‘ವರ್ಲ್ಡ್ ಬೆಸ್ಟ್ ಸ್ಕೂಲ್’ ಮುಕುಟ ತನ್ನ ಮುಡಿಗೆ ಏರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು ಈ ಶಾಲೆ! ಪ್ರೈಸ್ ಗೆದ್ದಿತು 2 ಕೋಟಿ ₹..!
‘ವರ್ಲ್ಡ್ ಬೆಸ್ಟ್ ಸ್ಕೂಲ್’ ಪ್ರೈಸ್ ಬ್ರಿಟನ್ ನಲ್ಲಿ ಲಾಂಚ್ ಮಾಡಲಾಗಿದೆ. ಪ್ರಸ್ತುತ ಬಹುಮಾನದ ಹಿಂದಿನ ಮುಖ್ಯ ಉದ್ದೇಶ ಜಗತ್ತಿನಲ್ಲಿ ಶಾಲೆಗಳು ಸಮಾಜದ ಪ್ರಗತಿಯಲ್ಲಿ ಎಷ್ಟೊಂದು ಮಹತ್ವದ ಭಾಗ ತೆಗೆದುಕೊಂಡಿದೆ ಎಂಬುದು ನೋಡುವದಾಗಿದೆ. ಮತ್ತು ಇದನ್ನು ಸೆಲೆಬ್ರೇಟ್ ಮಾಡುವುದಿದೆ. ಈ ಸ್ಪರ್ಧೆಯಲ್ಲಿ ಭಾರತದ ಶಾಲೆಯೊಂದು ಜಗತ್ತಿನಲ್ಲಿಯೇ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದೆ. ಯಾವುದು ಆ ಶಾಲೆ ಬನ್ನಿ ತಿಳಿಯೋಣ.
ಮಹಾರಾಷ್ಟ್ರದ ಪುಣೆ ಹತ್ತಿರದ ಭೋಪಖೆಲ್ ಹೆಸರಿನ ಒಂದು ಚಿಕ್ಕ ಊರಿನಲ್ಲಿಯ ಶಾಲೆಯೊಂದು ಜಗತ್ತಿನಲ್ಲಿಯೇ ಇಂದು ಹೆಸರು ಪಡೆದಿದೆ. ಕಾರಣ ಜಗತ್ತಿನ 3 ಒಳ್ಳೆಯ ಶಾಲೆಗಳಲ್ಲಿ ಹೆಸರು ಪಡೆದು ಕೊನೆಗೆ ಫೈನಲಿಸ್ಟ್ ಆಗಿ ಹೊರ ಹೊಮ್ಮಿದೆ. ಈ ಸ್ಪರ್ಧೆಯಲ್ಲಿ ಗೆದ್ದ ಶಾಲೆಗೆ 2,50,000 ಡಾಲರ್ ಅಂದರೆ ಸುಮಾರು 2 ಕೋಟಿ ರೂಪಾಯಿಗಳನ್ನು ನೀಡಲಾಗುವದು. ಇಲ್ಲಿಯ ಆಂಗ್ಲ ಮಾಧ್ಯಮದ ಶಾಲೆ “ಕಮ್ಯೂನಿಟಿ ಕೊಲೇಬೋರೇಶನ್ ಕೇಟೆಗರಿ” ಯ ಪಬ್ಲಿಕ್ ಎಡ್ವಾಯಜರಿ ರೌಂಡ್ ನಲ್ಲಿ ಜಗತ್ತಿನಲ್ಲಿಯ ಎಲ್ಲ ಶಾಲೆಗಳಿಗೂ ಮೀರಿ ಮುಂದೆ ಹೋಗಿದೆ. ಪ್ರಸ್ತುತ ಶಾಲೆಗೆ ಮುಂದಿನ ಎಜುಕೇಶನ್ ವೀಕ್ ನಲ್ಲಿ ಸನ್ಮಾನಿಸಲಾಗುವುದು.
ಈ ಶಾಲೆಯನ್ನು NGO ಆಕಾಂಕ್ಷಾ ಫೌಂಡೇಶನ್ ಮತ್ತು ಲೋಕಲ್ ಗವರ್ನಮೆಂಟ್ ಕೂಡಿ ನಡೆಸುತ್ತಾರೆ. ಈ ಶಾಲೆಯಲ್ಲಿ ಓದುವ ಹೆಚ್ಚುವರಿ ಮಕ್ಕಳು ಕಡಿಮೆ ಆದಾಯದ ಕುಟುಂಬದಿಂದ ಬರುತ್ತಾರೆ.

