ಆಲಿಯಾ ಭಟ್ ಗೆ ಶಾಲೆಯ ಬಾತ್ ರೂಂನಲ್ಲ ಅದನ್ನು ಮಾಡುವ ಅಭ್ಯಾಸವಿತ್ತಂತೆ, ‘ಇಂದಿಗೂ ಸಹ ಅದನ್ನು ನೆನೆದರೆ ಮುಜುಗರ ವಾಗುತ್ತೆ’ -ಆಲಿಯಾ ಭಟ್ !!
ಬಾಲಿವುಡ್ ನಟಿ ಆಲಿಯಾ ಭಟ್ ಉತ್ಸಾಹಿ ನಟಿ. ಅವರು ತಮ್ಮ ಸೌಂದರ್ಯ ಮತ್ತು ನಟನೆಯ ಕೌಶಲ್ಯದಿಂದ ಲಕ್ಷಾಂತರ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ. ಇಂದು ಆಲಿಯಾ ಭಟ್ ಬಾಲಿವುಡ್ ನ ಟಾಪ್ ನಟಿಯರಲ್ಲಿ ಒಬ್ಬರು. ಜನರು ಯಾವಾಗಲೂ ಅವರ ಬಗ್ಗೆ ತಿಳಿದುಕೊಳ್ಳಲು ಕುತೂಹಲದಿಂದ ಇರುತ್ತಾರೆ.
ಅವರು ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಬಗ್ಗೆ ಯಾವಾಗಲೂ ಗಮನ ಹರಿಸುತ್ತಾರೆ. ಆಲಿಯಾಳ ಪ್ರತಿಯೊಂದು ಸಣ್ಣ ವಿಷಯವೂ ದೊಡ್ಡ ಸುದ್ದಿಯಾಗುತ್ತದೆ. ಅವರ ಜೀವನದ ಹಲವು ರೋಚಕ ಸಂಗತಿಗಳನ್ನು ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಿಗೂ ಇದೆ. ಇಂದು ನಾವು ಅವರ ಬಾಲ್ಯದಲ್ಲಿಯ ಒಂದು ರೋಚಕ ಸಂಗತಿಯ ಕುರಿತು ತಿಳಿದುಕೊಳ್ಳುವವರಿದ್ದೇವೆ.

ಆಲಿಯಾ ಭಟ್ ತಮ್ಮ ಶಾಲಾ ಶಿಕ್ಷಣವನ್ನು ಜಮ್ನಾಬಾಯಿ ಹಾನರ್ ನಲ್ಲಿ ಮಾಡಿದರು. ಇಂದು ನಾವು ಅವರ ಶಾಲಾ ಜೀವನದ ಕೆಲವು ವಿಷಯಗಳನ್ನು ತಿಳಿದುಕೊಳ್ಳಲಿದ್ದೇವೆ. ಅದು ನಿಮಗೂ ಆಶ್ಚರ್ಯವನ್ನುಂಟು ಮಾಡುತ್ತದೆ. ಕೆಲ ದಿನಗಳ ಹಿಂದೆ ಆಲಿಯಾ ಈ ವಿಷಯವನ್ನು ಬಹಿರಂಗಪಡಿಸಿದ್ದು, ತನ್ನ ಶಾಲಾ ಜೀವನ ಎಷ್ಟು ಮಜವಾಗಿತ್ತು ಎಂದು ಹೇಳಿದ್ದಾರೆ. ಶಾಲಾ ಜೀವನದಲ್ಲಿ ತುಂಬಾ ಮೋಜು ಮಾಡುತ್ತಿದ್ದೆಅಂತ ಹೇಳಿದ್ದಾರೆ.
