ಸಾಯುವ ಸಮಯದಲ್ಲೂ ತನ್ನ ಅಂಗಾಂಗಳನ್ನು ದಾನ ಮಾಡಿ ಒಂಬತ್ತು ಜನರಿಗೆ ಹೊಸ ಬದುಕು ಕೊಟ್ಟ ಪಿಯುಸಿ ವಿದ್ಯಾರ್ಥಿನಿ ‘ರಕ್ಷಿತಾ’!!!
ಚಿಕ್ಕಮಗಳೂರು: ಕಳೆದ ನಾಲ್ಕು ದಿನಗಳ ಹಿಂದೆ ಕಡೂರು ಗ್ರಾಮದಲ್ಲಿ ಒಂದು ವಿಪರ್ಯಾಸ ನಡೆದು ಹೋಗಿದೆ. ಅದೇನೆಂದರೆ ಪಿಯುಸಿ ದ್ವಿತೀಯ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದ ಒಬ್ಬ ವಿದ್ಯಾರ್ಥಿನಿ ಬಸ್ ನಿಂದ ಕೆಳಗೆ ಇಳಿಯುವಾಗ ಆಯತಪ್ಪಿ ಕೆಳಗಡೆ ಬಿದ್ದಿದ್ದಾಳೆ. ಬಸ್ ಇಳಿಯುವಾಗ ಬಿದ್ದು ಮಿದುಳು ನಿಷ್ಕ್ರಿಯಗೊಂಡಿತು. ಕಡೂರು ತಾಲೂಕು ಚಿಕ್ಕ ತಾಂಡಾದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ರಕ್ಷಿತಾಬಾಯಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾಳೆ. ಆಕೆಯ ಅಂಗಾಂಗ ದಾನ ಮಾಡುವ ಮೂಲಕ 9 ವರ್ಷದ ಮಗು ಸೇರಿ 9 ಜನರಲ್ಲಿ ಮಗಳನ್ನು ಕಾಣುತ್ತೇವೆ ಎಂದು ರಕ್ಷಿತಾಬಾಯಿ ಪಾಲಕರು ನೋವಲ್ಲೂ ಹೃದಯ ವೈಶಾಲ್ಯ ಮೆರೆದಿದ್ದಾರೆ.

ಸೆ.18 ರಂದು ಬಸ್ ಇಳಿಯುವಾಗ ಬಿದ್ದು ಗಾಯಗೊಂಡಿದ್ದ ರಕ್ಷಿತಾಬಾಯಿಯನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಿದುಳು ನಿಷ್ಕ್ರಿಯವಾಗಿದ್ದು, ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ವೈದ್ಯರು ತಿಳಿಸಿದಾಗ ಮಗಳ ದೇಹದ ಅಂಗಾಂಗಗಳು ಮತ್ತೊಬ್ಬರ ಬದುಕಿಗೆ ಸಂಜೀವಿನಿಯಂತಾದರೆ ಅಷ್ಟೇ ಸಾಕು ಎಂದು ಪಾಲಕರು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದರು. ಅಪ್ಪು ಅವರ ತಮ್ಮ ಜೀವನಪೂರ್ತಿ ಹೇಗೆ ಪರರ ಬಾಳಿಗೆ ಬೆಳಕಾಗಿದ್ದರೆಯೋ ಅದೇ ರೀತಿ ಈ ವಿದ್ಯಾರ್ಥಿನಿಯ ಪಾಲಕರು ಸಹ ತಮ್ಮ ಮಗಳ ಅಂಗಾಂಗಳು ಬೇರೆಯವರ ಬಾಳಲ್ಲಿ ಬೆಳಕು ಬರುವಂತಿದ್ದರೆ ನಾವು ಈ ಕಾರ್ಯಕ್ಕೆ ಸಹಮತ ಇದ್ದೇವೆ ಎಂದು ಡಾಕ್ಟರ ರಿಗೆ ತಿಳಿಸಿದರು.
ಅದಕ್ಕೆ ಅನ್ನೋದು ‘ಅಪ್ಪು ಎಂದರೆ ಸ್ಫೂರ್ತಿ, ಸ್ಫೂರ್ತಿ ಎಂದರೆ ಅಪ್ಪು’ಅಂತ ಹೊಸ ಮಾತೇ ಹುಟ್ಟಿಸಿದ್ದಾರೆ. ಅಪ್ಪು ಅವರ ಜೀವನವನ್ನು ಕಂಡು ನಮ್ಮ ಮಗಳು ಸಹ ಅಪ್ಪು ಅವರಂತೆ ಮಡಿದರು ಸಹ ಬೆರೆಯವರಲ್ಲಿ ಜೀವನದಲ್ಲಿ ಜೀವಂತ ವಾಗಿರಬೇಕು ಎಂದು ಯೋಚನೆ ಮಾಡಿ ಪಾಲಕರು ಈ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದ್ದಾರೆ.

ಗುರುವಾರ 20 ತಜ್ಞ ವೈದ್ಯರ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಸಿಬ್ಬಂದಿ ತಂಡ 4 ತಾಸುಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಅಂಗಾಂಗ ದಾನದ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು. ಬೆಂಗಳೂರು ಮಣಿಪಾಲ್ ಆಸ್ಪತ್ರೆಯಲ್ಲಿ 9 ವರ್ಷದ ಮಗುವಿಗೆ ಹೃದಯ, ಮಂಗಳೂರು ಕೆಎಂಸಿಗೆ ಲಿವರ್, ಕಣ್ಣು, ಕಿಡ್ನಿಗಳನ್ನು ರವಾನೆ ಮಾಡಲಾಯಿತು. ಎರಡು ಕಣ್ಣುಗಳನ್ನು ನಾಲ್ಕು ಮಂದಿಗೆ, ಇಬ್ಬರಿಗೆ ಕಿಡ್ನಿ, ಇಬ್ಬರಿಗೆ ಲಿವರ್ ಅಳವಡಿಕೆ ಮಾಡಲಾಗಿದೆ ಎನ್ನಲಾಗಿದೆ. ರಕ್ಷಿತಾಬಾಯಿ ಪಾಲಕರ ಈ ನಿರ್ಧಾರಕ್ಕೆ ರಾಜ್ಯಾದಂತ್ಯ ಶ್ಲಾಘನೆ ವ್ಯಕ್ತವಾಗಿದೆ.
ಇಂತಹ ಒಬ್ಬ ಸಾಹಸ ವಿದ್ಯಾರ್ಥಿನಿ ಹಾಗೂ ಪರೋಪಕಾರಿ ಪಾಲಕರ ಈ ಸುದ್ಧಿ ನಾಡಿನ ಪ್ರತಿ ಮನೆ ಮನೆಗೂ ತಲುಪಿಸಿ, ಅಪ್ಪು ಅವರಂತೆ ‘ಸ್ಫೂರ್ತಿ’ ಈ ಹೆಸರನ್ನು ಸಹ ಅಜರಾಮರವಾಗಿ ಉಳಿಸಲು ಈ ಪೋಸ್ಟನ್ನು ಆದಷ್ಟು ಶೇರ್ ಮಾಡಿ.