ವರ ಕೊರಳಲ್ಲಿ ತಾಳಿ ಕಟ್ಟುತ್ತಲೇ ಫುಲ್… ಫುಲ್… ಎಕ್ಸೈಟ್ ಆದ ವಧು! ನಿಮ್ಮ ಲೈಫ್ ಲ್ಲೆ ನೊಡಲಿಕ್ಕಿಲ್ಲ ಇಂಥ ವಧುವಿನ ವಿಡಿಯೋ.

ಮದುವೆ ಎಂದರೆ ಒಂದು ಹೊಸ ಅನುಭವ. ವಧು ಮತ್ತು ವರ ಇಬ್ಬರಿಗೂ ಇದು ಹೊಸತನದ ಅನುಭವ ಹಾಗೂ ಸಂಭ್ರಮವನ್ನು ನೀಡುತ್ತದೆ. ಪ್ರತಿಯೊಂದು ನವಜೋಡಿಯು ಮದುವೆಯ ಬಗ್ಗೆ ತಮ್ಮದೇ ಆದ ಸುಂದರ ಕನಸುಗಳನ್ನು ಪೋಣಿಸಿಕೊಂಡಿರುತ್ತಾರೆ. ಇಬ್ಬರೂ ಹೊಸ ಬದುಕಿಗೆ ಹೊಸ ಬಾಳಿಗೆ ಹೊಸ ಅನುಭವವನ್ನು ಹೊಂದಲು ಆಕಾಂಕ್ಷಿಯಾಗಿರುತ್ತಾರೆ. ಈ ಸಂದರ್ಭದಲ್ಲಿ ಕೆಲವರು ತುಂಬಾ ಖುಷಿಯಲ್ಲಿ ಇದ್ದರೆ ಇನ್ನು ಕೆಲವರು ಸಲ್ಪ ನರ್ವಸ್ ಸಹ ಅನುಭವಿಸುತ್ತಾರೆ. ಅದರಲ್ಲೂ ಮದುವೆಯಲ್ಲಿ ನಡೆದ ಕೆಲವು ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿಬಿಡುತ್ತವೆ. ಮದುವೆ ಒಂದರಲ್ಲಿ ಇದೇ ರೀತಿಯ ವಧು ಒಬ್ಬಳು ತೋರಿದ ಎಕ್ಸೈಟ್ಮೆಂಟ್ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ನೋಡಲು ಸಿಗುತ್ತಿದೆ. ಈ ರೀತಿಯ ವಧು ನೀವೇಂದು ನಿಮ್ಮ ಜೀವನದಲ್ಲಿ ನೋಡಲಿಕ್ಕಿಲ್ಲ.

ಮದುವೆಯ ವಿಧಿ ವಿಧಾನಗಳಲ್ಲಿ ತುಂಬಾ ಮಹತ್ವದ ತಾಳಿ ಕಟ್ಟುವ ಘಳಿಗೆ ಬಂದಾಗ ಒಂದು ವಿಶೇಷ ದೃಶ್ಯವೂ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯ ನೋಡಿದಾಗ ವಧುವಿಗೆ ಆದ ಮದುವೆಯ ಖುಷಿ ಎಷ್ಟೆಂದು ತಿಳಿದು ಬರುತ್ತದೆ. ವರ ತನ್ನ ವಧುವಿಗೆ ತಾಳಿ ಕಟ್ಟಲು ಮುಂದಾಗುತ್ತಾನೆ. ಆತ ತಾಳಿ ಕಟ್ಟಲು ಮುಂದಾಗುವುದೇ ತಡ ವಧು ಖುಷಿಯನ್ನು ತಡೆದುಕೊಳ್ಳಲಾಗದೇ ತುಂಬಾ ಎಕ್ಸೈಟ್ಮೆಂಟ್ ಆಗಿ ತಾನೇನು ಮಾಡುತ್ತಿದ್ದೇನೆ ಎಂಬುದನ್ನು ಸಂಪೂರ್ಣವಾಗಿ ಮರೆತುಬಿಡುತ್ತಾಳೆ ಮತ್ತು ಎಲ್ಲರ ಮುಂದೆ ತನ್ನ ಸಂತೋಷ, ಖುಷಿಯನ್ನು ವ್ಯಕ್ತ ಮಾಡುತ್ತಾ ಚಪ್ಪಾಳೆ ತಟ್ಟಲು ಶುರು ಮಾಡುತ್ತಾಳೆ. ಈ ಕೆಲವೇ ಕೆಲವು ಕ್ಷಣಗಳು ಆಕೆಯ ಜೊತೆಗೆ ನೋಡುಗರಿಗೂ ತುಂಬಾ ವಿಶೇಷವಾಗಿವೆ. ನೀವು ಅದೆಷ್ಟೋ ಮದುವೆಗಳನ್ನು ಇಲ್ಲಿಯವರೆಗೆ ನೋಡಿರಬೇಕು. ಆದರೆ ಈ ರೀತಿಯ ವಧು ನೀವೆಲ್ಲೂ ನೊಡಲಿಕ್ಕಿಲ್ಲ ಅಲ್ವಾ?

ನೋಡಿ ಈ ವಿಡಿಯೋ…

ಪ್ರಸ್ತುತ ವಿಡಿಯೋ ಎ ಟು ಝೆಡ್ ಕನ್ನಡ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಶೇರ್ ಮಾಡಲಾಗಿದ್ದು ಅನೇಕ ಜನರು ಈ ವಿಡಿಯೋವನ್ನು ನೋಡಿದ್ದಾರೆ.