ತನ್ನ ಶಾಲಾ ದಿನಗಳಲ್ಲಿ ಬಹಳಷ್ಟು ಸಲ ಶಿಕ್ಷಕರ ಕಡೆಯಿಂದ ಶಿಕ್ಷೆಗೆ ಗುರಿಯಾಗುತ್ತಿದ್ದರು ಅದಕ್ಕೆ ಕಾರಣ ವೆಂದರೆ ಶಾಲೆಯ ಬಾತ್ ರೂಮ್ ನಲ್ಲಿ ಮಲಗಿಕೊಳ್ಳುವದು. ಇವರಿಗೆ ಹೈಸ್ಕೂಲ್ ಕಲಿಯುವ ಸಮಯದಲ್ಲಿ ಇವರಿಗೆ ತುಂಬಾನೇ ನಿದ್ದೆ ಬರುತ್ತಿತ್ತು ಅಂತೆ ಹೀಗಾಗಿ ಅವರು ಕ್ಲಾಸ್ ನಲ್ಲಿ ಹೋಗದೆ ಎಷ್ಟೋ ಸಲ ಬಾತ್ ರೂಮ್ ನಲ್ಲಿ ಮಲಗಿಕೊಂಡು ಶಿಕ್ಷಕರ ಶಿಕ್ಷೆಗೆ ತುತ್ತಾಗಿದ್ದಾರೆ. ಬಾತ್ ರೂಮ್ ನಲ್ಲಿ ಮಲಗಿಕೊಳ್ಳಲು ಹಲವಾರು ಕಾರಣ ಗಳು ಅವರು ತಿಳಿಸಿದ್ದಾರೆ.
ಈ ಅಭ್ಯಾಸದಿಂದ ಅವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು . ಒಮ್ಮೆ ಅವರು ಶಾಲೆಯಲ್ಲಿ ಸ್ನಾನಗೃಹದಲ್ಲಿ ಮಲಗಿದ್ದಾಗ ಸಿಕ್ಕಿಬಿದ್ದರು ಮತ್ತು ನಂತರ ಅದಕ್ಕೆ ಶಿಕ್ಷೆ ವಿಧಿಸಲಾಗಿತು. ಕ್ಲಾಸ್ ಬಿಟ್ಟ ನಂತರ ಬಾತ್ ರೂಂನಲ್ಲಿ ಮಲಗುತ್ತಿದ್ದೆ ಎಂದು ಆಲಿಯಾ ಭಟ್ ಹೇಳಿದ್ದಾರೆ. ಒಂದು ದಿನ ಅವಳ ಕ್ಲಾಸ್ ಟೀಚರ್ ಅವಳ ಗೈರುಹಾಜರಿಯ ಕಾರಣ ಕೇಳಿದಾಗ ಅವಳು ಬಾತ್ ರೂಂನಲ್ಲಿ ಮಲಗಿದ್ದಾಳೆಂದು ತಿಳಿಯಿತು. ಈ ಕಾರಣಕ್ಕಾಗಿ ಅವರ ಕ್ಲಾಸ್ ಟೀಚರ್ , ಒಂದು ವಾರದವರೆಗೆ ತರಗತಿಯ ಹೊರಗಿನ ಡೆಸ್ಕ್ ಅನ್ನು ಸ್ವಚ್ಛಗೊಳಿಸಲು ಅವಳನ್ನು ಶಿಕ್ಷಿಸಿದರು.

ಈ ಕೆಟ್ಟ ಅಭ್ಯಾಸದಿಂದ ಆಲಿಯಾಗೆ ಸಾಕಷ್ಟು ತೊಂದರೆಯಾಗಿದೆ. ಇಂತಹ ಘಟನೆಯನ್ನು ನೆನೆದು ಅವರು ‘ಮಕ್ಕಳು ಶಾಲೆಯಲ್ಲಿ ಮಲಗಬಾರದು ನಿಮ್ಮ ನಿದ್ದೆಯನ್ನು ಮನೆಯಲ್ಲಿಯೇ ಪೂರ್ಣ ಮಾಡಿ ಶಾಲೆಗೆ ಹೋಗಿ’ ಎಂದು ಮಕ್ಕಳಿಗೆ ಸಲಹೇ ನೀಡಿದ್ದಾರೆ. ಆಲಿಯಾ ಇವರ ಚಿತ್ರಗಳ ಬಗ್ಗೆ ಹೇಳುವದಾದರೆ ಬ್ರಹ್ಮಾಸ್ತ್ರ ಚಿತ್ರ ತುಂಬಾನೇ ಹಿಟ್ ಆಗಿದೆ.