ಬ್ರಿಟನ್ ನಲ್ಲಿರುವ ಡಿಜಿಟಲ್ ಮೀಡಿಯಾ ಪ್ಲಾಟ್ಫಾರ್ಮ್ T4 ಎಜುಕೇಶನ್ ಈ ವರ್ಷದ ಮೊದಲಿಗೆ ಈ ಸ್ಪರ್ಧೆಯನ್ನು ಪ್ರಾರಂಭಿಸಿದೆ.T4 ಎಜುಕೇಶನ್ ಹೇಳುವ ಪ್ರಕಾರ, “ಪಿಸಿಎಂಸಿ” (ಪಿಂಪ್ರಿ ಚಿಂಚವಡ ಮುನಿಸಿಪಲ್ ಕಾರ್ಪೊರೇಷನ್) ಆಂಗ್ಲ ಮಾಧ್ಯಮ ಶಾಲೆ ಲೋಕಲ್ ನಲ್ಲಿ ಇರುವ ಡಾಕ್ಟರ್ ಗಳು, ವ್ಯಾಪಾರಿಗಳು ಮತ್ತು ಧಾರ್ಮಿಕ ನೇತಾರರ ಜೊತೆಗೆ ಕೂಡಿಕೊಂಡು ಕೆಲವೊಂದು ಪ್ರಾಜೆಕ್ಟ್ ಗಳನ್ನು ಆಯೋಜಿಸಿದೆ. ಈ ಪ್ರಾಜೆಕ್ಟ್ ಗಳ ಸಹಾಯದಿಂದ ಪೋಷಕರ ಆರ್ಥಿಕ ಅವಶ್ಯಕತೆಗಳು ಸಹಜವಾಗಿ ಪೂರ್ಣಗೊಳ್ಳುತ್ತಿವೆ.

ಮೊದಲು ಈ ಶಾಲೆ ಜನರಿಗಾಗಿ ಉಚಿತ ಮೆಡಿಕಲ್ ಚೆಕಪ್ ಪ್ರೋಗ್ರಾಮ್ ಪ್ರಾರಂಭಿಸಿತು. ತದನಂತರ ಮಾಸ್ಟರ್ ಶ್ರೇಫ್ಸ್ ಸ್ಟೈಲ್ ನಲ್ಲಿ ಕ್ಲಾಸ್ ಗಳನ್ನು ಪ್ರಾರಂಭಿಸಿದರು. ಇದರಿಂದ ಊರಿನಲ್ಲಿ ವಾಸಿಸುವ ಪ್ರತಿಯೊಂದು ಕುಟುಂಬಗಳಿಗೆ ಹೆಲ್ದಿ ಮತ್ತು ಸಂತುಲಿತ ಆಹಾರ ದೊರೆಯಲು ಸಹಾಯವಾಯಿತು. ವಿದ್ಯಾರ್ಥಿಗಳಿಗೆ ದಿನಕ್ಕೊಂದು ಹಣ್ಣು ತಿನ್ನುವಂತೆ ಯೋಜನೆಯನ್ನು ರೂಪಿಸಲಾಯಿತು. ಇಲ್ಲಿ ವಿದ್ಯಾರ್ಥಿಗಳಿಗೆ ವಾರದ ಆಹಾರದ ಬಗ್ಗೆ ಒಂದು ಯೋಜನೆಯನ್ನು ತಯಾರು ಮಾಡಲು ಹೇಳಲಾಗುತ್ತದೆ. ಇದರ ಜೊತೆಗೆ ಪೋಷಕರು ಸಹ ಈ ನಿಯಮವನ್ನು ಪಾಲಿಸಲು ಶುರು ಮಾಡಿದರು. ಇದರ ಒಳ್ಳೆಯ ಪ್ರಭಾವ ಅವರ ಆರೋಗ್ಯದ ಮೇಲೆ ಆದದ್ದು ಕಂಡುಬಂದಿತು ಎಂದು ಹೇಳುತ್ತಾರೆ, T4 ಎಜುಕೇಶನ್.