ಈ ಬಾಂಗ್ಲಾದೇಶದ ಕ್ರಿಕೆಟಿಗನ ಹೆಂಡತಿಯ ಸೌಂದರ್ಯದ ಮುಂದೆ ಐಶ್ವರ್ಯ-ಕರೀನಾನೂ ಫೇಲ್!

ಬಾಂಗ್ಲಾದೇಶದ ಕ್ರಿಕೆಟಿಗರು ಅಂದಕೂಡಲೇ ನಮಗೆ ಕೆಲವೇ ಕೆಲವು ಹೆಸರುಗಳು ನೆನಪಿಗೆ ಬರುತ್ತವೆ. ಅದರಲ್ಲಿ , ಪ್ರತಿಯೊಬ್ಬರೂ ನೆನಪಿಸಿಕೊಳ್ಳುವಂತಹ ಹೆಸರೇ ಶಕೀಬ್ ಅಲ್ ಹಸನ್… ಶಕೀಬ್ ಬಾಂಗ್ಲಾದೇಶದ ಅತ್ಯುತ್ತಮ ಆಲ್‌ರೌಂಡರ್ ಆಟಗಾರ ಇದ್ದಾರೆ. ಬಾಂಗ್ಲಾದೇಶದ ಕೆಲವೇ ಅನುಭವಿ ಆಟಗಾರರಲ್ಲಿ ಇವರೂ ಒಬ್ಬರು. ಶಕೀಬ್ ಅವರ ಹೆಂಡತಿಯ ಸೌಂದರ್ಯದ ಬಗ್ಗೆ ಆಸಕ್ತಿದಾಯಕ ಚರ್ಚೆಗಳಿವೆ, ಏಕೆಂದರೆ ಅವರು ಕಾಣಲು ಅಷ್ಟೊಂದು ಸುಂದರವಾಗಿದ್ದಾರೆ.

ಶಕೀಬ್ ಅವರ ಪತ್ನಿ ಯಾರು?


ಶಕೀಬ್ ಅವರ ಹೆಂಡತಿಯ ಹೆಸರು ಉಮ್ಮಿ ಅಹ್ಮದ್ ಶಿಶಿರ್. ಬಾಂಗ್ಲಾದೇಶ ಮೂಲದ ಶಿಶಿರ್ ಅವರು ಅಮೇರಿಕಾದ ನಿವಾಸಿಯಾಗಿದ್ದಾರೆ. ಅವರು 10 ವರ್ಷದವಳಿದ್ದಾಗ ಆಕೆಯ ತಂದೆ-ತಾಯಿಯರು ಅವರನ್ನು ಕರೆದುಕೊಂಡು ಅಮೇರಿಕಾದಲ್ಲಿ ನೆಲೆಯಾದರು. ಅದರ ನಂತರ, ಅವಳು ಅಲ್ಲಿಯೇ ಬೆಳೆದಳು. ಯುನೈಟೆಡ್ ಸ್ಟೇಟ್ಸ್ನಲ್ಲಿ ಅವರು ಶಿಕ್ಷಣ ಪಡೆದರು. ಅವರು ವೃತ್ತಿಯಲ್ಲಿ ಎಂಜಿನಿಯರ್ ಮತ್ತು ಮಾಡೆಲಿಂಗ್ ಸಹ ಮಾಡುತ್ತಾರೆ.

ಶಕೀಬ್ ಅವರೊಂದಿಗೆ ಹೇಗೆ ಪರಿಚಯವಾಯಿತು? -.


ಕ್ರಿಕೆಟಿಗರಿಗೆ ಅಂತಹ ಸುಂದರ ಹೆಂಡತಿ ಸಿಗುವುದಿಲ್ಲ, ಇದರ ಹಿಂದೆ ಕೆಲವು ಆಸಕ್ತಿದಾಯಕ ಘಟನೆಗಳು ನಡೆದಿರುತ್ತವೆ. ಇದೇ ರೀತಿಯ ಆಸಕ್ತಿದಾಯಕ ವಿಷಯವು ಶಕೀಬ್‌ ಜೊತೆಗೂ ಸಂಭವಿಸಿದೆ. ಉಮ್ಮಿ ಒಮ್ಮೆ ರಜೆಗಾಗಿ ಇಂಗ್ಲೆಂಡ್‌ಗೆ ಹೋಗಿದ್ದರು. ಅದೇ ಸಮಯದಲ್ಲಿ ಕೌಂಟಿ ಕ್ರಿಕೆಟ್ ಆಡುವ ಸಲುವಾಗಿ ಶಕೀಬ್ ಕೂಡ ಇಂಗ್ಲೆಂಡ್ ಗೆ ಹೋಗಿದ್ದರು. ಇಬ್ಬರು ಒಂದೇ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು. ಅಲ್ಲಿಯೇ ಒಬ್ಬರಿಗೊಬ್ಬರು ಪರಿಚಯವಾದರು. ಶಕೀಬ್ ಆ ಸಮಯದಲ್ಲಿಯೂ ಬಾಂಗ್ಲಾದೇಶ ಕ್ರಿಕೇಟದ ಉತ್ತಮ ಆಟಗಾರರಾಗಿದ್ದರು. ಆದುದರಿಂದ ಅವರನ್ನು ಎಲ್ಲರೂ ಗುರುತಿಸುತ್ತಿದ್ದರು. ಇವರಿಬ್ಬರ ಈ ಭೇಟಿಯು ಮೊದಲು ಸ್ನೇಹದಲ್ಲಿ ತದನಂತರ ಪ್ರೀತಿಯಲ್ಲಿ ರೂಪಾಂತರವಾಯಿತು.

