100% ಸತ್ಯವೇ! ದಿನನಿತ್ಯ ಗಂಡನು ಮಾಡುವ ಆದ್ಯ ಕರ್ತವ್ಯಗಳು! ಅಷ್ಟು ಸಹಜ, ಸರಳವೆಂದು ತಿಳಿಯಬೇಡಿ…

ಪತಿ-ಪತ್ನಿ ಸಂಸಾರದ ಬಂಡಿಯ ಎರಡು ಚಕ್ರಗಳಿದ್ದಂತೆ. ಈ ಎರಡು ಚಕ್ರಗಳು ಸರಿಯಾಗಿ ಬ್ಯಾಲೆನ್ಸ್ ಮಾಡಿಕೊಂಡು ನಡದರೇನೆ ಸಂಸಾರದ ಬಂಡಿ ಎಡವದೇ ಚೆನ್ನಾಗಿ ನಡೆಯಲು ಸಾಧ್ಯ. ಇಲ್ಲಿ ನಾ ಹೆಚ್ಚು ತಾ ಹೆಚ್ಚು ಎಂದು ಪತಿ ಪತ್ನಿಯರು ಕಚ್ಚಾಡಲು ಶುರು ಮಾಡಿದರೆ ಮುಗಿಯಿತು ಸಂಸಾರ ಛಿದ್ರವಾಗಲು ಜಾಸ್ತಿ ಸಮಯ ಬೇಕಾಗುವುದಿಲ್ಲ. ಇಲ್ಲಿ ಇಬ್ಬರೂ (ಗಂಡ ಹೆಂಡತಿ) ಮಹತ್ವದ ವ್ಯಕ್ತಿಗಳಾಗಿದ್ದಾರೆ, ಇಬ್ಬರೂ ಕೂಡಿಕೊಂಡು ಸಂಸಾರದ ಗಾಡಿಯನ್ನು ಚೆನ್ನಾಗಿ ನಡೆಸಿಕೊಂಡು ಹೋಗಬೇಕಾಗಿದೆ.

ಪ್ರಸ್ತುತ ಲೇಖನದಲ್ಲಿ ಮನೆಯಲ್ಲಿಯ ಗಂಡಸಿನ ಕೆಲವು ಕೆಲಸಗಳ ಬಗ್ಗೆ ಮೆನ್ಶನ್ ಮಾಡಲಾಗಿದೆ. ಓದುವಾಗ ತಮಾಷೆ ಎನಿಸಿದರೂ ಈ ಮಾತುಗಳು ಮಾತ್ರ 100 ಕ್ಕೆ ನೂರರಷ್ಟು ಸತ್ಯವಾಗಿದೆ ಎಂಬ ಅರಿವು ಆಗುತ್ತದೆ. ಓದುವಾಗ ಇದರ ಅನುಭವ ಆಗುತ್ತದೆ ಮತ್ತು ನಗು ಸಹ ತಡೆಯುವುದು ಆಗುವದಿಲ್ಲ. ಆ ಕೆಲಸಗಳು ಯಾವವು ಓದಿ ಗೊತ್ತಾಗುತ್ತೆ. ಇದರ ಅರ್ಥ ಹೆಂಡತಿ ಯಾವುದೇ ಕೆಲಸಗಳನ್ನು ಮಾಡುವದಿಲ್ಲ ಎಂದು ದಯವಿಟ್ಟು ಅರ್ಥವನ್ನು ಕಲ್ಪಿಸಬಾರದು.

ಮನೆ ಗಂಡಸಿನ ಆದ್ಯ ಕರ್ತವ್ಯಗಳು.

