Video; ಕಾರಣವಿಲ್ಲದೆ ಎಲ್ಲಿ ಬೇಕಾದಲ್ಲಿ ಇಣುಕಿ ನೋಡಿದರೆ ಆಗುವದು ಹೀಗೆಯೇ! ಖತರ್ನಾಕ್ ಕಾಮಿಡಿ…
ನಕ್ಕು ನಗಿಸುವ ವಿಡಿಯೋ ಎಲ್ಲರಿಗೂ ಇಷ್ಟವಾಗುತ್ತವೆ. ಹಾಗೂ ಕೆಚ್ಚು ಕಡಿಮೆ ಕೆಲವರನ್ನೇ ಬಿಟ್ಟು ಜಾಸ್ತಿ ಜನ ನಗು ನಗುತ್ತಲೇ ಇರಬೇಕೆಂದು ಆಸೆ ಪಡುತ್ತಾರೆ. ಇಂಥವರಿಗಾಗಿಯೇ ತುಂಬಾ ಸಖತ್ ಕಾಮಿಡಿ ವಿಡಿಯೋ ಒಂದನ್ನು ತಂದಿದ್ದೇವೆ ಜೊತೆಗೆ ಒಂದು ಮಾರ್ಮಿಕವಾದ ಪಾಠವೂ ನೀಡುತ್ತದೆ.
ಸಾಕಷ್ಟು ಜನರು ಯಾವುದಾದರೂ ತೂತು ಅಥವಾ ಹೋಲ್ ಕಾಣಿಸಿದರೆ ಸಾಕು ಅದರಲ್ಲೇನಿದೆ ಎಂದು ತಿಳಿಯಲು ಇಣುಕಿ ನೋಡುವ ಕೆಟ್ಟ ಚಟ ಅಥವಾ ದುರಭ್ಯಾಸ ಹೊಂದಿರುತ್ತಾರೆ. ಈ ಅಭ್ಯಾಸವನ್ನೇ ಮುಂದೆ ಮಾಡಿ ಪ್ರ್ಯಾಂಕ್ ವಿಡಿಯೋ ಒಂದನ್ನು ತಯಾರಿಸಿದ್ದಾರೆ. ಈ ವಿಡಿಯೋ ನೋಡಿದ ನಂತರ ನಕ್ಕು ನಾಲ್ಕು ಸಾಕಾಗುತ್ತದೆ.
ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನಷ್ಟಕ್ಕೆ ತಾನು ಕೆಲಸಕ್ಕೆ ಹೋಗುತ್ತಿರುತ್ತಾನೆ ದಾರಿ ಮಧ್ಯೆ ಒಂದು ಕ್ಯಾಬಿನ್ ಕಂಡು ಬರುತ್ತದೆ. ಅದಕ್ಕೆ ಒಳಗೆ ಮುಖ ತೂರಿಸಲು ಬರುವಷ್ಟೇ ಹೋಲ್ ಇದೆ. ಪ್ರಸ್ತುತ ವ್ಯಕ್ತಿ ತನ್ನಷ್ಟಕ್ಕೆ ತಾನು ತನ್ನ ಕೆಲಸಕ್ಕೆ ಹೋಗಬಾರದೇ? ಅದನ್ನು ಬಿಟ್ಟು ಕ್ಯಾಬಿನ್ ಒಳಗಡೆ ಏನಿದೆ ಎಂದು ನೋಡಲು ಆ ಹೋಲ್ ಒಳಗೆ ಮುಖ ತೂರಿಸುತ್ತಾನೆ. ಆತ ಒಳಗೆ ಮುಖ ತೂರಿಸುವದಷ್ಟೇ ತಡ ಒಳಗಿನಿಂದ ಜೋರಾಗಿ ಕೇಕ್ ನಂತಹ ಪದಾರ್ಥವನ್ನು ಮುಖಕ್ಕೆ ಜೋರಾಗಿ ಹೊಡೆಯುತ್ತಾರೆ. ಆಕಸ್ಮಿಕ ನಡೆದ ಘಟನೆಯಿಂದ ವ್ಯಕ್ತಿ ತಬ್ಬಿಬ್ಬಾಗಿ ಕ್ಷಣದಲ್ಲಿ ರೋಷ ಉಕ್ಕಿ ಹರಿದು ಬರುತ್ತದೆ. ಮತ್ತು ಒಳಗಿರುವ ವ್ಯಕ್ತಿಯ ವಿರುದ್ಧ ಗರಂ ಆಗಿ ಆತನಿಗೆ ಹೊಡೆಯಲು ಅತ್ತಿತ್ತ ಹುಚ್ಚನಂತೆ ತಿರುಗಿಯೇ ತಿರುಗುತ್ತಾನೆ. ಆತನಿಗೆ ಬಾಗಿಲು ಮಾತ್ರ ಸಿಗುವುದೇ ಇಲ್ಲ. ಆತನ ಪೀಕಲಾಟ ಮಾತ್ರ ನೋಡುವರು ಹೊಟ್ಟೆ ಹುಣ್ಣಾಗುವಂತೆ ನಕ್ಕೇ ನಗುತ್ತಾರೆ.
ವಿಡಿಯೋ ನೋಡಿ
https://twitter.com/Wtfmomentes/status/1572232183607357442?ref_src=twsrc%5Etfw%7Ctwcamp%5Etweetembed%7Ctwterm%5E1572232183607357442%7Ctwgr%5E967a312b34d9cc7d84403effcbd6d88f6778d02d%7Ctwcon%5Es1_c10&ref_url=https%3A%2F%2Fwww.tv9hindi.com%2Ftrending%2Fhilarious-prank-video-went-viral-on-social-media-netizens-says-whoops-au221-1467227.html
ಪ್ರಸ್ತುತ ಈ ಪ್ರ್ಯಾಂಕ್ ವಿಡಿಯೋವನ್ನು ಟ್ವಿಟರ್ ನಲ್ಲಿ @Wtfmomentes ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 3 ಮಿಲಿಯನ್ ಗಿಂತಲೂ ಮೀರಿ ವೀಕ್ಷಣೆಯನ್ನು ಪಡೆದಿದೆ.