ತಂದೆ-ಮಗನ ಈ WWF ಆಟ ನೋಡಿದರೆ ಸಾಕು ಇವತ್ತಿನ ಮೂಡ್ ಫುಲ್ ಫ್ರೆಶ್! ನೋಡಿ ಈ ಸೂಪರ್ ವಿಡಿಯೋ.
ಆಟದ ವಿಷಯಕ್ಕೆ ಬಂದಾಗ ಮಾತ್ರ ಪುಟ್ಟ ಮಕ್ಕಳಿಗೆ ಥಟ್ಟನೆ ತಂದೆ ನೆನಪಾಗುತ್ತಾನೆ. ಆಟಗಳು ಯಾವುದೇ ಇರಲಿ ಮಕ್ಕಳು ತಂದೆಯ ಜೊತೆಗೆ ಮನಸ್ಸು ಬಿಚ್ಚಿ ಆಡುತ್ತವೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿಂದ ಒಂದು ವಿಡಿಯೋ ನೋಡಿದಾಗ ಇದಕ್ಕೆ ತಕ್ಕ ಉದಾಹರಣೆ ಎನಿಸುತ್ತದೆ. ಪ್ರಸ್ತುತ ವಿಡಿಯೋದಲ್ಲಿ ತಂದೆ ಮತ್ತು ಮಗ ಇಬ್ಬರು ಕೂಡಿ WWF ಆಟವನ್ನು ಆಡುತ್ತಿದ್ದಾರೆ. ಅದು ಸಖತ್ ಜೋರಾಗಿಯೇ.
ಈ ವಿಡಿಯೋದಲ್ಲಿ ತಂದೆ ತನ್ನ ಮಗನ ಜೊತೆಗೆ ತುಂಬಾ ರಿಲ್ಯಾಕ್ಸ್ ಆಗಿ WWF ಆಟವನ್ನು ಆಡುತ್ತಿದ್ದಾನೆ. ತಂದೆಯ ಜೊತೆಗೆ ಆಡುತ್ತಿರುವ ಮಗ ತುಂಬಾ ಖುಷಿಯಲ್ಲಿ ಹಾಗೂ ಜೋಶ್ ನಲ್ಲಿ ಸ್ಪಂದಿಸುತ್ತಿದ್ದಾನೆ. ವಿಡಿಯೋದಲ್ಲಿ ಕಂಡು ಬರುವ ಪ್ರಕಾರ ಮಗು ತಂದೆಗೆ ಕಿಕ್ ಹೊಡೆಯಲು ಪ್ರಯತ್ನಿಸುತ್ತಿದ್ದಾನೆ. ಮಗನಿಗೆ ಅಷ್ಟೇ ಸೂಪರ್ ಆಗಿ ತಂದೆ ಪ್ರತಿಕ್ರಿಯೆ ನೀಡುತ್ತಿದ್ದಾನೆ. ಇದರಿಂದಾಗಿ ಇಬ್ಬರ ಆಟವನ್ನು ನೋಡಲು ತುಂಬಾ ಇಷ್ಟವಾಗುತ್ತಿದೆ. ಮಗು ತಂದೆಯ ಜೊತೆಗೆ ಮಾಡುತ್ತಿರುವ ಪ್ರತಿಯೊಂದು ಸನ್ನಿವೇಶ ನೋಡಿದಾಗ ತುಂಬಾ ವಿಶೇಷವೆನಿಸುತ್ತದೆ. ಒಮ್ಮೆ ಕಾಲಿನಿಂದ, ಇನ್ನೊಮ್ಮೆ ಕೈಯಿಂದ, ಮತ್ತೊಮ್ಮೆ ಕಬರ್ಡ್ ಮೇಲೆ ಏರಿ ತಂದೆಯ ಮೇಲೆ ಜಿಗಿದು ಒಂದೇ ಸವನೆ ಕಿಕ್ ಕೊಡುತ್ತಿದ್ದಾನೆ. ತಂದೆ ನೀಡುವ ಪ್ರತಿಕ್ರಿಯೆಯಿಂದ ಮಗನಿಗೆ ಮತ್ತಷ್ಟು ಜೋಶ್ ಬರುತ್ತಿದೆ.
ವೀಡಿಯೋ ನೋಡಿ
https://twitter.com/Gulzar_sahab/status/1573231742722392065?t=eBmG0Clkl3bY7PH_Q4zjpA&s=09
ಪ್ರಸ್ತುತ ವಿಡಿಯೋ ಟ್ವಿಟರ್ ನಲ್ಲಿ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ 83 ಸಾವಿರಕ್ಕೂ ಹೆಚ್ಚಿಗೆ ವೀಕ್ಷಣೆಯನ್ನು ಪಡೆದಿದೆ. ಜೊತೆಗೆ 5,000 ಕ್ಕೂ ಮೇಲ್ಪಟ್ಟು ಲೈಕ್ಸಗಳು ದೊರಕಿವೆ. ಮಗು ತನ್ನ ತಂದೆಯ ಜೊತೆಗೆ ಆಡುತ್ತಿರುವ ಈ ಆಟ ನೆಟ್ಟಿಗರ ಮನಸ್ಸನ್ನು ಸೆಳೆಯುತ್ತಿದೆ.