ಹುಡುಗಿಯರ ಮುಂದೆ ಸ್ಟಂಟ್ ಮಾಡಿ ಹೀರೊ ಆಗಲು ಹೋದ ಹುಡುಗನ ಫಜೀತಿಯ ವಿಡಿಯೋ ಆಯ್ತು ವೈರಲ್!
ಹುಡುಗಿಯರನ್ನು ನೋಡಿದ ನಂತರ ಹುಡುಗರ ದೇಹದಲ್ಲಿ ಅದ್ಯಾವ ಭೂತ ಸೇರಿಕೊಳ್ಳುತ್ತದೆ ಗೊತ್ತಿಲ್ಲ. ಆನಂತರ ಅವರು ಮಾಡುವ ಆಟ ಅಥವಾ ತೆಗೆದುಕೊಳ್ಳುವ ರಿಸ್ಕ್ ಎಂಥ ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ ಗೊತ್ತಾಗುವುದಿಲ್ಲ. ಸದ್ಯ ಇದೇ ರೀತಿಯ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ನೋಡಲು ಸಿಗುತ್ತಿದೆ.
ಪ್ರಸ್ತುತ ವಿಡಿಯೋದಲ್ಲಿ ಇಬ್ಬರು ಪಡ್ಡೆ ಹುಡುಗರು ಬೈಕ್ ಮೇಲೆ ಮರೆಯುತ್ತಾ ವೇಗದಲ್ಲಿ ಹೊರಟಿದ್ದಾರೆ. ಸ್ವಲ್ಪ ಸಮಯ ಚಲಿಸಿದ ನಂತರ ಎದುರುಗಡೆ ಕಾಲೇಜ್ ಹುಡುಗಿಯರು ರಸ್ತೆಯ ಬದಿಗೆ ನಿಂತದ್ದು ಕಂಡು ಬರುತ್ತದೆ. ರಸ್ತೆಯ ಬದಿ ನಿಂತ ಆ ಹುಡುಗಿಯರನ್ನು ಇಂಪ್ರೆಸ್ ಮಾಡಲು ತಕ್ಷಣ ಹಿಂದೆ ಕುಳಿತ ಹುಡುಗ ಆಕ್ಟಿವ್ ಆಗಿ ಬೈಕ್ ಮೇಲೆ ಎದ್ದು ನಿಂತು ಸ್ಟಂಟ್ ಮಾಡಲು ಮುಂದಾಗುತ್ತಾನೆ. ಅಷ್ಟರಲ್ಲೇ ಒಂದು ಅವಘಡ ಸಂಭವಿಸುತ್ತದೆ. ಎದ್ದು ನಿಲ್ಲುವ ಹುಡುಗನ ಬ್ಯಾಲೆನ್ಸ್ ತಪ್ಪುತ್ತದೆ ಹಾಗೂ ಕ್ಷಣದಲ್ಲಿ ಬೈಕ್ ಮೇಲಿಂದ ನೆಲಕ್ಕೆ ಕುಕ್ಕುರಿಸಿ ಬೀಳಲು ಸಮಯವೇ ತಾಗುವದಿಲ್ಲ. ಈ ದೃಶ್ಯ ನೋಡಿದಾಗ ಇಂಥ ಮಕ್ಕಳು ತಂದೆ-ತಾಯಿಗೂ ಎಷ್ಟೊಂದು ಕಷ್ಟ ನೀಡುತ್ತಾರೆ ಎಂಬ ಭಾವನೆ ಮನದಲ್ಲಿ ಮೂಡುತ್ತದೆ.
ಮೀಡಿಯಾ ರಿಪೋರ್ಟ್ ಪ್ರಕಾರ, ಈ ಘಟನೆ ತಮಿಳುನಾಡಿನ ಕುರೈಕುಡಿಯ ಅಲಗಪ್ಪಾ ಯೂನಿವರ್ಸಿಟಿ ಹತ್ತಿರ ಘಟಿಸಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನೋಡಿ ಈ ವಿಡಿಯೋ…
ಈ ವೀಡಿಯೋವನ್ನು ಯೂಟ್ಯೂಬ್ ನಲ್ಲಿ Trend Talks ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದ್ದು ಸಾವಿರಾರು ಜನರು ನೋಡಿ ಅನೇಕ ರೀತಿಯ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.