ತಮಾಷೆಗಾಗಿ ಒದ್ದ ಆನೆಯೊಂದಿಗೆ ಸೇಡು ತೀರಿಸಿಕೊಂಡ ಎಮ್ಮೆ! ವೈರಲ್ ವಿಡಿಯೋ ಒಮ್ಮೆ ನೋಡಿ

ನವ ದೆಹಲಿ:- ಸಾಮಾಜಿಕ ಮಾಧ್ಯಮ ಬಳಕೆದಾರರು ವನ್ಯಜೀವಿಗಳ ಫೋಟೋಗಳು ಮತ್ತು ವೀಡಿಯೊಗಳನ್ನು ತುಂಬಾ ಇಷ್ಟ ಪಡುತ್ತಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಬಬೂನ್ ತಮಾಷೆ ಮಾಡುವ ವಿಡಿಯೋ ವೈರಲ್ ಆಗಿತ್ತು. ಈಗ ಜನರು ಆನೆಯೊಂದು ಎಮ್ಮೆಯೊಂದಿಗೆ ತುಂಟಾಟ ಮಾಡುವ ವೀಡಿಯೊವನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಪ್ರಸ್ತುತ ವಿಡಿಯೋದಲ್ಲಿಯ ಆನೆಯು ಎಮ್ಮೆಯೊಂದಿಗೆ ಮೋಜು ಮಾಡುವ ವಿಡಿಯೋ ನೋಡುವ ಪ್ರತಿಯೊಬ್ಬರ ಮುಖದಲ್ಲೂ ಮಂದಹಾಸ ಮೂಡುತ್ತಿದೆ.

ಈ ವೀಡಿಯೋದಲ್ಲಿ, ಆನೆ ಮೋಜು ಮಾಡುತ್ತಲೇ ಎಮ್ಮೆಯನ್ನು ಒದೆಯುತ್ತದೆ ತದನಂತರ ಎಮ್ಮೆ ಏನು ಮಾಡುತ್ತದೆ ಎಂದು ನೋಡಿದ ನಂತರ ನಿಮ್ಮ ನಗು ನಿಲ್ಲುವುದಿಲ್ಲ. ನಿಮಗೆ ನಂಬಿಕೆ ಬರದಿದ್ದರೆ ಈ ವೀಡಿಯೊವನ್ನು ನೀವೇ ನೋಡಿ …

ಈ ವಿಡಿಯೋದಲ್ಲಿ ಮೋಜಿನ ನಡಿಗೆಯಲ್ಲಿ ಆನೆ ಎಮ್ಮೆಗಳ ಹತ್ತಿರ ಹೇಗೆ ಹೋಗುತ್ತದೆ, ತದನಂತರ ಎಮ್ಮೆಗೆ ಆನೆ ಹೇಗೆ ಮೋಜು ಮಾಡುತ್ತದೆ. ಆನೆ ಸಮೀಪ ಬಂದಾಗ ಅಲ್ಲಿದ್ದ ಒಂದು ಎಮ್ಮೆ ಆನೆಯ ಕಾಲಿಗೆ ತನ್ನ ಕೊಂಬಿನಿಂದ ಗುದ್ದುತ್ತದೆ. ತಕ್ಷಣ ಆನೆ ಎಮ್ಮೆಗೆ ಹೆದರಿ ಅದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಅಲ್ಲಿಂದ ಓಡಲು ಪ್ರಾರಂಭಿಸುತ್ತದೆ. ಇದನ್ನು ನೀವು ಈ ವಿಡಿಯೋ ದಲ್ಲಿ ನೋಡಬಹುದು. ಇದಕ್ಕೆ ಬಹಳಷ್ಟು ವೀಕ್ಷಣೆ ಹಾಗೂ ಕಾಮೆಂಟ್ ಗಳು ಬರುತ್ತಿವೆ.