ಶಕೀಬ್ ಮತ್ತು ಉಮ್ಮಿಯ ವೈವಾಹಿಕ ಜೀವನ-

ಶಕೀಬ್ ಮತ್ತು ಉಮ್ಮಿಯವರ ಜೀವನದಲ್ಲಿ ಪ್ರೀತಿಯ ಹೂ ಅರಳಿತು. ಒಬ್ಬರಿಗೊಬ್ಬರು ತುಂಬಾ ಇಷ್ಟ ಪಡುತ್ತಿದ್ದರಿಂದ ಅವರು ಮದುವೆಯಾಗಲು ನಿರ್ಧರಿಸಿದರು. ಅವರಿಬ್ಬರು ದಿನಾಂಕ 12-12-12 ರಂದು ವಿವಾಹ ವಾದರು. ಇಬ್ಬರು ಇನ್ನೂ ಪರಸ್ಪರ ನಿಷ್ಠೆಯಿಂದ ಇದ್ದಾರೆ. ಈಗ ಅವರಿಗೆ ಇಬ್ಬರು ಮಕ್ಕಳು ಇದ್ದಾರೆ.

ತುಂಬಿದ ಸ್ಟೇಡಿಯಂನಲ್ಲಿ ಆಗಿತ್ತು ಮಾನಭಂಗ!

2014 ರಲ್ಲಿ ಉಮ್ಮಿಯವರ ಜೊತೆಗೆ ನಡೆದ ಘಟನೆ ಕೇಳಿದರೆ ಅದರ ಕುರಿತು ಎಂದು ಯಾರೂ ಊಹಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಬಾಂಗ್ಲಾದೇಶ ಮತ್ತು ಭಾರತ ನಡುವಿನ ಪಂದ್ಯ ಬಾಂಗ್ಲಾದೇಶದ ಮಿರ್ಪುರ್ ಕ್ರೀಡಾಂಗಣದಲ್ಲಿ ಪ್ರಾರಂಭವಾಗಿತ್ತು.. ಈ ಸಮಯದಲ್ಲಿ, ಗ್ಯಾಲರಿಯಲ್ಲಿ ಕುಳಿತಿದ್ದ ಶ್ರೀಮಂತ ಉದ್ಯಮಿಯ ಮಗನಿಂದ ಉಮ್ಮಿಗೆ ಕಿರುಕುಳ ನೀಡಲಾಯಿತಲ್ಲದೆ, ಆತ ಅಪಶಬ್ದಗಳನ್ನು ಕೂಡಾ ಉಪಯೋಗಿಸಿದ್ದನು. ಈ ಘಟನೆ ತಿಳಿದು ಅಲ್ಲಿಗೆ ಬಂದ ಶಕೀಬ್ ಆ ಉದ್ಯಮಿಯ ಮಗನನ್ನು ಹೊಡೆದನು. ಆನಂತರ ಶಕೀಬ್ ರನ್ನು ಬಂಧಿಸಲಾಯಿತು. ಸದ್ಯದಲ್ಲಿ ಶಕೀಬ್ ಮತ್ತು ಉಮ್ಮಿ ಈಗ ಸಂತೋಷದಿಂದ ಬದುಕುತ್ತಿದ್ದಾರೆ. ಉಮ್ಮಿ ಹೆಚ್ಚಿನ ಸಮಯ ಅಮೇರಿಕಾದಲ್ಲಿಯೇ ಕಳೆಯುತ್ತಾರೆ. ಶಕೀಬ್ ಕ್ರಿಕೆಟ್ ಪಂದ್ಯಗಳಿಗಾಗಿ ವಿಶ್ವದಾದ್ಯಂತ ಪ್ರವಾಸ ಮಾಡುತ್ತಾರೆ, ಆಗ ಕೂಡ ಮಕ್ಕಳೊಂದಿಗೆ ಉಮ್ಮಿಯವರು ಶಕೀಬ್ ನೊಂದಿದೆ ಪ್ರವಾಸ ಮಾಡುತ್ತಾರೆ.