ದುಡಿತ ಮಾಡಿ ಗಳಿಸಿದ ಹಣ ಎಣಿಸುತ್ತಿರುವ ಹಿರಿಯ ವ್ಯಕ್ತಿಯ ವಿಡಿಯೋ ವೈರಲ್! ರಿಯಾಕ್ಷನ್ ಗೆ ಮರುಳಾದ ನೆಟ್ಟಿಗರು.
ದಿನಪೂರ್ತಿ ಪರಿಶ್ರಮ ಪಟ್ಟ ನಂತರ ಸಾಯಂಕಾಲದ ಹೊತ್ತಿಗೆ ವ್ಯಕ್ತಿಯ ಜೇಬು ಹಣದ ಮುಖಾಂತರ ಗರಂ ಆದಾಗ ಆ ಸುಖ ಮತ್ತು ಸಮಾಧಾನ ಆ ವ್ಯಕ್ತಿಗೆ ತುಂಬಾ ನೆಮ್ಮದಿ ನೀಡುವಂತದ್ದಾಗಿರುತ್ತದೆ. ಈ ದೃಶ್ಯವನ್ನು ನೋಡಲು ತುಂಬಾ ಮಾರ್ಮಿಕವಾಗಿದೆ. ಹಿರಿಯ ವ್ಯಕ್ತಿಯೊಬ್ಬ ತನ್ನ ಸೈಕಲ್ ಮೇಲೆ ಚಿಕ್ಕಪುಟ್ಟ ವಸ್ತುಗಳನ್ನು ಅಥವಾ ಸಾಮಾನುಗಳನ್ನು ದಿನಪೂರ್ತಿ ಮಾರಾಟ ಮಾಡಿ ಬಂದ ಹಣವನ್ನು ಕೊನೆಯಲ್ಲಿ ರಸ್ತೆ ಬದಿಗೆ ಇರುವ ಒಂದು ಕ್ಯಾಂಟೀನ್ ನಲ್ಲಿ ಕುಳಿತು ಎಣಿಸುತ್ತಿದ್ದಾನೆ.
ಪ್ರಸ್ತುತ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಗಮನವಿಟ್ಟು ನೋಡಿದಾಗ ಗೊತ್ತಾಗುತ್ತದೆ, ವ್ಯಕ್ತಿಗೆ ಆತ ಗಳಿಸಿದ ಹಣ ಎಷ್ಟೊಂದು ಮಹತ್ವದ್ದಾಗಿದೆ ಎಂದು. ಮೊದಲು ವ್ಯಕ್ತಿ ನೋಟುಗಳನ್ನು ಕೌಂಟ್ ಮಾಡಿದ ನಂತರ ಒಂದೊಂದಾಗಿ ಕ್ವಾಯಿನ್ ಗಳನ್ನು ಎಣಿಸುತ್ತಾನೆ. ಮುದುಕನ ಮುಖದ ಹಾವಭಾವದಿಂದ ಗೊತ್ತಾಗುತ್ತದೆ ಆತನಿಗೆ ಆ ಹಣ ಎಷ್ಟು ಬೆಲೆಯುಳ್ಳದ್ದಾಗಿದೆ ಎಂಬುದು.
ನೋಡಿ ಅಜ್ಜ ಗಳಿಕೆಯ ನಂತರ ಯಾವ ರೀತಿ ಹಣವನ್ನು ಎಣಿಸುತ್ತಿದ್ದಾನೆ.
ವೈರಲ್ ಆಗುತ್ತಿರುವ ಈ ವಿಡಿಯೋ ತುಂಬಾ ಎಮೋಷನಲ್ ಅನಿಸುತ್ತದೆ. ಈ ವಿಡಿಯೋವನ್ನು ‘ಜಿಂದಗಿ ಗುಲ್ಜಾರ್ ಹೈ’ ಹೆಸರಿನಿಂದ ಯೂಸರ್ ನೊಬ್ಬ ಟ್ವಿಟರ್ ನಲ್ಲಿ ‘ದಿನಪೂರ್ತಿಯ ಗಳಿಕೆ’ ಎಂಬ ಕ್ಯಾಪ್ಶನ್ ನೊಂದಿಗೆ ಶೇರ್ ಮಾಡಿದ್ದಾನೆ. ಈ ವಿಡಿಯೋ ಎಲ್ಲಿಯದು ಎಂಬುದು ಮಾತ್ರ ತಿಳಿದು ಬಂದಿಲ್ಲ. ಬಹುಶಃ ಪುಟ್ಟ ಕ್ಯಾಂಟೀನ್ ಅಥವಾ ಗುಡಿಸಲು ಇರಬಹುದು. ಆಚೆ ಬದಿ ಒಂದು ನದಿ ಹರಿಯುತ್ತಿದೆ.
ವೀಡಿಯೋ ನೋಡಿ
https://twitter.com/Gulzar_sahab/status/1572173242227634176?ref_src=twsrc%5Etfw%7Ctwcamp%5Etweetembed%7Ctwterm%5E1572173242227634176%7Ctwgr%5Eb3c8bf0db64452429d67bd52df017ff34bc6a39e%7Ctwcon%5Es1_c10&ref_url=https%3A%2F%2Fharyanakranti.com%2Fviral-news%2Fold-man-counting-coins-viral-video-345119
ಟ್ವಿಟರ್ ನಲ್ಲಿ ಅಪ್ಲೋಡ್ ಆದ ನಂತರ ಈ ವಿಡಿಯೋವನ್ನು ಇಲ್ಲಿಯವರೆಗೆ ಲಕ್ಷಾವಧಿ ಜನರು ವೀಕ್ಷಿಸಿದ್ದು ಈ ಎಮೋಷನಲ್ ವಿಡಿಯೋಗೆ ನೆಟ್ಟಿಗರು ವಿವಿಧ ರೀತಿಯ ತಮ್ಮ ಪ್ರತಿಕ್ರಿಯೆಗಳನ್ನು ಹೊರಹಾಕಿದ್ದಾರೆ. ಪ್ರತಿಯೊಂದು ವ್ಯಕ್ತಿಗೆ ಹಣ ಎಷ್ಟು ಮುಖ್ಯವಾಗಿದೆ ಎಂಬುದು ಇಲ್ಲಿ ತಿಳಿದು ಬರುತ್ತದೆ.