1. ಗ್ಯಾಸ್ ಮೇಲಿಟ್ಟ ಕುಕರ್ ಮೂರು ಸೀಟಿ ಹೊಡೆದ ನಂತರ ಗಂಡ ಮನೆಯಲ್ಲಿ ಎಲ್ಲೇ ಇರಲಿ, ಯಾವುದೇ ಸ್ಥಿತಿಯಲ್ಲಿರಲಿ ಓಡಿ ಬಂದು ತಕ್ಷಣ ಗ್ಯಾಸ್ ನಾಬ್ ಬಂದ್ ಮಾಡಬೇಕು.
2. ಕಾಯಿಸಲು ಇಟ್ಟ ಹಾಲು ಉಕ್ಕಿ ಬರುತ್ತಿರುವುದು ಕಂಡ ತಕ್ಷಣ ಓಡಿ ಹೋಗಿ ಮತ್ತೆ ಮೇಲಿನ ಕೆಲಸ ಮಾಡಲೇಬೇಕು.
3. ಡೋರ್ ಬೆಲ್ ಅಟೆಂಡ್ ಮಾಡುವದು.
4. ಅಟ್ಟದಲ್ಲಿರುವ ಸಾಮಾನುಗಳನ್ನು ಇಳಿಸಿ ಕೊಡುವುದು.
5. ಗಟ್ಟಿಯಾಗಿ ಮುಚ್ಚಿರುವ ದಿನಸಿ ಡಬ್ಬಿಗಳ ಮುಚ್ಚಳ ತೆಗೆದು ಕೊಡುವುದು.
6. ಸಾಸ್ ಮತ್ತು ಜಾಮ್ ಬಾಟ್ಲಿ ಮುಚ್ಚಳಗಳನ್ನು ತೆಗೆದು ಕೊಡುವುದು.
7. ಮನೆಯಲ್ಲಿನ ಹಲ್ಲಿ, ಕೋಕ್ಕ್ರೋಚ್ ಇತ್ಯಾದಿ ಭಯಂಕರ ಪ್ರಾಣಿಗಳನ್ನು ಹೊಡೆದು ಹೊರಗೆ ಹಾಕುವದು.
8. ಪ್ರತೀ ಬಾರಿ ಗ್ಯಾಸ್ ಮುಗಿದಾಗ ಸಿಲಿಂಡರ್ ಬದಲಾಯಿಸಿ ಕೊಡುವುದು.
9. ಹೇಳಿದಾಗ ಮಾತ್ರ ಮಕ್ಕಳ ಮೇಲೆ ಗದರುವುದು, ಹಾಗೂ ಅವರ ಕಾಳಜಿ ಮಾಡುವದು.
10. ಬಾಗಿಲಲ್ಲಿ ಬಿದ್ದಿರುವ ಪೇಪರ್ ತರುವುದು, ತಂದ ತಕ್ಷಣ ಓದುವುದು ಮತ್ತು ಪದಬಂಧ ಕಾಲಮ್ ನ್ನು ತುಂಬದೆ ಹಾಗೇ ಬಿಡುವುದು.
11. ಮನೆಯಿಂದ ಹೊರಗೆ ಬಿದ್ದರೆ ಮುಗಿತು ಖಬರೇ ಇರುದಿಲ್ಲ ಎಂಬ ಮಾತನ್ನು ದಿನ ನಿತ್ಯ ಕೇಳಿಸಿಕೊಳ್ಳುವುದು.
12. ಬಟ್ಟೆಗಳನ್ನು ಇಸ್ತ್ರಿ ಮಾಡುವುದು, ಇಲ್ಲವೇ ಮಾಡಿಸಿ ತಂದು ಕೊಡುವುದು.
13. ಬ್ಯಾಂಕ್ ವ್ಯವಹಾರ ಮತ್ತು ಇತರ ಬಿಲ್ ಗಳನ್ನು ತುಂಬುವ ಕೆಲಸ ಮಾಡುವುದು.
14. ತಿಂಗಳ ಸಾಮಾನಿನ ಚೀಲ ಅಂಗಡಿಯಿಂದ ತಾವೇ ಹೊತ್ತು ತರುವುದು.
15. ಶಾಪಿಂಗ್ ಮಾಡುವಾಗ ಎಷ್ಟೇ ಹೊತ್ತಾದರೂ ಕಿರಿ ಕಿರಿ ಮಾಡದೆ, ಹೆಂಡತಿ ಹಿಂದೆ ಹಿಂದೆ ಬರುವುದು, ಮತ್ತು ಖರೀದಿ ಮಾಡಿದಾಗ ಪೇಮೆಂಟ್ ಮರು ಮಾತನಾಡದೆ ಸುಮ್ಮನೆ ಪಾವತಿಸುವುದು.
16. ಅತ್ತೆ ಮನೆಯ ನೆಂಟ್ರು ಬಂದಾಗ ಮನೆಯ ಹೆಚ್ಚಿನ ಕೆಲಸಗಳನ್ನು ನಿಭಾಯಿಸಿ, “ಗುಡ್ ಬಾಯ್” ಎನಿಸಿಕೊಳ್ಳುವುದು.
17. ಮನೆಯ ಸಣ್ಣ ಪುಟ್ಟ ಎಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್ ಕೆಲಸ ಮಾಡುವುದು.
18. ನೆಲದ ಮೇಲೆ ಅಥವಾ ಮಂಚದ ಮೇಲಿಂದ ಕೆಳಗೆ ಜಾರಿಬಿದ್ದು ಮೂರು ತುಂಡಾಗಿರುವ ರಿಮೋಟ್ ನ್ನು ರಿಪೇರಿ ಮಾಡಿ ಜೀವಂತಗೊಳಿಸುವುದು.
19. ಮನೆಯಲ್ಲಿ ಕಾರು ಸ್ಕೂಟರ್ ಇತ್ಯಾದಿ ಇದ್ದಲ್ಲಿ, ಡ್ರೈವಿಂಗ್ ಕಾರ್ಯ ಉತ್ತಮವಾಗಿ ನಿರ್ವಹಿಸುವುದು.
20. ಮನೆಯಲ್ಲಿ ವಾಹನ ಇಲ್ಲದಿದ್ರೆ, ತನ್ನ ಮೊಬೈಲ್ ನಿಂದ ಆನ್ಲೈನ್ ಬುಕ್ ಮಾಡಿ ಕೊಡುವುದು.

ಕೊನೆಯದಾಗಿ,

“ಈ ಮನೆಯಲ್ಲಿ ದಿನವಿಡೀ ಎಲ್ಲಾ ಕೆಲಸಾನೂ ನಾನೊಬ್ಬಳೇ ಮಾಡಿ ಸಾಯಬೇಕು, ಒಬ್ಬರಾದರೂ ಸಹಾಯಕ್ಕೆ ಸಿಗೋದಿಲ್ಲ” ಎನ್ನುವ ವಾಕ್ಯವನ್ನು ಎಷ್ಟು ಸಲವಾದರೂ ಶಾಂತ ರೀತಿಯಿಂದ ಕೇಳಿಸಿಕೊಳ್ಳುವುದು.
😁….

ಇಷ್ಟಲ್ಲ ಆದ ಮೇಲೆ ಇನ್ನೂ ಒಂದು ಇದೆ…
” ನಿಮಗೆ ಏನೂ ಗೊತ್ತಾಗಲ್ಲ ಸುಮ್ಮನೆ ಇರಿ.” 😊☺️

ಹೇಗಿವೆ ಫ್ರೆಂಡ್ಸ್? ಗಂಡನ ಆದ್ಯ ಕರ್ತವ್ಯಗಳು.