😳😳 Video; ಸ್ವಾತಂತ್ರ್ಯೋತ್ಸವದ ಪ್ರಾಕ್ಟೀಸ್ ನಲ್ಲಿ ಕಳಪೆ ದರ್ಜೆಯ ಹರಿದ ಪ್ಯಾರಾಶೂಟ್ ಜೊತೆಗೆ ಜಂಪ್ ಮಾಡಿದ ನೈಜೀರಿಯನ್ ಸೈನಿಕರು..!

1 ಅಕ್ಟೋಬರ್ 2022 ರಲ್ಲಿ ಆಫ್ರಿಕಾ ಖಂಡದಲ್ಲಿಯ ದೇಶ ನೈಜೀರಿಯಾ ತನ್ನ ಸ್ವಾತಂತ್ರ್ಯೋತ್ಸವವನ್ನು ಆಚರಣೆ ಮಾಡುತ್ತಿತ್ತು. ರಾಜಧಾನಿ ಅಬುಝಾನಲ್ಲಿ ದೊಡ್ಡ ರೀತಿಯ ಕಾರ್ಯಕ್ರಮದ ತಯಾರಿ ನಡೆದಿತ್ತು. ಸೇನೆಯಲ್ಲಿಯ ಜವಾನರಾದ ಪ್ಯಾರಾಟ್ರೂಪರ್ಸ್ ಗಳು ಪ್ಯಾರಾಜಂಪ್ ಮಾಡಿ ದೇಶವಾಸಿಗಳಿಗೆ ತೋರಿಸುವದಿತ್ತು. ಹೀಗಾಗಿ ಜವಾನರು ಅದರದ್ದೇ ಪ್ರಾಕ್ಟೀಸ್ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಒಂದು ದುರ್ಘಟನೆಯೊಂದು ಅಲ್ಲಿ ಜರುಗಿದೆ. ಯಾವ ಕಾರಣದಿಂದಾಗಿ ಗೊತ್ತಿಲ್ಲ, ಆಕಸ್ಮಿಕವಾಗಿ ಅನೇಕ ಪ್ಯಾರಾಟ್ರೂಪರ್ಸ್ ಗಳು ತಮ್ಮ ಝೋನ್ ಬಿಟ್ಟು ಹೊರಗಡೆ ಎಲ್ಲಿ ಬೇಕಾದಲ್ಲಿ ಅಂದರೆ ರಸ್ತೆಯ ಮೇಲೆ, ಕಾರುಗಳ ಮೇಲೆ, ರೋಡ್ ಮೇಲೆ ಹಾಗೂ ಬಿಲ್ ಬೋರ್ಡ್ ಗಳ ಮೇಲೆ ಬಂದು ಬಿದ್ದಿದ್ದಾರೆ.

ಎಷ್ಟೋ ಜವಾನರ ಪ್ಯಾರಾಶೂಟ್ಗಳು ಮೇಲೆಯೇ ಹರಿದಿದ್ದವು. ಕಳಪೆ ದರ್ಜೆಯ ಪ್ಯಾರಾಶೂಟ್ ಗಳಿಂದಾಗಿ ಈ ಘಟನೆ ಸಂಭವಿಸಿತೇನೋ ಅಥವಾ ಮೊದಲೇ ಈ ಪ್ಯಾರಾಶೂಟ್ ಗಳು ಹರಿದಿದ್ದವೋ ಗೊತ್ತಾಗಿಲ್ಲ. ಇದರ ನಿರ್ದಿಷ್ಟ ಕಾರಣ ಪತ್ತೆ ಹಚ್ಚಬೇಕಾಗಿದೆ. ಒಂದು ಈ ಜವಾನರಿಗೆ ತಪ್ಪಾದ ಸ್ಥಳದಲ್ಲಿ ಡ್ರಾಪ್ ಮಾಡಿರಬೇಕು, ಎರಡನೆಯ ಕಾರಣ ಗಾಳಿಯ ವೇಗ, ಮತ್ತು ಮೂರನೆಯ ಕಾರಣ ಇವರಿಗೆ ತಮ್ಮ ಲ್ಯಾಂಡಿಂಗ್ ಝೋನ್ ಸರಿಯಾಗಿ ಗೊತ್ತಿಲ್ಲದೆ ಇರುವದು ಎನಿಸುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಈ ವಿಡಿಯೋ ತುಂಬಾ ವೈರಲ್ ಆಗುತ್ತಿದೆ. ಕೆಲವು ಜನರಂತೂ ರಶಿಯನ್ ಟ್ರೇನಿಂಗ್ ನಿಂದಾಗಿ ಈ ಅವಘಡ ಸಂಭವಿಸಿದೆ ಎಂದಿದ್ದಾರೆ. ಕೆಲವರು ಈ ಸೈನಿಕರನ್ನು ಹೊಗಳಿಯೇ ಹೊಗಳುತ್ತಿದ್ದಾರೆ. ಕಾರಣ ಇಂತಹ ಕಳಪೆ ದರ್ಜೆಯ ಪ್ಯಾರಾಶೂಟ್ ಗಳನ್ನು ಉಪಯೋಗಿಸಿ ಜನರಿಗೆ ಯಾವುದೇ ರೀತಿಯ ಹಾನಿಯಾಗದಂತೆ ಕಾಳಜಿ ವಹಿಸಿ ಸುರಕ್ಷಿತವಾಗಿ ಲ್ಯಾಂಡ್ ಮಾಡುವ ಪ್ರಯತ್ನ ಮಾಡುತ್ತಿದ್ದರು.

