VIDEO : (Ptyas mucosa) ದಾಮಣಿ ಹಾವೆಂದು ಮಣ್ಯಾರ (common krait) ಜೊತೆಗೆ ಆಟ! ಅಜ್ಞಾನದಿಂದಾಗಿ ಸರ್ಪ ಸ್ನೇಹಿತನ ಸಾವು.
15 ವರ್ಷದಿಂದ ಸರ್ಪ ಸ್ನೇಹಿತನಾಗಿದ್ದ ವ್ಯಕ್ತಿಯೊಬ್ಬ ತನ್ನದೇ ಅಜ್ಞಾನದಿಂದಾಗಿ ಜೀವ ಕಳೆದುಕೊಂಡಿರುವ ಘಟನೆಯೊಂದು ಮಹಾರಾಷ್ಟ್ರದಿಂದ ವರದಿಯಾಗಿದೆ. ಪ್ರಸ್ತುತ ವ್ಯಕ್ತಿ 15 ವರ್ಷಗಳಿಂದ ಸರ್ಪ ಸ್ನೇಹಿತನಾಗಿ ಗುರುತಿಸಿಕೊಂಡಿದ್ದ. ತಾನು ಹಿಡಿದ ಹಾವು ಯಾವುದೆಂದು ತಿಳಿಯದೆ ಹಾವಿನ ಜೊತೆಗೆ ಆಡಿದ ಆಟಕ್ಕೆ ತಾನೇ ಬಲಿಯಾಗಿದ್ದಾನೆ.
ಪ್ರಸ್ತುತ ವರದಿಯ ಪ್ರಕಾರ, ಈ ಘಟನೆ ಮಹಾರಾಷ್ಟ್ರದ ವರ್ಧಾ ಜಿಲ್ಲೆಯಲ್ಲಿ ನಡೆದಿದೆ. ವ್ಯಕ್ತಿಯ ಹೆಸರು ಪ್ರಶಾಂತ್ ಕಾಶೀನಾಥ್ ಕಾಕಡೆ ಎಂದು ಗುರುತಿಸಲಾಗಿದೆ. ಈ ಘಟನೆ ಕಳೆದ ಗುರುವಾರ ಸಾಯಂಕಾಲದ ಸಮಯ ಘಟಿಸಿದೆ.
ವರ್ಧಾ ಜಿಲ್ಲೆಯ ಸಾನೇವಾಡಿ ಊರಿನ ಯುವಕ ಕಳೆದ 15 ವರ್ಷಗಳಿಂದ ಹಾವುಗಳನ್ನು ಹಿಡಿಯುವುದರಲ್ಲಿ ಪರಿಣಿತ ಎನಿಸಿಕೊಂಡಿದ್ದಾನೆ. ಯಾವುದೋ ಒಂದು ಮನೆಯಲ್ಲಿ ಕಂಡ ಹಾವನ್ನು ವಿಷರಹಿತ ಹಾವು ಎಂದು ತಿಳಿದು ಅದರ ಜೊತೆಗೆ ಆಟವಾಡಿದ್ದಾನೆ. ರೆಸ್ಕ್ಯೂ ಮಾಡುವ ಮೊದಲು ಪ್ರಸ್ತುತ ಹಾವು ಬಾಟಲಿಯಿಂದ ಹೊರಗೆ ಬಿದ್ದಿದೆ. ಆಗ ಆ ಹಾವು ವಿಷ ರಹಿತ ಹಾವು ಧಾಮನ್ ಅಥವಾ ಧಾಮಣಿ ಪ್ರಜಾತಿಗೆ ಸೇರಿದ ಹಾವು ಎಂದು ಪರಿಗಣಿಸಿ ಅದರ ಜೊತೆಗೆ ಆಟವಾಡಿದ್ದಾನೆ.
ಅದನ್ನು ಹಿಡಿದು ಕೊರಳಲ್ಲಿ ಹಾಕಿಕೊಳ್ಳುವುದು, ಜೇಬಿನಲ್ಲಿ ಇಟ್ಟುಕೊಳ್ಳುವುದು, ಕೈಮೇಲೆಲ್ಲ ಆಡಿಸಿಕೊಳ್ಳುವದು, ಹೀಗೆಲ್ಲ ಮಾಡುವಾಗ ಅದು ಎಡಗೈ ಬೆರಳಿಗೆ ಕಚ್ಚಿದೆ. ಇದು ಆತನ ಗಮನಕ್ಕೆ ಬಂದೇ ಇಲ್ಲ. ರಾತ್ರಿ ಹೊತ್ತಿಗೆ ಆಕಸ್ಮಿಕವಾಗಿ ಪ್ರಶಾಂತನ ಆರೋಗ್ಯದಲ್ಲಿ ಏರುಪೇರು ಕಂಡು ಬಂದಾಗ ಆತನಿಗೆ ಆಸ್ಪತ್ರೆಯಲ್ಲಿ ಭರ್ತಿ ಮಾಡಲಾಯಿತು. ಆಸ್ಪತ್ರೆಗಯಲ್ಲಿ ಭರ್ತಿ ಮಾಡಿದ ನಂತರ ಅಲ್ಲಿಯ ಡಾಕ್ಟರ್ ಗಳು ಆತ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ. ಹೀಗಾಗಿ ತನ್ನದೇ ಅಜ್ಞಾನದಿಂದಾಗಿ ಪ್ರಶಾಂತ್ ಗೆ ಹಾವಿನ ಜೊತೆಗಿನ ಸರಸ ತುಂಬಾ ದುಬಾರಿಯಾಗಿ ಪರಿಣಮಿಸಿದೆ.
ವೀಡಿಯೋ ನೋಡಿ
अमरावती : धामण समजून मण्यार सापाशी खेळत होता, सापांबद्दलच्या अज्ञानामुळे सर्प मित्राचा मृत्यू.#amravati pic.twitter.com/WAKXx9iZFf
— Maharashtra Times (@mataonline) October 1, 2022