ನಾಯಿಯ ಗ್ರೇಟ್ ಬ್ಯಾಟಿಂಗ್ ! ಟೈಮಿಂಗ್ ನೋಡಿದರೆ ವರ್ಲ್ಡ್ ಕಪ್ ಗೆ ಕಳಿಸಬೇಕು ಎಂದ ನೆಟ್ಟಿಗರು…

ಪ್ರಾಣಿಗಳು ಸಹ ಮನುಷ್ಯನ ಜೊತೆಗೆ ಕೂಡಿ ತುಂಬಾ ತಮಾಷೆಯ ಅಕ್ಟಿವೀಟಿಸ್ ಗಳನ್ನು ಮಾಡುತ್ತಿವೆ. ಅವುಗಳ ಆಟಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತವೆ. ಈಗ ನಾಯಿಯೊಂದು ಸಖತ್ ಕ್ರಿಕೆಟ್ ಆಡಿದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ನೋಡಲು ಸಿಗುತ್ತಿದೆ. ಇದನ್ನು ನೋಡಿದ ನೇಟಿಜನ್ಸ್ ಗಳು ನಾಯಿಯ ಕ್ರಿಕೆಟ್ ಆಟಕ್ಕೆ ವಾ ವಾ ಎನ್ನುತ್ತಿದ್ದಾರೆ.

ಪ್ರಸ್ತುತ ವಿಡಿಯೋದಲ್ಲಿ ನಾಯಿಯು ಕ್ರಿಕೆಟ್ ನ ಮಜಾ ತೆಗೆದುಕೊಳ್ಳುತ್ತಿದೆ. ಇಲ್ಲಿ ಅದು ಸಹ ಕ್ರಿಕೆಟ್ ಆಡುವ ಪ್ರಯತ್ನ ಮಾಡಿದೆ. ಬೀದಿಯಲ್ಲಿ ನಿಂತು ಕ್ರಿಕೆಟ್ ಆಡುವಾಗ ನಾಯಿಯ ಹವ್ಯಾಸ ಎಷ್ಟೊಂದು ಈ ಆಟದಲ್ಲಿ ಇದೆ ಎಂಬುದು ತಿಳಿದು ಬರುತ್ತದೆ. ಬೌಲರ್ ಬೌಲಿಂಗ್ ಮಾಡುವ ಮುನ್ನ ನಾಯಿಯ ತಯಾರಿ ನೋಡಿದಾಗ ನಿಜಕ್ಕೂ ಅದ್ಭುತವೆನಿಸುತ್ತದೆ. ತದನಂತರ ನಾಯಿ ಬಾಲ್ ಗೆ ಯಾವ ರೀತಿ ಸಖತ್ ಶಾಟ್ ಹೊಡೆದಿದೆ ನೋಡಿ. ಈ ಶಾಟ್ ನೋಡಿದಾಗ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರ ನೆನಪು ನಿಶ್ಚಿತವಾಗಿಯೂ ಬರುತ್ತದೆ.

ನೋಡಿ ಈ ವಿಡಿಯೋ…

ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದ ಪ್ಲಾಟ್ ಫಾರ್ಮ್ ಅದ ಟ್ವಿಟರ್ ನಲ್ಲಿ @heredot86276728 ಹೆಸರಿನ ಐಡಿ ಇಂದ ಶೇರ್ ಮಾಡಲಾಗಿದೆ. ನಾಯಿಯ ಕ್ರಿಕೆಟ್ ಮಜಾ ಇಲ್ಲಿಯವರೆಗೆ ಸುಮಾರು 6.5 ಲಕ್ಷಕ್ಕೂ ಮೀರಿ ವೀಕ್ಷಿಸಲಾಗಿದೆ. ನಾಯಿಯ ಕ್ರಿಕೆಟ್ ಹವ್ಯಾಸ ನೋಡಿ ಮುಂಬರುವ ವರ್ಲ್ಡ್ ಕಪ್ ನಲ್ಲಿ ಇದಕ್ಕೆ ಮೊದಲು ಸೆಲೆಕ್ಟ್ ಮಾಡಬೇಕು ಎಂದು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.