ಪ್ರಸ್ತುತ ವಿಡಿಯೋದಲ್ಲಿ ನೀವು ನೋಡಬಹುದಾಗಿದೆ ಹರಿದ ಪ್ಯಾರಾಶೂಟ್ಗಳನ್ನು ತೆಗೆದುಕೊಂಡು ಯಾವ ರೀತಿ ಈ ನೈಜೀರಿಯಾ ಸೈನಿಕರು ಸಿಕ್ಕ ಸಿಕ್ಕಲ್ಲಿ ಇಳಿಯುತ್ತಿದ್ದಾರೆ. ಕಾರ್ ಪಾರ್ಕಿಂಗ್ ನಲ್ಲಿ ಇಳಿದಿರುವುದನ್ನು ನೋಡಿದರೆ ಹಾಗೆಯೇ ಅನಿಸುತ್ತದೆ.

ಕಾರಿನ ಮೇಲೆ ಬಿದ್ದ ನಂತರ ಸೈನಿಕ ಮತ್ತೆ ರೋಡ್ ಮೇಲೆ ಬಿದ್ದಿದ್ದಾನೆ. ಆತನಿಗೆ ಗಾಯವಾಗಿದೆ ಎಂಬುದು ನೋಡಿದ ನಂತರ ಗೊತ್ತಾಗುತ್ತದೆ. ಮತ್ತು ಆತನ ಪ್ಯಾರಾಶ್ಯೂಟ್ ಮೊದಲೇ ಹರಿದು ಹೋಗಿತ್ತು.

ಈ ಚಿತ್ರದಲ್ಲಂತೂ ಅನೇಕ ಪ್ಯಾರಟ್ರೂಪರ್ಸ್ ಗಳು ಒಂದು ಬಿಲ್ ಬೋರ್ಡ್ ಮೇಲೆ ಸುತ್ತಾಡುತ್ತಿದ್ದಾರೆ. ಒಬ್ಬನಂತೂ ಬಿಲ್ ಬೋರ್ಡ್ ಗೆ ಢಿಕ್ಕಿ ಸಹ ಹೊಡೆದಿದ್ದಾನೆ.

ವೀಡಿಯೋ ನೋಡಿ

ಕೆಲವರಂತೂ ಮರದ ಮೇಲೆ ಸಿಕ್ಕಿಹಾಕಿಕೊಂಡಿದ್ದಾರೆ. ಆತನಿಗೆ ಸ್ವಲ್ಪ ಚಿಕ್ಕ ಪುಟ್ಟ ಗಾಯಗಳು ಆಗಿವೆ. ಒಟ್ಟಿನಲ್ಲಿ ಈ ಎಲ್ಲ ಸೈನಿಕರು ಜನರ ಕಾಳಜಿಯನ್ನು ತೆಗೆದುಕೊಂಡು ಜನರಿಗೆ ಯಾವುದೇ ರೀತಿಯ ಹಾನಿಯಾಗದಂತೆ ಭೂಮಿಗೆ ಇಳಿಯುವ ಪ್ರಯತ್ನ ಮಾಡಿದ್ದಾರೆ.