮೆಂಟ್ ಮಾಡಿದ್ದಾರೆ.