Video; ಬಾಹುಬಲಿ ಆನೆ ಮೇಲೆ ಸವಾರಿ ಮಾಡಿದರೆ, ಪುಟ್ಟ ಬಾಹುಬಲಿ ಎಮ್ಮೆಯ ಮೇಲೆ ಸವಾರಿ ಮಾಡಿದ ಸ್ಟೈಲ್ ನೋಡಿ.

ಅನೇಕ ಮಕ್ಕಳಲ್ಲಿ ಕ್ರಿಯೇಟಿವಿಟಿ ಭಾರೀ ಅಡಗಿರುತ್ತದೆ. ಅವರ ಮನಸ್ಸಿನ ಮೇಲೆ ಗಾಢವಾಗಿ ಪರಿಣಾಮ ಬೀರಿದ ವಿಷಯಗಳ ಬಗ್ಗೆ ಏನಾದರೂ ಯೋಚನೆ ಮಾಡುತ್ತಿರುತ್ತಾರೆ. ಮತ್ತು ಅದರಂತೆ ತಾನು ಮಾಡಬೇಕು ಎಂಬ ಹಂಬಲ ಹೊಂದಿರುತ್ತಾರೆ. ಅವಕಾಶ ಸಿಗುವದೇ ತಡ ಅದು ತಾನಾಗಿಯೇ ಹೊರಗೆ ಬೀಳಲು ಜಾಸ್ತಿ ಸಮಯ ಬೇಕಾಗುವುದಿಲ್ಲ. ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿಯ ಒಂದು ವಿಡಿಯೋ ನಿಮಗಾಗಿ ತಂದಿದ್ದೇವೆ. ಈ ವಿಡಿಯೋ ನೋಡಿದ ನಂತರ ಹುಡುಗನ ಸೃಜನಶೀಲತೆಗೆ ನಕ್ಕು ಒಂದು ಮೆಚ್ಚುಗೆ ನೀಡುವಿರಿ ಎನಿಸುತ್ತದೆ.

ವಿಡಿಯೋದ ಈ ದೃಶ್ಯದಲ್ಲಿ ತುಂಬಾ ವಿಶೇಷ ಅನ್ನುವಂಥದ್ದು ಏನಿಲ್ಲ. ಆದರೆ ಹುಡುಗನು ತನ್ನ ಒಂದು ಚಿಕ್ಕ ಕೆಲಸ ಮಾತ್ರ ತುಂಬಾ ಈಜಿಯಾಗಿ ಮಾಡಿಕೊಂಡಿದ್ದಾನೆ. ಇದರ ಹಿಂದಿನ ಪ್ರೇರಣೆ ಬಾಹುಬಲಿ ಚಿತ್ರ ಎನ್ನಬಹುದು. ಈ ಚಿತ್ರದ ಹಾಡಿನಲ್ಲಿ ನಟ ಪ್ರಭಾಸ ಆನೆಯ ಮೇಲೆ ತುಂಬಾ ಸಹಜವಾಗಿ ಏರಿ ಸವಾರಿ ಮಾಡುತ್ತಾನೆ, ಅಥವಾ ಆನೆಯು ಆತನನ್ನು ತುಂಬಾ ಸಹಜವಾಗಿ ತನ್ನ ಬೆನ್ನ ಮೇಲೆ ಏರಿಸಿಕೊಳ್ಳುತ್ತದೆ ಅಲ್ವಾ? ಈಗ ಸೇಮ್ ಟು ಸೇಮ್ ಇದೇ ರೀತಿಯಲ್ಲಿ ಹುಡುಗ ತನ್ನ ಎಮ್ಮೆಯ ಮೇಲೆ ಏರಿ ಕುಳಿತಿದ್ದಾನೆ. ಈ ಕ್ರಿಯೇಟಿವಿಟಿ ನೋಡಲು ತಮಾಷೆಯೂ ಆಗಿದೆ. ಹುಡುಗ ಎಮ್ಮೆಯ ಮುಂದೆ ಬಂದು ಅದರ ಕುತ್ತಿಗೆಯ ಮೇಲೆ ಕುಳಿತುಕೊಳ್ಳಲು ಅದು ಅನಾಮತ್ತಾಗಿ ಆತನಿಗೆ ತನ್ನ ಬೆನ್ನ ಮೇಲೆ ಕುಳ್ಳಿರಿಸಿಕೊಳ್ಳುತ್ತದೆ. ಹುಡುಗನ ಯೋಚನೆಗೆ ತಕ್ಕಂತೆ ಎಮ್ಮೆಯೂ ಇಲ್ಲಿ ಜಾಣತನದಿಂದ ವರ್ತಿಸಿದ್ದನ್ನು ನೋಡಬಹುದು.

ವೀಡಿಯೋ ನೋಡಿ

 

View this post on Instagram

 

A post shared by Nawab Uddin (@hello.nawab)

ಪ್ರಸ್ತುತ ವಿಡಿಯೋ ಇನ್ಸ್ಟಾ ಗ್ರಾಮ್ ನಲ್ಲಿ hello.nawab ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ನೆಟ್ಟಿಗರಿಗೆ ಈ ವಿಡಿಯೋ ತುಂಬಾನೇ ಹಿಡಿಸಿದೆ. ಪ್ರಸ್ತುತ ವಿಡಿಯೋಗೆ ಲಕ್ಷಾವಧಿ ಲೈಕ್ಸ್ ಗಳು ದೊರಕಿವೆ.