Video; ಹುಲಿಯ ಹತ್ತಿರವೇ ತಿರುಗಾಡುತ್ತಿದ್ದ ಜಿಂಕೆಗಳನ್ನು ನೋಡಿ ಕ್ಯಾರೇ ಎನ್ನದ ಹುಲಿ!

ಕಾಡಿನ ಜಗತ್ತಿನಲ್ಲಿ ಕ್ರೂರ ಮತ್ತು ಶಕ್ತಿಯುತ ಪ್ರಾಣಿಗಳ ಆಟ ನಡೆಯುತ್ತದೆ. ಇಲ್ಲಿಯ ಬದುಕಿನ ನಿಯಮಗಳು ನಮ್ಮ ಬದುಕಿಗಿಂತಲೂ ಸಂಪೂರ್ಣವಾಗಿ ಭಿನ್ನವಾಗಿವೆ. ಇಲ್ಲಿ ವಾಸಿಸುವ ಕ್ರೂರ ಪ್ರಾಣಿಗಳು ಕೇವಲ ಮನರಂಜನೆಗಾಗಿ ಬೇಟಿಯನ್ನಾಡುವುದಿಲ್ಲ. ಅದರ ಹಿಂದೆ ಇರುವ ಒಂದೇ ಒಂದು ಕಾರಣವೇನೆಂದರೆ ತನ್ನ ಹಾಗು ತಮ್ಮ ಕುಟುಂಬದ ಹೊಟ್ಟೆ ತುಂಬಿಸಿಕೊಳ್ಳುವ ಉದ್ದೇಶ. ಒಂದು ವೇಳೆ ಬೇಟೆಯಾಡುವ ಪ್ರಾಣಿಯ ಹೊಟ್ಟೆ ತುಂಬಿದ್ದರೆ ಅದು ಬೇಟೆಯ ಕಡೆಗೆ ತಿರುಗಿಯೂ ನೋಡುವುದಿಲ್ಲ ಎನ್ನುವದಕ್ಕೆ ಉದಾಹರಣೆಯನ್ನು ನೀಡುವ ವಿಡಿಯೋ ಒಂದು ಸದ್ಯ ನೋಡಲು ಸಿಗುತ್ತಿದೆ.

ಹಾಗೆ ನೋಡಲಾಗಿ ಹುಲಿ ಬೇಟೆಯಾಡುವ ಆಕ್ರಮಕವಾದ ಪ್ರಾಣಿಯಾಗಿದೆ. ಇದು ಬೇಟೆಯಾಡುವಾಗ ತನ್ನ ಜಾಣತನದ ಜೊತೆಗೆ ಚಾಲಾಕಿತನವನ್ನು ಉಪಯೋಗ ಮಾಡುತ್ತದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಹುಲಿಯ ಈ ವಿಡಿಯೋ ನೋಡಿದ ನಂತರ ಆಶ್ಚರ್ಯವೆನಿಸದೆ ಇರದು. ಬೇಟೆಯಾಡುವ ಈ ಪ್ರಾಣಿಯನ್ನು ಮತ್ತು ಇದಕ್ಕೆ ಆಹಾರವಾಗುವ ಪ್ರಾಣಿಗಳು ಅಲ್ಲಿಯೇ ತಿರುಗಾಡುವುದನ್ನು ನೋಡಿದಾಗ ತುಂಬಾ ತುಂಬಾ ವಿಚಿತ್ರವೆನಿಸುತ್ತದೆ. ಕಾರಣ ಇಲ್ಲಿ ಹುಲಿರಾಯ ತುಂಬಾ ಆರಾಮಾಗಿ ರಿಲಾಕ್ಸ್ ಮೂಡ್ನಲ್ಲಿ ತಿರುಗಾಡುತ್ತಿದ್ದಾನೆ. ಅತ್ತ ಜಿಂಕೆಗಳು ಸಹ ಹೆದರದೇ ಇದೇ ರೀತಿ ಸಂಚಲನ ಮಾಡುತ್ತಿವೆ.

ನೋಡಿ ಹುಲಿ ಮತ್ತು ಜಿಂಕೆಗಳ ರಿಲ್ಯಾಕ್ಸ್ ಮೂಡ್ ನಲ್ಲಿಯ ವಿಡಿಯೋ…

ವೈರಲ್ ಆಗುತ್ತಿರುವ ಈ ವಿಡಿಯೋ ಯಾವುದೋ ಒಂದು ವೈಲ್ಡ್ ಲೈಫ್ ಸೆಂಚುರಿಯಲ್ಲಿಯದಿದೆ. ತಿರುಗಾಡುತ್ತಿರುವ ಹುಲಿಯ ಹಿಂದಿನ ಎರಡು ಜಿಂಕೆಗಳು ಹುಲಿಯನ್ನು ನೋಡುತ್ತಿವೆ. ಪ್ರಸ್ತುತ ವಿಡಿಯೋ ನೋಡಿ ಹುಲಿಯು ಜಿಂಕೆಗಳಿಗೆ ನೋಡಿಯೇ ಇಲ್ಲ ಎನ್ನಬಹುದು. ಆದರೆ ಹುಲಿಯ ಮನಸ್ಥಿತಿ ನೋಡಿದರೆ ಗೊತ್ತಾಗುತ್ತದೆ ಅದು ಬೇಟೆಯಾಡುವ ಮೂಡ್ನಲ್ಲಿಯೇ ಇಲ್ಲವೆಂದು ತಿಳಿದು ಬರುತ್ತದೆ.

ವೀಡಿಯೋ ನೋಡಿ

ಪ್ರಸ್ತುತ ವಿಡಿಯೋವನ್ನು ಐಎಫ್ಎಸ್ ಅಧಿಕಾರಿಯಾದ ರಮೇಶ್ ಪಾಂಡೆಯವರು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ನಿಜವಾಗಿಯೂ ಹುಲಿ ಉದ್ದೇಶವಿಲ್ಲದೆ ಯಾವುದೇ ಪ್ರಾಣಿಗಳ ಬೇಟೆ ಆಡುವುದೇ ಇಲ್ಲ ಎಂದು ಕ್ಯಾಪ್ಶನ್ ನೀಡಿದ್ದಾರೆ. ಪ್ರಸ್ತುತ ವಿಡಿಯೋವನ್ನು ಇಲ್ಲಿಯವರೆಗೆ 1.5 ಲಕ್ಷಕ್ಕೂ ಮೀರಿ ವೀಕ್ಷಿಸಲಾಗಿದೆ.