ಮಕ್ಕಳು ಏನನ್ನು ನೋಡುತ್ತವೆ ಅದನ್ನೇ ಅನುಕರಣಿಸುತ್ತವೆ! ಎಂದು ಹೇಳುವ ಸುಂದರ ಹಾಗೂ ಶೇರ್ ಮಾಡಬಹುದಾದ ವಿಡಿಯೋ.
ಇಂದಿನ ಮಕ್ಕಳೇ ನಾಳೆಯ ದೇಶದ ಭವಿಷ್ಯ ಎಂದು ಹೇಳಲಾಗುತ್ತದೆ. ಸಮೃದ್ಧ ದೇಶದ ಭವಿಷ್ಯ ಕಾಣಬೇಕಾದರೆ ಇಂದಿನ ಮಕ್ಕಳಿಗೆ ನೀಡಬೇಕು ಯೋಗ್ಯವಾದ ಶಿಕ್ಷಣದ ಜೊತೆಗೆ ಒಳ್ಳೆಯ ಆಚರಣೆ ಮತ್ತು ಸಂಸ್ಕಾರ. ಅಂದಾಗ ಮಾತ್ರ ಭದ್ರ, ಶಕ್ತಿಯುತ, ಸುಸಂಸ್ಕೃತ ನಾಳೆಯನ್ನು ಕಾಣಲು ಸಾಧ್ಯವಾಗುವುದು. ಅದಕ್ಕಾಗಿಯೇ ಮಕ್ಕಳಿಗೆ ಚಿಕ್ಕಂದಿನಿಂದಲೇ ಸರಿಯಾದ ದಾರಿಯಲ್ಲಿ ನಡೆಸುವುದು ತುಂಬಾ ಪ್ರಾಮುಖ್ಯವಾಗಿದೆ.
ಮೂಲತಃ ಮನುಷ್ಯ ಜೀವಿ ಅನುಕರಣಶೀಲನಾಗಿದ್ದಾನೆ. ಹೀಗಾಗಿ ಆತ ಹೆಚ್ಚು ಪಾಲನ್ನು ನೋಡಿಯೇ ಕಲಿಯುತ್ತಾನೆ. ವ್ಯಕ್ತಿಗೆ ಸಹಜವಾಗಿ ದುರ್ಗುಣಗಳೇ ಹೆಚ್ಚು ತನ್ನೆಡೆಗೆ ಆಕರ್ಷಿಸುತ್ತವೆ. ಹೀಗಾಗಿ ಮನೆಯ ಅಥವಾ ಸಮಾಜದ ಮುಖ್ಯ ಕರ್ತವ್ಯ ಏನೆಂದರೆ ಮಕ್ಕಳಿಗೆ ಒಳ್ಳೆಯ ದಾರಿ ಕಲ್ಪಿಸಿಕೊಡುವುದಾಗಿದೆ.
ಪ್ರಸ್ತುತ ವಿಡಿಯೋ ಇದಕ್ಕೆ ಒಂದು ಸುಂದರ ಹಾಗೂ ಪರಿಣಾಮಕಾರಿಯಾದ ಪಾಠವನ್ನು ಹೇಳಿ ಕೊಡುತ್ತದೆ. ಕಾರಣ ಇದರಲ್ಲಿಯ ದೃಶ್ಯಗಳು ನಿಜಕ್ಕೂ ನಾವು ಏನು ಮಾಡುತ್ತೇವೆ ಅದನ್ನೇ ಮಕ್ಕಳು ಫಾಲೋ ಮಾಡುತ್ತವೆ ಎನ್ನಲು ಕೆಲವು ಉದಾಹರಣೆಗಳನ್ನು ನೀಡಿದ್ದಾರೆ. ಇವುಗಳನ್ನು ನೋಡಿದಾಗ ಇದು ಸುಳ್ಳು ಎಂದು ಹೇಳಲು ಸಾಧ್ಯವೇ ಇಲ್ಲ.
ವೀಡಿಯೋ ನೋಡಿ
बच्चे जो देखते हैं, वही सीखते हैं. pic.twitter.com/geqMv5M8uY
— Awanish Sharan 🇮🇳 (@AwanishSharan) September 23, 2022
ಈ ಒಳ್ಳೆಯ ಪಾಠವನ್ನು ನೀಡುವ ಸಂದೇಶದ ವಿಡಿಯೋವನ್ನು ಟ್ವಿಟರ್ ನಲ್ಲಿ ಅವನೀಶ್ ಶರಣ್ ಅವರು ತಮ್ಮ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ. ಈ ವಿಡಿಯೋ ನೆಟ್ಟಿಗರಿಗೆ ತುಂಬಾ ಒಳ್ಳೆಯ ಪರಿಣಾಮ ಮಾಡಿದೆ ಎಂದು ಗೊತ್ತಾಗುತ್ತಿದೆ. ಜೊತೆಗೆ ಪ್ರಸ್ತುತ ವಿಡಿಯೋ ಸೋಷಿಯಲ್ ಮೀಡಿಯಾದ ಬೇರೆ ಬೇರೆ ಪ್ಲಾಟ್ ಫಾರ್ಮ್ ಗಳಲ್ಲಿ ಶೇರ್ ಮಾಡುತ್ತಿದ್ದಾರೆ. ಕೊನೆಯಲ್ಲಿ ಹೇಳುವದಿಷ್ಟೆ ಅದೇನೆಂದರೆ, “ನಾವು ಬಿತ್ತಿದ್ದನ್ನು ನಾವೇ ಊಟ ಮಾಡಬೇಕಾಗಿದೆ”, ಅಲ್ವಾ?