Dry Fruits For Diabetics: ಮಧುಮೇಹ ರೋಗಿಗಳು ಯಾವ ಡ್ರಾಯ್ ಫ್ರೂಟ್ಸ್ ತಿನ್ನಬೇಕು ಮತ್ತು ತಿನ್ನಬಾರದು? ವಿವರವಾಗಿ ತಿಳಿದುಕೊಳ್ಳಿ!!

ಮಧುಮೇಹ ರೋಗಿಯು ತನ್ನ ಆಹಾರದ ಬಗ್ಗೆ ಬಹಳ ಜಾಗರೂಕರಾಗಿರಬೇಕು. ನೀವು ಸರಿಯಾಗಿ ತಿನ್ನದಿದ್ದರೆ, ನಿಮ್ಮ ದೇಹವು ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ದೇಹವನ್ನು ಆರೋಗ್ಯಕರವಾಗಿ ಮತ್ತು ಫಿಟ್ ಆಗಿ ಇರಿಸಿಕೊಳ್ಳಲು ಡ್ರಾಯ್ ಫ್ರೂಟ್ಸ್ ತಿನ್ನಿ.

 

ಆದರೆ, ಎಲ್ಲಾ ಡ್ರಾಯ್ ಫ್ರೂಟ್ಸ್ ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿರುವುದಿಲ್ಲ. ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುವ ಅನೇಕ ಡ್ರಾಯ್ ಫ್ರೂಟ್ಸ ಗಳಿವೆ. ಮಧುಮೇಹ ರೋಗಿ ಯಾವ ಡ್ರಾಯ್ ಫ್ರೂಟ್ಸ್ ಗಳನ್ನು ತಿನ್ನಬೇಕು ಎಂಬುದು ತಿಳಿದುಕೊಳ್ಳೋಣ ಬನ್ನಿ .

ಮಧುಮೇಹದಲ್ಲಿ ಯಾವ ಡ್ರಾಯ್ ಫ್ರೂಟ್ಸ್ ಗಳನ್ನು ತಿನ್ನಬೇಕು?

ವಾಲ್ನ್ ಟ್ಸ್: ಮಧುಮೇಹದಲ್ಲಿ ವಾಲ್ನಟ್ಗಳನ್ನು ತಿನ್ನುವುದು ಪ್ರಯೋಜನಕಾರಿಯಾಗಿದೆ. ವಾಲ್‌ನಟ್ಸ್‌ನಲ್ಲಿ ವಿಟಮಿನ್ ಇ ಪ್ರಮಾಣ ಸಾಕಷ್ಟು ಮತ್ತು ಕಡಿಮೆ ಕ್ಯಾಲೋರಿಗಳಿರುತ್ತವೆ. ಇದು ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡುತ್ತದೆ. ಬೆರಳೆಣಿಕೆಯಷ್ಟು ವಾಲ್‌ನಟ್‌ಗಳನ್ನು ತಿನ್ನುವುದರಿಂದ ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಹಲವಾರು ಅಧ್ಯಯನಗಳಲ್ಲಿ ತಿಳಿದು ಬಂದಿದೆ.

ಬಾದಾಮಿ: ಮಧುಮೇಹಿಗಳು ಬಾದಾಮಿಯನ್ನು ತಿನ್ನಬೇಕು. ಬಾದಾಮಿ ತುಂಬಾ ಪ್ರಯೋಜನಕಾರಿ. ಇದು ದೇಹದಲ್ಲಿ ಇನ್ಸುಲಿನ್ ಅನ್ನು ಉತ್ಪಾದಿಸಲು ಕಾರಣವಾಗುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಧುಮೇಹಿ ರೋಗಿಯು ನೆನೆಸಿದ ಬಾದಾಮಿಯನ್ನು ಪ್ರತಿದಿನ ತಿನ್ನಬೇಕು.

ಗೋಡಂಬಿ ಬೀಜ(ಕಾಜೂ) : ಗೋಡಂಬಿಯನ್ನು ಬೀಜವನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯನ್ನು ಸಹ ನಿಯಂತ್ರಿಸಬಹುದು. ನಟ್ಸ್ ತಿನ್ನುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಣವಾಗುತ್ತದೆ. ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಮಧುಮೇಹಿಗಳು ಗೋಡಂಬಿ ಬೀಜವನ್ನು ದಿನಾಲೂ ತಿನ್ನಬೇಕು.

ಪಿಸ್ತಾ: ಮಧುಮೇಹದಲ್ಲೂ ಪಿಸ್ತಾ ತುಂಬಾ ಪ್ರಯೋಜನಕಾರಿ. ಮಧುಮೇಹಿಗಳು ಪ್ರತಿದಿನ ಪಿಸ್ತಾ ತಿನ್ನಬೇಕು. ಪಿಸ್ತಾದಲ್ಲಿ ಫೈಬರ್, ಪ್ರೋಟೀನ್, ವಿಟಮಿನ್ ಸಿ, ಸತು, ತಾಮ್ರ, ಪೊಟ್ಯಾಸಿಯಮ್, ಕಬ್ಬಿಣ, ಕ್ಯಾಲ್ಸಿಯಂ ಬಹಳಷ್ಟು ಪ್ರಮಾಣದಲ್ಲಿ ಇರುತ್ತವೆ. ಈ ಎಲ್ಲಾ ಅಂಶಗಳು ದೇಹವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.

ಮಧುಮೇಹ ಇರುವವರು ಯಾವ ಡ್ರಾಯ್ ಫ್ರೂಟ್ಸ್ ಗಳನ್ನು ತಿನ್ನಬಾರದು?

ಮಧುಮೇಹಿ ರೋಗಿಯು ಒಣದ್ರಾಕ್ಷಿಗಳನ್ನು ಹೆಚ್ಚು ತಿನ್ನಬಾರದು. ಒಣದ್ರಾಕ್ಷಿಯಲ್ಲಿನ ಸಿಹಿಯ ಕಾರಣದಿಂದಾಗಿ, ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಹೆಚ್ಚಾಗುವ ಅಪಾಯವಿರುತ್ತದೆ.. ಅಲ್ಲದೆ ಅಂಜೂರದ ಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸಬೇಕು.
ಖರ್ಜೂರವನ್ನು ಸಹ ಮಧುಮೇಹ ರೋಗಿಯು ತಿನ್ನಬಾರದು. ಈ ಎಲ್ಲಾ ಡ್ರಾಯ್ ಫ್ರೂಟ್ಸ್ ಗಳು ಸಿಹಿಯಾಗಿರುತ್ತವೆ. ಇವು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸಬಹುದು.

ಸೂಚನೆ: ಮೇಲಿನ ಎಲ್ಲಾ ಅಂಶಗಳನ್ನು ಇನ್ಫೋ ಟ್ರೆಂಡ್ ಕೇವಲ ಮಾಹಿತಿಯ ಸಲುವಾಗಿ ಮಾತ್ರ ತಿಳಿಸಲಾಗುತ್ತದೆ. ಆದ್ದರಿಂದ ಯಾವುದೇ ಚಿಕಿತ್ಸೆ, ಆಹಾರ ಮತ್ತು ಔಷಧವನ್ನು ತಜ್ಞರ ಸಲಹೆಯೊಂದಿಗೆ ತೆಗೆದುಕೊಳ್ಳಬೇಕು.