ಊರಜನರ ಡಿಮಾಂಡ್ ಗೆ ಬೆಲೆ ಕೂಟ್ಟು ಮಂಗ ಮಾಡಿತು ಬ್ಯಾಕ್ ಫ್ಲಿಪ್; ನೋಡಿ ಸೂಪರ್ ವಿಡಿಯೋ..!

ಪ್ರಾಣಿಗಳ ವಿಡಿಯೋಗಳು ನೆಟ್ಟಿಗರು ಸಖತ್ ಇಷ್ಟ ಮಾಡುತ್ತಾರೆ. ಅದರಲ್ಲೂ ಮಂಗನ ಕೀಟಲೆಯಿಂದ ಕೂಡಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತವೆ. ಸದ್ಯ ಮಂಗನ ತಿಳುವಳಿಕೆಯಿಂದ ಕೂಡಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ನೋಡಲು ಸಿಗುತ್ತಿದೆ. ಅದೇನು ಮತ್ತು ಹೇಗೆ ಈ ಮಂಗ ಜನರ ಡಿಮಾಂಡ್ ಗೆ ಸ್ಪಂದಿಸಿದೆ ಎಂಬುದನ್ನು ಬನ್ನಿ ನೋಡೋಣ.

ಪ್ರಸ್ತುತ ವಿಡಿಯೋದಲ್ಲಿ ಊರ ಹೊರಗಿನ ಬಯಲಿನಲ್ಲಿ ಮಂಗ ಕಂಡು ಬರುತ್ತಿದೆ. ಈ ಸಂದರ್ಭದಲ್ಲಿ ಮಂಗ ಮೊದಲು ಅಲ್ಲಿ ಏನಾದರೂ ಬ್ಯಾಕ್ ಫ್ಲಿಪ್ ಮಾಡಿದೆ. ಅದನ್ನು ನೋಡಿದ ಸುತ್ತಲಿನ ಜನರು ಅದಕ್ಕೆ ಮತ್ತೊಮ್ಮೆ ಬ್ಯಾಕ್ ಫ್ಲಿಪ್ ಮಾಡುವಂತೆ ಒಂದೇ ಸವನೆ ಒನ್ಸ್ ಮೋರ್, ಒನ್ಸ್ ಮೋರ್ ಎಂದು ಕೈ ಮಾಡುತ್ತ ಜೋರು ಜೋರಾಗಿ ಡಿಮಾಂಡ್ ಮಾಡಿದ್ದಾರೆ. ಆಗ ಮಂಗವು ಸ್ವಲ್ಪ ಸಮಯ ತೆಗೆದುಕೊಂಡು ನಂತರ ಊರ ಜನರ ಬೇಡಿಕೆಯಂತೆ ತುಂಬಾ ಚೆನ್ನಾಗಿ ಬ್ಯಾಕ್ ಫ್ಲಿಪ್ ಮಾಡಿ ತೋರಿಸಿದೆ. ಮಂಗ ತಮ್ಮ ಬೇಡಿಕೆ ಈಡೇರಿಸಿದ್ದಕ್ಕೆ ಊರ ಜನರು ಒಂದೇ ಸವನೆ ಕೇಕೆ ಹಾಕಿ ನ್ನಕ್ಕಿದ್ದು ಇಲ್ಲಿ ಕೇಳಿ ಬರುತ್ತದೆ.

ವೀಡಿಯೋ ನೋಡಿ

 

View this post on Instagram

 

A post shared by Manish Randive (@manu_randive_55)

ಪ್ರಸ್ತುತ ಈ ಸುಂದರವಾದ ವಿಡಿಯೋ ಮನೀಶ್ ರಣದೀವ್ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಶೇರ್ ಮಾಡಿದ್ದಾನೆ. ಈ ವಿಡಿಯೋ ಇಲ್ಲಿಯವರೆಗೆ 8 ಲಕ್ಷಕ್ಕೂ ಮೀರಿ ವೀಕ್ಷಣೆಯನ್ನು ಪಡೆದಿದೆ. ಹಾಗೂ 2 ಲಕ್ಷಕ್ಕೂ ಹೆಚ್ಚು ಲೈಕ್ಸ್ ಗಳನ್ನು ಹೊಂದಿದೆ.